ದಲಿತರನ್ನು ಅರ್ಚಕರನ್ನಾಗಿ ನೇಮಿಸಲು ನನ್ನ ಸಹಮತವಿದೆ: ಸಿದ್ದರಾಮಯ್ಯ

Public TV
2 Min Read

ಮೈಸೂರು: ಕರ್ನಾಟಕದಲ್ಲಿಯೂ ದಲಿತರನ್ನು ಮುಜರಾಯಿ ಅರ್ಚಕರಾಗಿ ನೇಮಕ ಮಾಡಿಕೊಳ್ಳಲು ನಾವು ಮುಕ್ತ ಮನಸ್ಸನ್ನು ಹೊಂದಿದ್ದೇವೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇರಳದಲ್ಲಿ ದಲಿತರನ್ನು ಮುಜರಾಯಿ ಅರ್ಚಕರಾಗಿ ನೇಮಕ ಮಾಡಿರುವ ವಿಚಾರ ಕುರಿತು ಮಾತನಾಡಿದ ಸಿದ್ದರಾಮಯ್ಯ ನವರು, ಕರ್ನಾಟಕದಲ್ಲೂ ನೇಮಕ ಮಾಡಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ದಲಿತ ಅರ್ಚಕರನ್ನು ನೇಮಕ ಮಾಡಲು ನಮ್ಮ ವಿರೋಧ ಇಲ್ಲ ಹೇಳಿಕೆ ನೀಡಿದರು.

ಜನರಲ್ಲಿ ನಂಬಿಕೆ ಇಟ್ಟವನು:
ಈಗ ಶತ್ರುಗಳ ಶತ್ರು ಮಿತ್ರರಾಗಿದ್ದಾರೆ ಆದರೆ ಯಾವ ನಾಯಕರ ತಂತ್ರ ರಣತಂತ್ರಗಳಿಗೂ ಜನಾಭಿಪ್ರಾಯ ಬದಲಾಗೋಲ್ಲ. ಅವರೆಲ್ಲ ಒಂದಾದರೆ ನನಗೇನು ಸಮಸ್ಯೆ ಇಲ್ಲ. ನಾನು ನಾಯಕರಲ್ಲಿ ನಂಬಿಕೆ ಇಟ್ಟವನಲ್ಲ, ಬದಲಿಗೆ ಜನರಲ್ಲಿ ನಂಬಿಕೆ ಇಟ್ಟವನು. ಯಾವ ಶತ್ರುಗಳು ಒಂದಾದರೂ ನನ್ನನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ವಲಸಿಗರಿಗೆ ತಿರುಗೇಟು ಕೊಟ್ಟರು.

ಶ್ರೀನಿವಾಸ್ ಪ್ರಸಾದ್ ಬಗ್ಗೆ ನಾನು ಏನೂ ಮಾತನಾಡೋಲ್ಲ ಅವರು ಚುನಾವಣೆಯಲ್ಲಿ ಸೋತು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿಯೂ ಎಲ್ಲರು ಒಂದಾಗಿದ್ದರು. ಆಗ ಗೆದ್ದದ್ದು ನಾನೆ ತಾನೆ, ಕಡಿಮೆ ಅಂತರದಲ್ಲಿ ಗೆದ್ದಿರಬಹುದು ಆದರೆ ಗೆಲುವು ಮುಖ್ಯ ಚಾಮುಂಡೇಶ್ವರಿ ಜನರು ನನ್ನ ಕೈ ಬಿಡಲಿಲ್ಲ, ಈಗ ನನ್ನನ್ನ ಕೈ ಬಿಡುತ್ತಾರಾ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಬಿಜೆಪಿ ಅವರು ಕರ್ನಾಟಕ ಪರಿವರ್ತನಾ ಸಮಾವೇಶ ಮಾಡುತ್ತಿದ್ದಾರೆ. ಅವರ ಲೆಕ್ಕದಲ್ಲಿ ಪರಿವರ್ತನೆ ಅಂದ್ರೆ ಸಮಾಜದ ಪರಿವರ್ತನೆ ಅಲ್ಲ, ಸಮಾಜ ಒಡೆಯುವ ಪರಿವರ್ತನೆ. ಬಿಜೆಪಿಯವರು ಯಾವಾಗಲಾದರೂ ಮಹಿಳೆಯರ, ರೈತರ ಬಗ್ಗೆ ಮಾತಾನಾಡಿದ್ದಾರಾ. ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಎಂದು ಆರೋಪಿಸಿದರು.

ಯಡಿಯೂರಪ್ಪರಿಗೆ ಕನಿಷ್ಟ ಜ್ಞಾನವಿಲ್ಲ: ಮೈಸೂರು ಮಿನರಲ್ಸ್ ನಲ್ಲಿನ ಹಣ ಸರ್ಕಾರದ್ದು, ತುರ್ತು ಕಾರಣಕ್ಕೆ ಅದನ್ನು ಬಳಸಿದ್ದೇವೆ. ಮುಂದಿನ ಬಜೆಟ್‍ನಲ್ಲಿ ಆ ಹಣವನ್ನು ಅವರಿಗೆ ವಾಪಸ್ ನೀಡುತ್ತೇವೆ. ಇದರಲ್ಲಿ ಯಾವುದೇ ತಪ್ಪು ಇಲ್ಲ ಇದು ಸಾಮಾನ್ಯ ಪ್ರಕ್ರಿಯೆ. ಹಣಕಾಸು ವ್ಯವಸ್ಥೆ ಬಗ್ಗೆ ಯಡಿಯೂರಪ್ಪಗೆ ಕನಿಷ್ಟ ಜ್ಞಾನವು ಇಲ್ಲ. ಮುಖ್ಯಮಂತ್ರಿ, ಹಣಕಾಸು ಸಚಿವರಾಗಿದ್ದವರಿಗೆ ಈ ಸಾಮಾನ್ಯ ಜ್ಞಾನ ಇರಬೇಕಿತ್ತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಮೈಸೂರು ಮಿನರಲ್ಸ್ ಲಿಮಿಟೆಡ್ ನಿಂದ ಸಾಲ ಮನ್ನಾದ ಹಣವನ್ನು ಅಪೆಕ್ಸ್ ಬ್ಯಾಂಕ್ ಗೆ ನೀಡಿದ್ದಾರೆ ಎಂಬುವ ಯಡಿಯೂರಪ್ಪ ಹೇಳಿಕೆಗೆ ಸಿಎಂ ಸ್ಪಷ್ಟೀಕರಣ ನೀಡಿದರು.

ಮಳೆ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಹಳೆ ಸರ್ಕಾರಗಳು ಬರಿ ತಿಂದು ತೇಗಿ ಹೋಗಿದ್ದಾರೆ. ಮಳೆ ವಿಚಾರದಲ್ಲಿ ಕೆಲಸ ಮಾಡಿರೋದೆ ನಮ್ಮ ಸರ್ಕಾರ. ಬಿಜೆಪಿಯವರು ರಸ್ತೆ ಗುಂಡಿಗಳಿಗೆ ಬಣ್ಣ ಹೊಡೆದು ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಈ ರೀತಿಯ ಡೊಂಗಿ ರಾಜಕೀಯ ಬೇಡ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ನಾನು 1983 ರಿಂದಲೂ ಬೆಂಗಳೂರಿನಲ್ಲಿ ಇದ್ದೇನೆ. ಅಂದಿನಿಂದಲೂ ಇಷ್ಟು ಪ್ರಮಾಣದ ಮಳೆ ಬಂದಿಲ್ಲ. ಕಳೆದ 60 ದಿನದಲ್ಲಿ 45 ದಿನ ಮಳೆ ಬಂದಿದೆ. ಅದು ಸಹ ಭಾರಿ ಮಳೆ ಬಂದಿದೆ. ಅಂತಹ ಮಳೆಯನ್ನ ನಮ್ಮ ರಾಜಕಾಲುವೆಗಳು ತಡೆಯೋಲ್ಲ. ಪರಿಣಾಮ ಕೆಲವೆಡೆ ಅನಾಹುತ ಸಂಭವಿಸಿದೆ ಆದರೆ ಸಮಸ್ಯೆಗಳನ್ನ ನಿಭಾಯಿಸುವಲ್ಲಿ ಸರ್ಕಾರ ಸಮರ್ಥವಾಗಿ ಕೆಲಸ ಮಾಡಿದೆ. ನಮ್ಮ ಸರ್ಕಾರವೇ ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದು. ರಸ್ತೆ ಗುಂಡಿಗಳನ್ನ ಮುಚ್ಚಿದ್ದು ನಮ್ಮ ಸರ್ಕಾರವೇ. ಹಿಂದೆ ಇದ್ದ ಮುಖ್ಯಮಂತ್ರಿ ಏನ್ ಮಾಡಿದರು ಎಂದು ಬಿಜೆಪಿ ಜೆಡಿಎಸ್ ಪಕ್ಷಗಳಿಗೆ ಪ್ರಶ್ನೆ ಹಾಕಿದರು.

 

Share This Article
Leave a Comment

Leave a Reply

Your email address will not be published. Required fields are marked *