ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮಮ್ಮಿ – ನಿಮಿಷಾ ಪ್ರಿಯಾ ಬಿಡುಗಡೆಗೆ ಮನವಿ ಮಾಡಲು ಯೆಮನ್‍ಗೆ ಬಂದ ಪುತ್ರಿ

Public TV
2 Min Read
  • 10 ವರ್ಷದಿಂದ ತಾಯಿ ಮುಖ ನೋಡದ 13 ವರ್ಷದ ಮಿಶೆಲ್‌

ಸನಾ: ಯೆಮೆನ್‌ನಲ್ಲಿ (Yemen) ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆಗಾಗಿ ಮಗಳು ಹಾಗೂ ಪತಿ ಮನವಿ ಮಾಡಲು ಯೆಮನ್‌ಗೆ ತೆರಳಿದ್ದಾರೆ. ಈ ಬಗ್ಗೆ 13 ವರ್ಷದ ಮಗಳು ಮಿಶೆಲ್ ವಿಡಿಯೋ ಹಂಚಿಕೊಂಡಿದ್ದಾಳೆ. ವಿಡಿಯೋದಲ್ಲಿ ‘ನಾನು ನಿನ್ನನ್ನು ಪ್ರೀತಿಸುತ್ತೇನೆ ಮಮ್ಮಿ, ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆʼ ಎಂದು ಭಾವುಕಳಾಗಿ ಹೇಳಿಕೊಂಡಿದ್ದಾಳೆ.

ನಿಮಿಷಾ ಪ್ರಿಯಾಗೆ (Nimisha Priya) ವಿಧಿಸಲಾಗಿದ್ದ ಮರಣದಂಡನೆ ರದ್ದಾಗಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ನಿಮಿಷಾ ಪ್ರಿಯಾ ಪತಿ ಟಾಮಿ ಥಾಮಸ್ ಹಾಗೂ ಮಗಳು ಗ್ಲೋಬಲ್ ಪೀಸ್ ಇನಿಶಿಯೇಟಿವ್ ಸಂಸ್ಥಾಪಕ ಡಾ. ಕೆ.ಎ. ಪಾಲ್ ಅವರನ್ನು ಭೇಟಿಯಾಗಿ, ಬಿಡುಗಡೆಗೆ ಮನವಿ ಮಾಡಲಿದ್ದಾರೆ. ಇದನ್ನೂ ಓದಿ: ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷ ಪ್ರಿಯಾಗೆ ಮರಣದಂಡನೆ ರದ್ದು?

ನಿಮಿಷಾ ಪ್ರಿಯಾ ಹಲವಾರು ವರ್ಷಗಳಿಂದ ಯೆಮೆನ್‌ನಲ್ಲಿ ಜೈಲಿನಲ್ಲಿದ್ದಾರೆ. ಅವರ ಮಗಳು ಒಂದು ದಶಕದಿಂದ ಅವರನ್ನು ನೋಡಿಲ್ಲ. ಇನ್ನೂ ಬಾಲಕಿ, ಮಲಯಾಳಂ ಮತ್ತು ಇಂಗ್ಲಿಷ್ ಎರಡರಲ್ಲೂ ಮಾಡಿದ ಭಾವನಾತ್ಮಕ ಮನವಿಯಲ್ಲಿ, ʻನಾನು ನಿನ್ನನ್ನು ಪ್ರೀತಿಸುತ್ತೇನೆ ಮಮ್ಮಿ. ದಯವಿಟ್ಟು ನನ್ನ ತಾಯಿಯನ್ನು ಮನೆಗೆ ಕರೆತರಲು ಸಹಾಯ ಮಾಡಿ. ನಾನು ಅವರನ್ನು ನೋಡಲು ಬಯಸುತ್ತೇನೆ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮಮ್ಮಿ ಎಂದು ಹೇಳಿಕೊಂಡಿದ್ದಾಳೆ. ಇದರ ನಡುವೆ ನಿಮಿಷಾ ಅವರ ಪತಿ ಟಾಮಿ ಥಾಮಸ್ ದಯವಿಟ್ಟು ನನ್ನ ಪತ್ನಿ ನಿಮಿಷಾ ಪ್ರಿಯಾಳನ್ನು ಉಳಿಸಿ. ಅವಳು ಮತ್ತೆ ಊರಿಗೆ ವಾಪಸ್‌ ಆಗಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದರ ನಡುವೆ ನಿಮಿಷಾ ಪ್ರಿಯಾಳ ಕುಟುಂಬದ ಪರವಾಗಿ ಯೆಮೆನ್ ಅಧಿಕಾರಿಗಳು ಹಾಗೂ ಸಂತ್ರಸ್ತ ತಲಾಲ್ ಕುಟುಂಬಕ್ಕೆ ಧನ್ಯವಾದ ತಿಳಿಸಿ ಡಾ.ಕೆ.ಎ.ಪೌಲ್ ಮಾತನಾಡಿದ್ದಾರೆ. ಈ ವೇಳೆ, ನಿಮಿಷಾ ಪ್ರಿಯಾಗೆ ಇರುವ ಏಕೈಕ ಮಗಳು ಮಿಶೆಲ್. ಆಕೆ ಕಳೆದ 10 ವರ್ಷಗಳಿಂದ ಅಮ್ಮನನ್ನೇ ನೋಡಿಲ್ಲ. ನಿಮಿಷಾ ಪ್ರಿಯಾಳನ್ನು ಇಂದಲ್ಲ, ನಾಳೆ ಬಿಡುಗಡೆ ಮಾಡಿದರೆ ತುಂಬಾ ಕೃತಜ್ಞರಾಗಿರುವುದಾಗಿ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇದು ಸೂಕ್ಷ್ಮ ವಿಷಯ, ಭಾರತ ಅಗತ್ಯವಿರುವ ಎಲ್ಲಾ ಸಹಾಯ ನೀಡುತ್ತಿದೆ: ಕೇರಳ ನರ್ಸ್‌ ಪ್ರಕರಣದ ಬಗ್ಗೆ MEA ಪ್ರತಿಕ್ರಿಯೆ

Share This Article