ಅವರ ಬತ್ತಳಿಕೆಯಲ್ಲಿ ಏನಿದೆ ಎಂದು ನಮಗೆ ಗೊತ್ತಿದೆ: ಡಿಕೆಶಿ

Public TV
1 Min Read

ಬೆಂಗಳೂರು: ಕುಮಾರಸ್ವಾಮಿ (HD Kumarswamy) ಹಾಗೂ ಅಮಿತ್ ಶಾ (Amit Shah) ಭೇಟಿ ವೇಳೆ ಅವರು ಏನು ಚರ್ಚೆ ಮಾಡಿದ್ರು ಎಂಬ ಅರಿವಿದೆ. ಎಲ್ಲಾ ಪಕ್ಷಗಳ ಮೇಲೆ ನಮಗೆ ನಿಗಾ ಇದೆ. ನಮ್ಮ ಬತ್ತಳಿಕೆಯಲ್ಲಿ ಏನಿದೆ ಎಂದು ಅವರಿಗೆ ಗೊತ್ತಿದೆ, ಅವರ ಬತ್ತಳಿಕೆಯಲ್ಲಿ ಏನಿದೆ ಎಂದು ನಮಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನ ಕರೆಯಲಾಗಿದೆ. ಸೋಮವಾರ ಅಧಿವೇಶನದ ನಂತರ ಖಾಸಗಿ ಹೋಟೆಲ್‍ನಲ್ಲಿ ಸಭೆ ಕರೆಯಲಾಗಿದೆ. ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲಾ ಶಾಸಕರನ್ನ ಸಂಪರ್ಕ ಮಾಡುತ್ತೇವೆ. ಯಾರೆಲ್ಲ ಸಂಪರ್ಕದಲ್ಲಿ ಇದ್ದಾರೆ ಎಂಬ ಬಗ್ಗೆ ಯಾವುದನ್ನೂ ಗುಟ್ಟು ಬಿಟ್ಟು ಕೊಡಲ್ಲ. ಅವರ ಹೆಸರು ತೆಗೆದುಕೊಳ್ಳಲ್ಲ ಎಂದು ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿ ಅಮ್ಮಾ.. ತಾಯಿ.. ಅಂತ ಬೇಡುವ ಸ್ಥಿತಿ ಉದ್ಭವಿಸಿದೆ: ಹೆಚ್‌ಡಿಕೆ ಲೇವಡಿ

ವಿಧಾನಸಭೆಯಲ್ಲಿ ಬಿಜೆಪಿಯವರು ಎಲ್ಲಿ ನಿರ್ಣಯ ಮಂಡಿಸಿದ್ರು? ಹೌಸ್ ಆರ್ಡರ್‌ನಲ್ಲಿ ಇರಲಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಒಟ್ಟಿಗೆ ಹೋರಾಟ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ನಮ್ಮ ತೆರಿಗೆ, ನಮ್ಮ ಹಕ್ಕು, ನಮ್ಮ ಪಾಲು ಅಷ್ಟೇ ಎಂದು ಬೊಮ್ಮಾಯಿ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ SCSP-TSP ಹಣ ಬಳಕೆ – ಸರ್ಕಾರದಿಂದ ಮಾಹಿತಿ

Share This Article