ನನ್ನ ವಿಚಾರಣೆ ಮಾಡೇ ಇಲ್ಲ, 90% ತನಿಖೆ ಪೂರ್ಣ ಹೇಗೆ ಆಗುತ್ತೆ: ಡಿಕೆಶಿ ಪ್ರಶ್ನೆ

Public TV
2 Min Read

ಬೆಂಗಳೂರು: ನನ್ನನ್ನು ಒಂದು ದಿನ ಸಹ ವಿಚಾರಣೆಗೆ ಕರೆಸಿಲ್ಲ. ಈಗ 90% ರಷ್ಟು ತನಿಖೆ ಪೂರ್ಣ ಆಗಿದೆ ಎಂದು ಹೇಗೆ ಹೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರಶ್ನೆ ಮಾಡಿದ್ದಾರೆ.

ಅದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ (CBI) ತನಿಖೆಗೆ ಹೈಕೋರ್ಟ್ ಅಸ್ತು ಅಂದಿರುವ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಬೆಂಗಳೂರಿನ ಕೇಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಕರಣದಲ್ಲಿ ಎಫ್‌ಐಆರ್ ಹಾಕಿರೋದು ಸರಿ ಇಲ್ಲ ಅಂತ ನ್ಯಾಯಾಲಯಕ್ಕೆ ಹೋಗಿದ್ದೆ. ಯಡಿಯೂರಪ್ಪ ಸರ್ಕಾರ ಇದ್ದಾಗ ಸಿಬಿಐಗೆ ತನಿಖೆಗೆ ಅವಕಾಶ ಕೊಟ್ಟಿದ್ರು. ಈಗ 90% ರಷ್ಟು ತನಿಖೆ ಪೂರ್ಣ ಆಗಿದೆ ಅಂತ ಹೇಳಿದ್ದಾರೆ. ನನ್ನ ಒಂದು ದಿನ ಸಹ ವಿಚಾರಣೆಗೆ ಕರೆಸಿಲ್ಲ ಎಂದು ತಿಳಿಸಿದರು.

ನನ್ನನ್ನು ಕರೆದು ನನ್ನ ಆಸ್ತಿಯನ್ನು ಕೇಳಬೇಕು. ನನ್ನ ಆಸ್ತಿ ಯಾವುದು? ನನ್ನ ಹೆಂಡತಿಯ ಆಸ್ತಿ ಯಾವುದು ಅಂತ ಕೇಳಬೇಕು. ಅದು ಹೇಗೆ 90% ರಷ್ಟು ತನಿಖೆ ಪೂರ್ಣ ಮಾಡಿದ್ದಾರೋ ನನಗೆ ಅರ್ಥ ಆಗುತ್ತಿಲ್ಲ. ನ್ಯಾಯಾಲಯದ ಬಗ್ಗೆ ನನಗೆ ನಂಬಿಕೆ ಇದೆ. ಕಾನೂನು ಚೌಕಟ್ಟಿನಲ್ಲೇ ಉತ್ತರ ಕೊಡುತ್ತೇನೆ ಎಂದರು.

ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಈಗಷ್ಟೇ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. 3 ತಿಂಗಳ ಒಳಗಾಗಿ ತನಿಖೆ ಪೂರ್ಣ ಮಾಡಲು ಹೇಳಿದ್ದಾರೆ, ನೋಡೋಣ. ನನಗೆ ನೋಟಿಸ್ ಕೊಟ್ಟು ಕರೆದು ಉತ್ತರ ಕೇಳಿ ಏನೇನು ಮಾಡ್ತಾರೋ ಎಂದರು. ಇದನ್ನೂ ಓದಿ: ಯಾವುದೇ ಅಪರಾಧ ಮಾಡಿಲ್ಲ, ಹಾಗಾಗಿ ಟ್ರಬಲ್ ಇಲ್ಲ: ಡಿಕೆ ಸುರೇಶ್

 

ಪ್ರಕರಣದಲ್ಲಿ ಬಿಜೆಪಿಯವರ ರಾಜಕೀಯ ಪ್ರೇರಿತ ಇದ್ದರೂ ನನಗೆ ಭರವಸೆ ಇದೆ. ಕಾನೂನು ಚೌಕಟ್ಟಿನಲ್ಲಿಯೇ ಇದ್ದೇನೆ. ಕಾನೂನಡಿಯೇ ಉತ್ತರ ಕೊಡುತ್ತೇನೆ. ಬಿಜೆಪಿಯವರು ಏನೇ ಷಡ್ಯಂತ್ರ ಮಾಡಿದರೂ ಕೂಡ ನ್ಯಾಯಾಲಯಕ್ಕೆ ನನ್ನ ಎಲ್ಲಾ ಪಟ್ಟಿ ಕೊಡುತ್ತೇನೆ. ಅದೇ ಅದಕ್ಕೆ ಉತ್ತರ ಕೊಡುತ್ತದೆ ಎಂದು ಹೇಳಿದರು.

ನಳೀನ್ ಕುಮಾರ್ ಕಟೀಲ್, ಕುಮಾರಸ್ವಾಮಿ ತಿಹಾರ್ ಜೈಲಿಗೆ ಕಳಿಸುವುದಾಗಿ ಹೇಳಿದ್ದಾರೆ. ಚುನಾವಣೆ ಮುಗಿಯುವವರೆಗೂ ಅಲ್ಲಿಯೇ ಇಡುವುದಾಗಿಯೂ ಹೇಳಿದ್ದಾರೆ. ಇದು ಅವರ ಬಾಯಲ್ಲಿ ಬಂದಿರೋ ನುಡಿಮುತ್ತುಗಳು. ಈಗಲೂ ಕೆಲವರು ಮಾತನಾಡುತ್ತಿದ್ದಾರೆ, ಮಾತಾಡಲಿ. ನಾನು ಎಲ್ಲೂ ಓಡಿ ಹೋಗಲ್ಲ. ಉತ್ತರ ಕೊಡುತ್ತೇನೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಅನುಕಂಪವನ್ನು ನಮ್ಮ ದೇಶದಲ್ಲಿ ಹೇಗೆ ಬೇಕಾದ್ರು ಉಪಯೋಗ ಮಾಡಿಕೊಳ್ತಾರೆ: ಡಿಕೆಶಿಗೆ ಕುಮಾರಸ್ವಾಮಿ ಠಕ್ಕರ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್