ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು INDIA ಒಕ್ಕೂಟ ರಚಿಸಿದೆ: ಡಿಎಂಕೆ ನಾಯಕ ಪೊನ್ಮುಡಿ ವಿವಾದಾತ್ಮಕ ಹೇಳಿಕೆ

Public TV
3 Min Read

ನವದೆಹಲಿ: ಸನಾತನ ಧರ್ಮದ (Sanatana Dharma Row) ತತ್ವಗಳ ವಿರುದ್ಧ ಹೋರಾಡಲು ಇಂಡಿಯಾ (I.N.D.I.A) ಒಕ್ಕೂಟ ರಚಿಸಿದೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸನಾತನ ಧರ್ಮದ ವಿರುದ್ಧದ ಹೋರಾಟದಲ್ಲಿ 26 ಪಕ್ಷಗಳು ಒಂದಾಗಿವೆ. ಸನಾತನ ಧರ್ಮದ ವಿರುದ್ಧ ಹೋರಾಡಲು ರಾಜಕೀಯ ಶಕ್ತಿ ಬೇಕು. ಅದಕ್ಕಾಗಿ ಐಎನ್‌ಡಿಐಎ ಒಕ್ಕೂಟ ರಚಿಸಿದೆ ಎಂದು ಡಿಎಂಕೆ ಸರ್ಕಾರದ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ (K.Ponmudy) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸನಾತನ ಧರ್ಮದ ವಿರುದ್ಧ ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್, ಎ. ರಾಜಾ ನೀಡಿರುವ ಹೇಳಿಕೆಯಿಂದ ಐಎನ್‌ಡಿಐಎ ಒಕ್ಕೂಟದ ನಾಯಕರು ಅಂತರ ಕಾಯ್ದುಕೊಳ್ಳುತ್ತಿರುವ ಹೊತ್ತಲ್ಲಿ ಕೆ. ಪೊನ್ಮುಡಿ ಐಎನ್‌ಡಿಐಎ ಒಕ್ಕೂಟವನ್ನು ವಿವಾದದ ಒಳಗೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ.

ಸನಾತನ ಧರ್ಮ ನಿರ್ಮೂಲನೆ ಕಾರ್ಯಕ್ರದಲ್ಲಿ ಕೆ. ಪೊನ್ಮುಡಿ ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು, ವೀಡಿಯೋದಲ್ಲಿ ಈ ಸಮ್ಮೇಳನದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ ಸಂಘಟಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಸನಾತನ ಧರ್ಮವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಿ ಎಂದು ಕರೆದಿದ್ದಕ್ಕಾಗಿ ನಾನು ಸಂಘಟಕರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮತ್ತೊಂದು ವಿವಾದ – ಸನಾತನ ಧರ್ಮವನ್ನ HIV, ಕುಷ್ಠರೋಗಕ್ಕೆ ಹೋಲಿಸಿದ ಸಂಸದ ಎ. ರಾಜಾ

ಸನಾತನ ಧರ್ಮ ನಿರ್ಮೂಲನೆ ಮಾಡುವುದು ನಮ್ಮ ಮೊದಲ ಕೆಲಸವಾಗಬೇಕು. ಸನಾತನಂ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಸನಾತನಂ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಉದಯನಿಧಿ ಸ್ಟಾಲಿನ್ ಮಾತು ಉಲ್ಲೇಖಿಸಿ, ಸನಾತನ ಧರ್ಮವನ್ನು ಅನುಸರಿಸುತ್ತಿರುವ ಜನರ “ಜನಾಂಗೀಯ ಹತ್ಯೆಗೆ ಎಂದಿಗೂ ಕರೆ ನೀಡಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಡಿಎಂಕೆ ನಾಯಕನ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda) ತಿರುಗೇಟು ನೀಡಿದ್ದಾರೆ. ಐಎನ್‌ಡಿಐಎ ಒಕ್ಕೂಟ ಪಾಲುದಾರಾದ ಉದಯನಿಧಿ ಸ್ಟಾಲಿನ್ (Udayanidhi Stalin), ಪ್ರಿಯಾಂಕಾ ಖರ್ಗೆ (Priyank Kharge) ಹೇಳಿಕೆ ‌ನೀಡಿದರು. ಸತಾತನ ಧರ್ಮದ ವಿರುದ್ಧ ಹೋರಾಡಲು ಒಕ್ಕೂಟ ರಚಿಸಿದೆ ಎಂದು ಕೆ. ಪೊನ್ಮುಡಿ ಹೇಳಿದ್ದಾರೆ. ಇದು ಕಾಂಗ್ರೆಸ್ (Congress), ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಅವರ ತಂತ್ರದ ಭಾಗವಾಗಿದೆ. ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ಮತ್ತು ಐಎನ್‌ಡಿಐಎ ಒಕ್ಕೂಟ ತಮ್ಮ ಅಭಿಪ್ರಾಯ ಹೇಳಬೇಕು ಎಂದು ನಡ್ಡಾ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ ತಲೆ ತಂದವರಿಗೆ 10 ಕೋಟಿ ಬಹುಮಾನ; ಅಯೋಧ್ಯೆಯ ಹಿಂದೂ ಧರ್ಮದರ್ಶಿ ಘೋಷಣೆ

ಯಾವುದೇ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲು ಸಂವಿಧಾನದಲ್ಲಿ ಹಕ್ಕು ಇದೆಯೇ ಎಂದು ಅವರಿಗೆ ತಿಳಿಸಬೇಕು. ಐಎನ್‌ಡಿಐಎ ಮೈತ್ರಿಕೂಟ, ಕಾಂಗ್ರೆಸ್, ಸೋನಿಯಾ ಮತ್ತು ರಾಹುಲ್ ಸನಾತನ ಧರ್ಮದ ವಿರುದ್ಧ ದ್ವೇಷದ ಸರಕುಗಳನ್ನು ಪ್ರೀತಿಯ ಅಂಗಡಿಯ ಹೆಸರಿನಲ್ಲಿ ಏಕೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಬೇಕು. ಈ ದ್ವೇಷದ ಮೆಗಾ ಮಾಲ್ ಕೇವಲ ಅಧಿಕಾರಕ್ಕಾಗಿ, ಒಡೆದು ಆಳುವುದಾಗಿದೆ ಎಂದು ಟಾಂಗ್‌ ಕೊಟ್ಟಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್