ನಟ ಶ್ರೀಮುರಳಿಗೆ ಮಾತು ಕೊಟ್ಟಿದ್ದೇನೆ, ಅವರಿಗೆ ಸಿನಿಮಾ ಮಾಡುತ್ತೇನೆ: ಪ್ರಶಾಂತ್ ನೀಲ್

Public TV
2 Min Read

ಕೆಜಿಎಫ್ ಮೂಲಕ ವಿಶ್ವದ ಗಮನ ಸೆಳೆದಿರುವ ನಿರ್ದೇಶಕ ಪ್ರಶಾಂತ್ ನೀಲ್, ಈಗ ಬಹುಬೇಡಿಕೆಯ ನಿರ್ದೇಶಕ. ಮೊದಲನೆಯ ಸಿನಿಮಾದಲ್ಲಿ ತಾವು ಎಂತಹ ನಿರ್ದೇಶಕ ಎಂದು ತೋರಿಸಿದರೇ, ಎರಡನೇ ಚಿತ್ರದಲ್ಲಿ ತಮ್ಮ ಸಿನಿಮಾಗಳು ಯಾವ ರೀತಿಯ ಮಾರುಕಟ್ಟೆಯನ್ನು ಸೃಷ್ಟಿಸಬಲ್ಲವು ಎಂಬುದನ್ನು ಸಾಬೀತು ಪಡಿಸಿದರು. ಈಗ ರಿಲೀಸ್ ಆಗುತ್ತಿರುವ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾ ರಂಗದ ದಿಕ್ಕನ್ನೆ ಬದಲಿಸುತ್ತಿದೆ. ಇಂತಹ ಪ್ರಶಾಂತ್ ನೀಲ್ ಕೈಯಲ್ಲಿ ಸ್ಟಾರ್ ನಟರ ಎರಡು ಚಿತ್ರಗಳಿದ್ದು, ಅವೆರಡು ಪರಭಾಷೆಯ ನಟರ ಚಿತ್ರಗಳಾಗಿವೆ.  ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

ಪ್ರಶಾಂತ್ ನೀಲ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದು ‘ಉಗ್ರಂ’ ಚಿತ್ರದ ಮೂಲಕ. ಈ ಚಿತ್ರಕ್ಕೆ ಶ್ರೀಮುರಳಿ ನಾಯಕ. ಇದೇ ಸಿನಿಮಾ ಶ್ರೀಮುರಳಿಗೂ ಮತ್ತು ಪ್ರಶಾಂತ್ ನೀಲ್ ಅವರ ವೃತ್ತಿ ಬದುಕಿಗೂ ದೊಡ್ಡದೊಂದು ಬ್ರೇಕ್ ನೀಡಿತು. ಅಲ್ಲಿಂದ ಇಬ್ಬರೂ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡರು. ಸದ್ಯ ಪ್ರಶಾಂತ್ ನೀಲ್ ತೆಲುಗುನಟ ಪ್ರಭಾಸ್ ಗಾಗಿ ‘ಸಲಾರ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ, ನಂತರ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಚಿತ್ರ ಮಾಡಲಿದ್ದಾರೆ. ಹೀಗಾಗಿಯೇ ಪ್ರಶಾಂತ್ ನೀಲ್, ಕನ್ನಡದ ನಟರಿಗೆ ಸಿಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಕುರಿತು ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ಈ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲೇ ಉತ್ತರಿಸಿದ್ದಾರೆ ಪ್ರಶಾಂತ್. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

‘ನಾನು ಕನ್ನಡ ಸಿನಿಮಾದ ಮೂಲಕವೇ ಚಿತ್ರರಂಗಕ್ಕೆ ಪ್ರವೇಶ ಮಾಡಿದವನು. ನನ್ನಿಂದ ಕನ್ನಡಕ್ಕೆ ಏನೋ ಆಗಿದೆ ಎಂಬ ಭ್ರಮೆಯಲ್ಲಿ ಇಲ್ಲ. ನಾನು ಎಲ್ಲಿಗೆ ಹೋದರೂ, ಮತ್ತೆ ಬಂದು ಕನ್ನಡದಲ್ಲಿಯೇ ಚಿತ್ರ ಮಾಡುತ್ತೇನೆ. ಕನ್ನಡಕ್ಕೆ ನನ್ನ ಮೊದಲ ಆದ್ಯತೆ’ ಎಂದು ಹೇಳಿದ್ದಾರೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕನ್ನಡದ ಸಿನಿಮಾಗಳನ್ನೇ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಇದನ್ನು ಓದಿ: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

ಈ ಎರಡು ಸಿನಿಮಾಗಳು ಮುಗಿದ ನಂತರ ಅವರು ಶ್ರೀಮುರಳಿಗಾಗಿ ಮತ್ತೊಂದು ಚಿತ್ರ ಮಾಡುವುದಾಗಿಯೂ ತಿಳಿಸಿದ್ದಾರೆ ಪ್ರಶಾಂತ್ ನೀಲ್. ‘ಶ್ರೀಮುರಳಿಗೆ ಮಾತುಕೊಟ್ಟಿದ್ದೇನೆ. ಅವರಿಗಾಗಿ ಮುಂದಿನ ದಿನಗಳಲ್ಲಿ ಒಂದು ಸಿನಿಮಾ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಕನ್ನಡ ಸಿನಿಮಾ ರಂಗವನ್ನು ಬಿಟ್ಟು ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿದ್ದಾರೆ ಪ್ರಶಾಂತ್.

Share This Article
Leave a Comment

Leave a Reply

Your email address will not be published. Required fields are marked *