ನಿಮ್ಮ ಬಳಿ ಬಟ್ಟೆ ಹಾವಿದ್ರೆ, ನನ್ನ ಬಳಿ ನಿಜವಾದ ಹಾವಿದೆ: ಬಿಜೆಪಿ ನಾಯಕರಿಗೇ ಯತ್ನಾಳ್ ಟಾಂಗ್

Public TV
2 Min Read

ಚಿಕ್ಕೋಡಿ: ನಿಮ್ಮ ಬಳಿ ಬಟ್ಟೆಯ ಹಾವಿದ್ದರೆ ನನ್ನ ಬಳಿ ನಿಜವಾದ ಹಾವಿದೆ. ನಮ್ಮ ತಂಟೆಗೆ ಬಂದರೆ ನಿಜವಾದ ಹಾವು ಬಿಡಬೇಕಾಗುತ್ತದೆ. ನಾನು ಯಾರ ಬಳಿಯೂ ಹೋಗಿ ಕೋರ್ ಕಮಿಟಿ ಅಧ್ಯಕ್ಷನನ್ನಾಗಿ ಮಾಡಿ ಅಂತ ಕೇಳಿಲ್ಲ ಎಂದು ಬಿಜೆಪಿ (BJP) ನಾಯಕರಿಗೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಟಾಂಗ್ ನೀಡಿದ್ದಾರೆ.

ಬೆಳಗಾವಿ (Belgavi) ಜಿಲ್ಲೆಯ ಹುಕ್ಕೇರಿ (Hukkeri) ಪಟ್ಣಣದಲ್ಲಿ ಜರುಗಿದ 2ಎ ಮೀಸಲಾತಿಗೆ ಆಗ್ರಹಿಸಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಇಲ್ಲಿ ಟಿಕೆಟ್ ಹಂಚಲು ಬಂದಿಲ್ಲ. ನಾನು ಕೋರ್ ಕಮಿಟಿ ಸದಸ್ಯನಾಗಿ ಇಲ್ಲಿ ಬಂದಿಲ್ಲ. ಕೋರ್ ಕಮಿಟಿ ಸದಸ್ಯನಾಗಿ ಮಾಡಿ ಅಂತ ಹೋಗಿಲ್ಲ. ನನ್ನನ್ನು ಏನಾದರೂ ಮಾಡಿ ಅಂತ ನಾನು ಯಾರ ಕಾಲು ಬಿದ್ದಿಲ್ಲ. ನಾನು ಕಾಲು ಬಿದ್ದಿದ್ದು ಕೇವಲ ಅಟಲ್ ಬಿಹಾರಿ ವಾಜಪೇಯಿಯವರಿಗೆ (Atal Bihari Vajpayee) ಮಾತ್ರ. ನಾವು ಗೂಟ ಇಟ್ಟರೆ ವಾಪಸ್ ಸುಧಾರಿಸಿಕೊಳ್ಳಲು ಆಗಲ್ಲ ಎಂದು ಎಚ್ಚರಿಸಿದ್ದಾರೆ.

 

ಅರಭಾವಿ ಕಾರ್ಯಕ್ರಮ ಆಗುವ ಮೊದಲು ಹೇಗೆ ಬೇಕೋ ಹಾಗೆ ಮೊದಲು ನಮಸ್ಕಾರ ಮಾಡಿದ್ದರು. ಅರಭಾವಿ ಕಾರ್ಯಕ್ರಮ ಆದ ಮೇಲೆ ಎಲ್ಲರೂ ಸಹ ಸರಿಯಾಗಿ ನಮಸ್ಕಾರ ಮಾಡುತ್ತಿದ್ದಾರೆ. ಈ ದೇಶದ ಪ್ರಧಾನಿಯೇ ನಾನು ಒಬ್ಬ ಪ್ರಧಾನ ಸೇವಕ ಅಂತ ಹೇಳುತ್ತಾರೆ. ನಾನೂ ಸಹ ಸೇವಕನೇ, ನಾನೊಬ್ಬ ಭೂತದ ರೀತಿಯಲ್ಲಿ ಕಾಡುತ್ತಿದ್ದೇನೆ. ಈ ವೇಳೆ ಅಪ್ಪ, ಮಗ ಎಂದು ಹೆಸರು ಹೇಳದೇ ಯಡಿಯೂರಪ್ಪ (Yediyurappa) ಹಾಗೂ ಬಿ.ವೈ.ವಿಜಯೇಂದ್ರ (B. Y. Vijayendra) ಅವರಿಗೆ ತಿರುಗೇಟು ನೀಡಿದ್ದಾರೆ.

ನಿಮ್ಮ ಬಳಿ ಬಟ್ಟೆ ಹಾವಿದ್ದರೆ ನನ್ನ ಬಳಿ ನಿಜವಾದ ಹಾವಿದೆ. ನಮ್ಮ ತಂಟೆಗೆ ಬಂದರೆ ನಿಜವಾದ ಹಾವು ಬಿಡಬೇಕಾಗುತ್ತದೆ. ಬಸನಗೌಡನಿಗೆ ಯಾವುದೇ ಸೀಟು ಬರಬಾರದು ಅಂತ ಹಣ ಹಂಚಲಾಗುತ್ತಿದೆ. ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆಗೆ ಬೆಂಗಳೂರಿನಿಂದ ಹಣ ಬರುತ್ತಿದೆ. ಮುಧೋಳದ ಸಕ್ಕರೆ ಕಾರ್ಖಾನೆ ನಡೆಸುವವ ಒಬ್ಬ ರೊಕ್ಕ ಕಳುಹಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

ಯತ್ನಾಳ್ ನೀವು ಮುಖ್ಯಮಂತ್ರಿ ಆಗಿ ಎಂದು ಉಮೇಶ್ ಕತ್ತಿ (Umesh Katti) ಹೇಳಿದ್ದರು. ನನಗೆ ಆ ಟೆನ್ಷನ್ ತಡೆದುಕೊಳ್ಳುವುಕ್ಕೆ ಆಗಲ್ಲ. ನೀನು ಮುಖ್ಯಮಂತ್ರಿ ಆಗು ಅಂತಾ ಹೇಳಿದ್ದರು. ಯತ್ನಾಳ್ ನಾಯಕನಲ್ಲ ಅಂತ ಬೆಳಗಾವಿ, ವಿಜಯಪುರದ ನಾಯಕರಿಂದ ಹೇಳಿಸಿ ನೋಡೋಣ ಎಂದು ಬಿಜೆಪಿ ನಾಯಕರಿಗೆ ಯತ್ನಾಳ್ ಸವಾಲೊಡ್ಡಿದ್ದಾರೆ.

ಇಂದು ಎಸ್‍ಪಿಯಿಂದ ಮುಖ್ಯಮಂತ್ರಿಗಳಿಗೆ ಮೆಸೇಜ್ ಹೋಗುತ್ತದೆ. ಎಷ್ಟು ಜನ ಸೇರಿದ್ದರು. ಯತ್ನಾಳ್ ಏನು ಮಾತಾಡಿದ್ರು, ಅವನ ತೆಗೆದು ಹಾಕಲು ಏನು ಮಾಡಬೇಕು. ಈ ಎಲ್ಲಾ ಮಾಹಿತಿಗಳು ಸಿಎಂಗೆ ಹೋಗುತ್ತವೆ. ಕೆಲ ಪತ್ರಕರ್ತರು, ಯೂಟ್ಯೂಬ್ ಚಾನಲ್‍ನವರೂ ಸಹ ನನ್ನ ಹಿಂದೆ ಬಿದ್ದಿದ್ದಾರೆ. ಚಾನಲ್ ಹೆಸರು ಪತ್ರಕರ್ತರ ಹೆಸರು ಹೇಳದೇ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಗ್ಗೆ ಸರ್ಕಾರಕ್ಕೆ, ಸಿಎಂಗೆ ಬದ್ಧತೆಯಿಲ್ಲ: ಡಿ.ಕೆ.ಶಿವಕುಮಾರ್

ನಾನು ಮಂತ್ರಿ ಆಕಾಂಕ್ಷಿ ಅಂತ ಯಾರೂ ಬರೆಯಬೇಡಿ. ನನಗೆ ಮಂತ್ರಿ ಸ್ಥಾನ ಬೇಡ. ನಾನು 2A ಮೀಸಲಾತಿ ಕೊಡಿಸಿಯೇ ಕೊಡಿಸುತ್ತೇನೆ. ಯಾರ ಕಾಲಿಗೂ ಬೀಳದವರು ಮೊನ್ನೆ ನಮ್ಮ ಸ್ವಾಮೀಜಿ ಕಾಲಿಗೆ ಬಿದ್ದಿದ್ದಾರೆ. ಯಾರ ಕಾಲು ಬಿದ್ದಿಲ್ಲ ಸರ್ ಅವರು ಅಂತ ನಮಗೆ ಒಬ್ಬರು ಅಂದಿದ್ದರು. ಆದರೆ, ಈಗ ಎಲ್ಲರೂ ಬೀಳುತ್ತಿದ್ದಾರೆ ಎಂದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *