ಯಾವುದೇ ಹಾಡನ್ನು ಕದ್ದಿಲ್ಲ, ಕಾನೂನು ಸಮರಕ್ಕೆ ಸಿದ್ಧ: ಚಂದನ್‌ ಶೆಟ್ಟಿ

By
1 Min Read

ಹುಬ್ಬಳ್ಳಿ: ನಾನು ಯಾವುದೇ ಹಾಡು, ಹಾಡಿನ ಸಾಲನ್ನು ಕದ್ದಿಲ್ಲ ಎಂದು ಗಾಯಕ ಚಂದನ್‌ ಶೆಟ್ಟಿ (Chandan Shetty) ಹೇಳಿದ್ದಾರೆ.

ಕಾಟನ್ ಕ್ಯಾಂಡಿ (Cotton Candy) ಹಾಡಿನ ತುಣುಕುಗಳನ್ನು ಕದಿಯಲಾಗಿದೆ ಎಂಬ ಆರೋಪವನ್ನು ಗಾಯಕ ಚಂದನ ಶೆಟ್ಟಿ ತಳ್ಳಿಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು ಇದು ಕಾಕತಾಳೀಯ. ನಾನು ಯಾವುದೇ ಹಾಡು, ಹಾಡಿನ ಸಾಲು, ಟ್ಯೂನ್ ಕದ್ದಿಲ್ಲ. ಯಾವುದೋ ವಿವ್ ಇಲ್ಲದ ಸಾಂಗ್ ಕದ್ದು ನಾನು ಹಾಡು ಮಾಡುವ ಪರಿಸ್ಥಿತಿ ಬಂದಿಲ್ಲ ಎಂದು ಹೇಳಿದರು.

 

ಈ ಕುರಿತು ಕಾನೂನು ಹೋರಾಟ ಮಾಡಲು ಸಿದ್ಧನಿದ್ದೇನೆ. ನಾನು ಬಹಳಷ್ಟು ಕಷ್ಟಪಟ್ಟು ಹಾಡು ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಟನ್ ಕ್ಯಾಂಡಿ V/S ವೈ ಬುಲ್ ರ‍್ಯಾಪರ್‌ ವಾರ್ – ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ

ಏನಿದು ವಿವಾದ?
ಹೊಸ ವರ್ಷಕ್ಕೆ ರಿಲೀಸ್ ಆದ ಕಾಟನ್ ಕ್ಯಾಂಡಿ ಸಾಂಗ್ ಟ್ಯೂನ್ ನಾನು ಆರು ವರ್ಷದ ಹಿಂದೆ ಮಾಡಿದ ವೈ ಬುಲ್ (Y Bull) ಪಾರ್ಟಿ ಸಾಂಗ್ ಟ್ಯೂನ್ ಒಂದೇ ಇದೆ ಎಂದು ಯುವರಾಜ್ ಹೇಳಿದ್ದಾರೆ. ಮೊದಲ ಪಲ್ಲವಿ, ಸೆಕೆಂಡ್ ಚರಣವನ್ನು ಚಂದನ್‌ ಶೆಟ್ಟಿ ಕಾಪಿ ಮಾಡಿದ್ದಾರೆ. ಆರು ವರ್ಷಗಳ ಹಿಂದೆ ತುಂಬಾನೇ ಕಷ್ಟಪಟ್ಟು ಹಣ ಕೂಡಿಟ್ಟು ರ‍್ಯಾಪ್‌ ಸಾಂಗ್ ಮಾಡಿದ್ದೇನೆ ಎಂದು ಯುವರಾಜ್‌ (Yuvraj) ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

Share This Article