ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ – ಸಿಂಹ ಗುಡುಗು

Public TV
2 Min Read

ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್‌ (Tippu Express) ರೈಲಿನ ಹೆಸರು ಬದಲಾವಣೆ ಬೆನ್ನಲ್ಲೇ ವಿರೋಧ ಪಕ್ಷ ನಾಯಕರಿಂದ ವ್ಯಕ್ತವಾಗುತ್ತಿದ್ದ ಟೀಕೆಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಖಡಕ್ ಉತ್ತರ ನೀಡಿದ್ದಾರೆ. ನಾನು ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಮಹಾರಾಜರು ಮೈಸೂರಿಗೆ (Mysuru Wadiyar Dynasty) ಕೊಟ್ಟ ನೂರು ಕೊಡುಗೆಗಳನ್ನು ನಾನು ಹೇಳುತ್ತೇನೆ. ಟಿಪ್ಪು (Tippu Sultan) ಬೆಂಬಲಿಸುವವರು ಟಿಪ್ಪು ಕೊಟ್ಟ ಮೂರು ಕೊಡುಗೆಗಳನ್ನು ಹೇಳಲಿ ಸಾಕು ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC

ಟಿಪ್ಪುಗೂ ಮೈಸೂರಿಗೂ (Mysuru) ಏನು ಸಂಬಂಧ? ಟಿಪ್ಪು ಏನು ಮೈಸೂರಿನವನಾ? ಅವನು ಶ್ರೀರಂಗಪಟ್ಟಣದವನು. ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಕೊಡುಗೆ ಇದೆ. ಟಿಪ್ಪು ಕೊಡುಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

siddu pratap simha

ಯಾರೂ ಮಾಡದ ಸಾಧನೆ ಮಾಡಿದ್ದೇನೆ: ಈವರೆಗೆ ಒಂದು ರೈಲಿಗೆ ಇಟ್ಟಿದ್ದ ಹೆಸರನ್ನು ಬದಲಾಯಿಸಿದ ಉದಾಹರಣೆಯೇ ಇಲ್ಲ. ಆದ್ರೆ ಇದನ್ನು ಉದ್ದೇಶ ಪೂರ್ವಕವಾಗಿಯೇ ಪ್ರಯತ್ನ ಪಟ್ಟು ಬದಲಾಯಿಸಿದ್ದೇನೆ. ಮೈಸೂರು ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯನವರಿಂದ (Siddaramaiah) ನಾವು ಪಾಠ ಕಲಿಯುವ ಅಗತ್ಯ ಇಲ್ಲ. ಟಿಪ್ಪು ಹೆಸರನ್ನು ಜನರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲ ಅನ್ನುವವರ ಹೆಸರನ್ನೇ ಜನ ಮರೆಯುತ್ತಿದ್ದಾರೆ. ಅದಕ್ಕೆ ಉದಾಹರಣೆ ಕೂಡ ಇದೆ. ನಾನು ಮೈಸೂರಿಗೆ 10 ಟ್ರೈನ್‌ (Train) ತಂದಿದ್ದೇನೆ. ಈ ದೇಶದ ಯಾವುದೇ ಸಂಸದ 10 ವರ್ಷದಲ್ಲಿ ಮಾಡದ ಸಾಧನೆಯನ್ನು ನಾನು ಮಾಡಿದ್ದೇನೆ ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಪಾದಕ್ಕೂ ಬಿಎಸ್‍ವೈ ಸಮ ಇಲ್ಲ ಎಂದು ನಾನು ಹೇಳಲ್ಲ: ಸಿದ್ದರಾಮಯ್ಯ

ಟಿಪ್ಪು ಒಬ್ಬ ಕನ್ನಡ ವಿರೋಧಿ: ಟಿಪ್ಪು ಕನ್ನಡ ವಿರೋಧಿ, ಟಿಪ್ಪು ಪರ್ಶಿಯನ್ ಭಾಷೆಯನ್ನ ಹೇರಿದ್ದಾನೆ. ದಿವಾನ್ ಪದ ಸಹ ಪರ್ಶಿಯನ್ ಪದವೇ ಆಗಿದೆ. ಕಂದಾಯ ಇಲಾಖೆಯಲ್ಲಿರುವ ಪ್ರತಿಯೊಂದು ಪದಗಳೂ ಪರ್ಶಿಯನ್ ಭಾಷೆಗೆ ಸೇರಿದ್ದು. ಹೀಗಿದ್ದರೂ ಸಿದ್ದರಾಮಯ್ಯ ಅವರು ತಾವು ಓದಿದ ವಿಶ್ವವಿದ್ಯಾನಿಲಯ (Mysore University) ಕಟ್ಟಿಸಿದ್ದು ಮೈಸೂರು ಮಹಾರಾಜರು (Mysuru Wadiyar Dynasty) ಎಂಬುದನ್ನು ಮರೆತು ಮಹಾರಾಜರ ಬಗ್ಗೆ ಉಡಾಫೆಯಿಂದ ಮಾತನಾಡುತ್ತಾರೆ. ಇಂತವರ ಪಾಠ ನನಗೆ ಬೇಡ ಎಂದು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *