ಪ್ರಜ್ವಲ್ ಎಲ್ಲಿದ್ದಾರೆ ಅಂತ ಗೊತ್ತೇ ಇಲ್ಲ: ಪರಮೇಶ್ವರ್

Public TV
1 Min Read

– ಕಾರ್ತಿಕ್ ಗೌಡ ಬೆಂಗಳೂರಿನಲ್ಲೆ ಇದ್ದಾನೆ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣ ದಿನೇದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಏಪ್ರಿಲ್ 29 ರಂದು ಪ್ರಜ್ವಲ್ ರೇವಣ್ಣ (Prajwal Revanna) ವಿದೇಶಕ್ಕೆ ಹಾರಿದ್ದಾರೆ. ಆದ್ರೆ ಇದುವರೆಗೂ ಸಹ ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಪ್ರಜ್ವಲ್‍ಗಾಗಿ ಎಸ್‍ಐಟಿ (SIT) ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಇಂದು ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ (Dr. G Parameshwar) ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಪ್ರಜ್ವಲ್ ರೇವಣ್ಣ ಅವರು ಪ್ರಮುಖ ಆರೋಪಿ, ಅವರು ದೇಶ ಬಿಟ್ಟು ಹೋಗಿದ್ದಾರೆ. ಹಾಸನ ಜಿಲ್ಲೆಯ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎಸ್‍ಐಟಿ ಗಂಭಿರವಾಗಿ ಪರಿಗಣಿಸಿದೆ. ಅವರನ್ನ ವಾಪಸ್ ಕರೆತರಲು ಸಿಬಿಐಗೆ ಬ್ಲೂ ಕಾರ್ನರ್ ನೋಟಿಸ್ ನೀಡಬೇಕೆಂದು ಎಸ್‍ಐಟಿಯವರು ಮನವಿ ಮಾಡಿದ್ರು. ಅಂತೆಯೇ ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. 197 ದೇಶಗಳಲ್ಲಿ ಇಂಟರ್  ಪೋಲ್ ನಿಂದ ಬ್ಲೂ ಕಾರ್ನರ್ ನೋಟಿಸ್ ಹೋಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ- ಡಿಕೆಶಿಗೆ ದೇವರಾಜೇಗೌಡ ಓಪನ್‌ ಚಾಲೆಂಜ್

ಕಾರ್ತಿಕ್ ಗೌಡ ಇಲ್ಲಿಯೇ ಇದ್ದಾರೆ. ಅವರು ಹೇಳಿಕೆ ಕೊಟ್ಟಿದ್ದಾರೆ. ಅವರ ಬಂಧನದ ಬಗ್ಗೆ ಎಸ್ ಐಟಿ ತೀರ್ಮಾನ ಮಾಡುತ್ತೆ. ಇನ್ನು ಪ್ರಜ್ವಲ್ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಜರ್ಮನಿಗೆ ಹೋಗಿರೋದಷ್ಟೇ ಗೊತ್ತು. ದುಬೈಗೆ ಹೋಗಿದ್ದಾರೆ ಅದೆಲ್ಲ ಗೊತ್ತಿಲ್ಲ, ಇನ್ನೂ ನಿಖರವಾಗಿ ಎಲ್ಲಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ರು.

Share This Article