-ವಿಶ್ವದ ಅತೀ ಉದ್ಧದ ರೈಲ್ವೆ ಪ್ಲಾಟ್ ಫಾರ್ಮ್ ಅನ್ನೋ ಕೀರ್ತಿ ಹುಬ್ಬಳ್ಳಿಗೆ
-ರೈಲ್ವೆ ಸಂಪರ್ಕದಲ್ಲಿ ದೇಶದಲ್ಲಿ ಕ್ರಾಂತಿಯಾಗುತ್ತಿದೆ
ಹುಬ್ಬಳ್ಳಿ: ವಿಶ್ವದ ಅತೀ ಉದ್ಧದ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿರುವ ಕೀರ್ತಿ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕಿದೆ. ದ್ವಿತೀಯ ದರ್ಜೆ ನಗರದಲ್ಲಿ ಮೂರನೇ ದ್ವಾರ ಇರುವುದು ಕೇವಲ ಹುಬ್ಬಳ್ಳಿಯಲ್ಲಿ ಮಾತ್ರ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.
ರೈಲ್ವೆ ನಿಲ್ದಾಣದ ಮೂರನೇ ಮುಖ್ಯ ದ್ವಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮೂರನೇ ಮುಖ್ಯ ದ್ವಾರ ಉದ್ಘಾಟನೆ ಆಗುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ. ದಿವಂಗತ ರೈಲ್ವೆ ಸಚಿವ ಸುರೇಶ್ ಅಂಗಡಿಯವರ ಪರಿಶ್ರಮದಿಂದ ರೈಲ್ವೆ ನಿಲ್ದಾಣಕ್ಕೆ ಸಿದ್ದಾರೂಢರ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್. ಎಸ್ ರಾಜೀನಾಮೆ
ಹುಬ್ಬಳ್ಳಿಯಿಂದ ವಾರಣಾಸಿಗೆ ಇನ್ಮುಂದೆ ವಾರಕ್ಕೆ ಎರಡು ರೈಲು ಹೋಗಲಿ. ಇನ್ನೂ ಹುಬ್ಬಳ್ಳಿ ಧಾರವಾಡ ಅಭಿವೃದ್ಧಿ ಪಥದತ್ತ ಸಾಗಲಿದೆ. ಐಐಟಿ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದೇನೆ ಅವರು ಬರುವ ನಿರೀಕ್ಷೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಕುಲದೀಪ್ ಬೌಲಿಂಗ್ ಮಿಂಚು, ಸುಲಭ ಸರಣಿ ಗೆಲುವು – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ
ರಾಜಕಾರಣಿ ಅಂದರೆ ಬುದ್ಧಿ ಇಲ್ಲದವರು ಎನ್ನುವ ಮಾತಿದೆ. ಆದರೆ ಸದ್ಯ ಇರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂಜಿನೀಯರಿಂಗ್‍ನಲ್ಲಿ ಗೋಲ್ಡ್ ಮೆಡಲಿಸ್ಟ್. ಈ ಹಿಂದೆ ಎರಡು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಇದೀಗ ಮಂತ್ರಿಯಾಗಿ ಜನರಿಗೆ ಹತ್ತಿರವಾಗಿದ್ದಾರೆ. ಸದ್ಯ ಭಾರತದಲ್ಲಿ ರೈಲ್ವೆ ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ.