ನಾನು ದ್ವೇಷಿಸುತ್ತಿದ್ದ ಕ್ರಿಕೆಟ್ ಎಲ್ಲವನ್ನೂ ಕಲಿಸಿಕೊಟ್ಟಿತು: ಯುವಿ

Public TV
1 Min Read

– ಹೇಗೆ ಧೂಳು ಕೊಡವಿ ಎದ್ದೇಳಬೇಕೆಂದು ಕಲಿಸಿದ್ದು ಕ್ರಿಕೆಟ್
– ವಿದಾಯದ ವೇಳೆ ಭಾವನಾತ್ಮಕ ಮಾತು

ಮುಂಬೈ: ನಾನು ದ್ವೇಷಿಸುತ್ತಿದ್ದ ಕ್ರಿಕೆಟ್ ಎಲ್ಲವನ್ನೂ ಕಲಿಸಿಕೊಟ್ಟಿತು ಎಂದು ಸಿಕ್ಸರ್‍ಗಳ ಸರದಾರ ಯುವರಾಜ್ ಸಿಂಗ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯದ ನೀಡಿದ ಕುರಿತು ಮಾತನಾಡಿದ ಯುವಿ, ವಿಶ್ವದಾದ್ಯಂತ ಇರುವ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ಬೆಂಬಲಕ್ಕೆ ನಿಂತು, ಮಾರ್ಗದರ್ಶನ ನೀಡಿದ ತಾಯಿ, ತಂದೆ, ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಆತ್ಮೀಯರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಇದನ್ನೂ ಓದಿ: ಸಿಕ್ಸರ್‌ಗಳ ಸರದಾರ, ಕ್ಯಾನ್ಸರ್ ಗೆದ್ದ ಯುವಿ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ

25 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಸುಮಾರು 17 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಒಳಗೆ, ಹೊರಗೆ ಇದ್ದ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಹೇಗೆ ಹೋರಾಡಬೇಕು, ಹೇಗೆ ಬೀಳಬೇಕು, ಹೇಗೆ ಧೂಳು ಕೊಡವಿಕೊಳ್ಳಬೇಕು ಮತ್ತು ಪುನಃ ಎದ್ದು ಮುನ್ನಡೆಯಬೇಕು ಎನ್ನುವುದನ್ನು ಕ್ರಿಕೆಟ್ ಕಲಿಸಿಕೊಟ್ಟಿದೆ ಎಂದು ಹೇಳಿದರು. ಇದನ್ನೂ ಓದಿ: ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

ಟೀಂ ಇಂಡಿಯಾ ಪರ 400 ಪಂದ್ಯಗಳನ್ನು ಆಡಿದ ನಾನು ಅದೃಷ್ಟಶಾಲಿ. ನಾನು ಆಟ ಆಡಲು ಆರಂಭಿಸಿದಾಗ ಇದನ್ನು ಊಹಿಸಿರಲಿಲ್ಲ. ಈ ಆಟದ ಜೊತೆಗೆ ನಾನು ಪ್ರೀತಿ ಮತ್ತು ದ್ವೇಷದ ಸಂಬಂಧವನ್ನು ಹೊಂದಿದ್ದೇನೆ. 28 ವರ್ಷಗಳ ಬಳಿಕ ಸೃಷ್ಟಿಯಾದ ಇತಿಹಾಸದ ಭಾಗವಾಗಿದ್ದೇನೆ. ಇದಕ್ಕಿಂತ ಹೆಚ್ಚಿನದನ್ನು ನಾನು ಕೇಳಬಹುದು ಹೇಳಿದರು.

ಕ್ಯಾನ್ಸರ್ ಚಿಕಿತ್ಸೆ ನೀಡಿದ ನನ್ನ ವೈದ್ಯರಿಗೆ ಧನ್ಯವಾದಗಳು. ಕ್ಯಾನ್ಸರ್ ರೋಗಿಗಳ ಬಗ್ಗೆ ಕೈಗೊಳ್ಳುತ್ತಿರುವ ಕಾರ್ಯವನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *