ದರ್ಶನ್ ವಿಚಾರದಲ್ಲಿ ನಾನು ಯಾವುದೇ ಪ್ರಭಾವ ಬೀರಿಲ್ಲ: ಜಮೀರ್

Public TV
1 Min Read

ಹುಬ್ಬಳ್ಳಿ: ನಟ ದರ್ಶನ್ (Darshan) ವಿಚಾರದಲ್ಲಿ ನಾನು ಯಾವುದೇ ಪರಿಣಾಮ ಬೀರಿಲ್ಲ. ನಾನು ಬಳ್ಳಾರಿ (Ballari) ಜಿಲ್ಲೆಯ ಉಸ್ತುವಾರಿ ಸಚಿವ ಅಷ್ಟೇ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed Khna) ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಡಿಜಿ ಅಲ್ಲಾ, ಹೋಮ್ ಮಿನಿಸ್ಟರ್ ಅಲ್ಲಾ. ಐ ಆಮ್ ನಥಿಂಗ್. ನಾನು ಹೇಗೆ ಸಹಾಯ ಮಾಡಲಿ ಎಂದರು. ಇದನ್ನೂ ಓದಿ: ಇಂಡಿಗೋ ವಿಮಾನದ ವಾಶ್‍ರೂಮ್‍ನಲ್ಲಿ ಬಾಂಬ್ ಬೆದರಿಕೆ ಪತ್ರ ಪತ್ತೆ – ತುರ್ತು ಭೂಸ್ಪರ್ಶ

ನಾನು ಒಂದು ವೇಳೆ ಹೋಮ್ ಮಿನಿಸ್ಟರ್ ಅಥವಾ ಡಿಜಿ ಆಗಿದ್ದರೆ ದರ್ಶನ್ ನನ್ನ ಸ್ನೇಹಿತ ಅಂತ ಸಹಾಯ ಮಾಡಬಹುದಿತ್ತು. ನಟ ದರ್ಶನ್ ನನ್ನ ಆತ್ಮೀಯ ಇರಬಹುದು. ಆದರೆ ನಾನು ಅವರ ವಿಚಾರದಲ್ಲಿ ಯಾವುದೇ ಪ್ರಭಾವ ಬೀರಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: SSLC ವಿದ್ಯಾರ್ಥಿನಿಗೆ ತನ್ನ ಬೆತ್ತಲೆ ಫೋಟೋ ಕಳಿಸಿ ಕಿರುಕುಳ – ಕಾಮುಕ ಶಿಕ್ಷಕನ ವಿರುದ್ಧ ಕೇಸ್‌

Share This Article