ಹಣಕ್ಕಾಗಿ ನಾನು ಯಾರ ಹಿಂದೆಯೂ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

Public TV
2 Min Read

ಟ ನರೇಶ್ ಅವರ ಕೌಟುಂಬಿಕ ಕಲಹಕ್ಕೆ ನಟಿ ಪವಿತ್ರಾ ಲೋಕೇಶ್ (Pavitra Lokesh) ಕಾರಣವೆಂದು ಹೇಳಲಾಗಿತ್ತು. ಪವಿತ್ರಾ ಲೋಕೇಶ್ ವಿರುದ್ಧ ನರೇಶ್ ಅವರ ಪತ್ನಿ ರಮ್ಯಾ ಹಲವು ಆರೋಪಗಳನ್ನು ಮಾಡಿದ್ದರು. ದುಡ್ಡಿಗಾಗಿ ಆಕೆ ನನ್ನ ಗಂಡನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ ಎಂದು ರಮ್ಯಾ ಹೇಳಿಕೆ ನೀಡಿದ್ದರು. ಜೊತೆಗೆ ದುಡ್ಡಿನ ಲಾಲಸ್ಯಗಾಗಿ ಪವಿತ್ರಾ ಬೇರೊಬ್ಬ ಗಂಡಸಿನ ಜೊತೆ ಹೋಗಿರಬಹುದು ಎಂದು ನಟ ಸುಚೇಂದ್ರ ಪ್ರಸಾದ್ ಕೂಡ ಮಾತನಾಡಿದ್ದರು.

ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ ಬದುಕಿನ ಕುರಿತು ಸಾಕಷ್ಟು ಗಾಸಿಪ್ ಗಳು ಹರಡಿದ್ದವು. ತಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಿರುವ ಜನರಿಗಾಗಿ ಪವಿತ್ರಾ ಲೋಕೇಶ್ ತಿರುಗೇಟು ನೀಡಿದ್ದಾರೆ. ‘ಬೇರೆಯವರ ದುಡ್ಡಿನಲ್ಲಿ ಬದುಕುವ ಅವಶ್ಯಕತೆ ನನಗಿಲ್ಲ. ನಾನು ದುಡಿದ ದುಡ್ಡಿನಲ್ಲೇ ಜೀವನ ನಡೆಸುತ್ತಿರುವ. ಯಾರದೋ ದುಡ್ಡಿನ ಆಸೆಗೆ ಇನ್ನ್ಯಾವುದೋ ಮಾರ್ಗವನ್ನು ಹಿಡಿದಿಲ್ಲ’ ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ:ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

ತಮ್ಮ ತಂದೆಯು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು. ನಂತರ ನಟರಾದರು. ನಾನು ಈಗಲೂ ಡಾ.ರಾಜ್ ಕುಮಾರ್ ಕೊಟ್ಟ ಬೆಳ್ಳಿ ಲೋಟದಲ್ಲೇ ಚಹಾ ಕುಡಿಯುತ್ತೇನೆ. ನನ್ನ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ. ಈ ವಿಷಯದಲ್ಲಿ ನನಗೆ ನೋವಾಗಿದೆ ಎಂದು ಪವಿತ್ರಾ ಲೋಕೇಶ್ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ತೆಲುಗು ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ನಡುವಿನ ಸಂಬಂಧವೇನು ಎನ್ನುವ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಪರೋಕ್ಷವಾಗಿ ಅವರಿಬ್ಬರೂ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನುವಂತೆ ತೋರಿಸುತ್ತಲೇ ಬಂದರು. ಇದೀಗ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು, ತಾವು ಸಹಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನರೇಶ್, ‘ಸುಪ್ರೀಂಕೋರ್ಟ್ ಕೂಡ ಲೀವ್ ಇನ್ ರಿಲೇಶನ್ ಶಿಪ್ ಅನ್ನು ಮದುವೆಗೆ (Marriage) ಸಮ ಎಂದು ಹೇಳಿದೆ. ಹಾಗಾಗಿ ನಾವು ಸಹಜೀವನ ನಡೆಸುತ್ತಿದ್ದೇವೆ. ನಾನು ಸಿಂಗಲ್ ಆಗಿ ಇದ್ದೀನಿ ಅಂತ ಅಂದ್ಕೊಳ್ಳಬೇಡಿ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಖುಷಿಯಾಗಿದ್ದೇವೆ’ ಎಂದು ಪವಿತ್ರಾ ಲೋಕೇಶ್ ಕೈ ಹಿಡಿದುಕೊಂಡೇ ಹೇಳಿದರು.

Share This Article