ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್

Public TV
3 Min Read

– ಪಕ್ಷ ನನಗೆ ತುಂಬಾ ಕೆಲಸವನ್ನು ಕೊಟ್ಟಿದೆ

ಕಲಬುರಗಿ: ಪ್ರಕರಣದ ಬಗ್ಗೆ ನಾನು ಯಾರ ಮೇಲೂ ಆರೋಪವನ್ನು ಮಾಡುವುದಿಲ್ಲ. ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ಬಿಜೆಪಿ ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಪ್ರತಿಕ್ರಿಯಿಸಿದರು.

ಮಹಿಳೆ ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯಿಸಿ, ನಾನು ಯಾವುದೇ ತಪ್ಪು ಮಾಡಿಲ್ಲ. ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಲಿ ನಾನು ಸಿದ್ಧನಿದ್ದೇನೆ. ತಪ್ಪಿತಸ್ಥರು ಯಾರೇ ಇದ್ರೂ ಕ್ರಮಕೈಗೊಳ್ಳಲಿ. ನಾನು ನಿರಂತರ ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ. ಈ ಬಗ್ಗೆ ನಾನು ಯಾರ ಮೇಲೂ ಆರೋಪವನ್ನು ಮಾಡುವುದಿಲ್ಲ ಎಂದು ವಿವರಿಸಿದರು. ಇದನ್ನೂ ಓದಿ: ಸೇಡಂ ಬಿಜೆಪಿ ಶಾಸಕ ತೇಲ್ಕೂರ್‌ಗೆ ಮಹಿಳೆ ಬ್ಲಾಕ್‍ಮೇಲ್

ನಾನು ಈ ಕುರಿತು ಯಾವುದೇ ರೀತಿ ಮಾತನಾಡುವುದಿಲ್ಲ. ಈ ಬಗ್ಗೆ ನೀವು ಸಹ ಕೂಲಂಕುಶವಾಗಿ ನೀವು ಸಹ ತನಿಖೆಯನ್ನು ಮಾಡಬೇಕು. ನೀವು ಸತ್ಯ ಏನಿದೆ ಎಂಬುದನ್ನು ಪ್ರಕಟ ಮಾಡಬೇಕು. ಮಾಧ್ಯಮದವರ ಮೇಲೆ ನನಗೆ ವಿಶ್ವಾಸವಿದೆ. ನಿಮಗೆ ನಿಮ್ಮದೇ ಆದ ವಿಂಗ್ ಇದೆ. ನೀವೇ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸತ್ಯವನ್ನು ತೋರಿಸಿ. ನಾನು ಈ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ದಾಖಲಿಸಿದ್ದೇನೆ ಎಂದರು.

ಫೆ.4ರಂದು ಸಿಎಂ ಅವರ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಟ್ವೀಟ್ ಬಂದಿದೆ ಎಂದು ನನಗೆ ಮಾಹಿತಿ ಬಂತು. ಆಗ ನಾನು ಕಲಬುರಗಿಯಲ್ಲಿ ಮೇಯರ್ ಚುನಾವಣೆಯಲ್ಲಿದ್ದೆ. ತಕ್ಷಣ ಫೆ.5ರಂದು ಬೆಂಗಳೂರಿಗೆ ನಾನು ಬಂದು ವಿಧಾನಸಭೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇನೆ ಎಂದು ಹೇಳಿದರು.

ಕೇಸ್ ದಾಖಲಿಸುವುದಕ್ಕೂ ಮುನ್ನ ಸಿಎಂ ಜೊತೆ ಚರ್ಚೆ ಮಾಡಿದ್ರಾ ಎಂಬ ಪ್ರಶೆಗೆ ಉತ್ತರಿಸಿದ ಅವರು, ಪ್ರಕರಣದಲ್ಲಿ ಸುಖಾ ಸುಮ್ಮನೆ ಸಿಎಂ ಬೊಮ್ಮಾಯಿ ಹೆಸರು ತರವುದು ಸರಿ ಅಲ್ಲ. ನಾನು ಯಾರ ಬಳಿಯೂ ಈ ದೂರಿನ ಕುರಿತು ಮಾತುಕತೆ ಮಾಡಿಲ್ಲ. ಮೊದಲು ನಾನು ದೂರು ಕೊಟ್ಟಿದ್ದೇನೆ. ಉಳಿದಿದ್ದು ಪೊಲೀಸರು ನೋಡಿಕೊಳ್ಳುತ್ತಾರೆ ಎಂದರು.

ಪ್ರಾಥಮಿಕ ಮಾಹಿತಿ ಏನೂ ಸಿಕ್ಕಿಲ್ಲ. ಪ್ರಸ್ತುತ ನಾನು ಎಫ್‍ಐಆರ್ ದಾಖಲಿಸಿದ್ದೇನೆ. ಇನ್ನುಳಿದಂತೆ ಪೊಲೀಸರು ನೋಡಿಕೊಳ್ಳುತ್ತಾರೆ. ಈ ಬಗ್ಗೆ ನಾನು ಪೊಲೀಸರ ಜೊತೆ ಯಾವುದೇ ರೀತಿಯ ಸಂಪರ್ಕವನ್ನು ಮಾಡುವುದಿಲ್ಲ. ಅವರು ಈ ಕುರಿತು ತನಿಖೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ನಾನು ಅವರಿಗೆ ರಾಜಕೀಯ ಒತ್ತಡಗಳನ್ನು ಏರುವುದಿಲ್ಲ. ಈ ಹಿಂದೆ ಯಾರು ಇದ್ದಾರೆ ಎಂದು ನಾನು ಆರೋಪಗಳನ್ನೂ ಮಾಡುವುದಿಲ್ಲ. ನನಗೆ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.

ನನಗೂ ಸಹ ಕುಟುಂಬವಿದೆ, ಹೀಗಾಗಿ ತುಂಬಾ ನೊಂದಿದ್ದೇನೆ. ನಾನು ಈ ಬಗ್ಗೆ ಹೆಚ್ಚು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನನಗೂ ಕುಟುಂಬವಿದೆ. ತನಿಖೆ ವೇಳೆ ಸಿಕ್ಕ ಮಾಹಿತಿಯನ್ನು ನೀವು ಸಹ ನೋಡಬಹುದು. ಇಂತಹ ಕೆಲಸ ನಾನು ಮಾಡುವುದೂ ಇಲ್ಲ. ಪಕ್ಷಕ್ಕೆ, ಕಾರ್ಯಕರ್ತರಿಗೆ, ಮತದಾರರಿಗೆ ಮುಜುಗರ ತರುವ ಕೆಲಸ ನನ್ನಿಂದ ಆಗಿಲ್ಲ. ನಾನು ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು.

ನಾನು ಪರಿಪಾಲಕ. ಕಾನೂನು ಏನೇ ತೀರ್ಮಾನ ತೆಗೆದುಕೊಂಡರು ನಾನು ಅದನ್ನು ಪಾಲಿಸುತ್ತೇನೆ. ಹೆಚ್ಚಿನ ಮಾಹಿತಿ ಬೇಕಾದರೆ ಪೊಲೀಸರ ಬಳಿ ತೆಗೆದುಕೊಳ್ಳಿ. ಇದಕ್ಕಿಂತ ಹೆಚ್ಚು ನಾನು ಏನನ್ನು ಹೇಳಲು ಇಷ್ಟಪಡುವುದಿಲ್ಲ. ನೀವು ಸಹ ಈ ಕುರಿತು ಹೆಚ್ಚಿನ ತನಿಖೆ ಮಾಡಿ ನಂತರ ವರದಿ ಮಾಡಿ ಎಂದು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು. ಇದನ್ನೂ ಓದಿ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

ಪಕ್ಷ ನನಗೆ ತುಂಬಾ ಕೆಲಸವನ್ನು ಕೊಟ್ಟಿದೆ. ಜನರಿಗಾಗಿ ನಾನು ತುಂಬಾ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ನಾನು ಯಾವುದೇ ರೀತಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಪಕ್ಷವನ್ನು ಸಂಫಟನೆ ಮಾಡುವಂತಹ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ಪಕ್ಷ ಮತ್ತು ಜನರು ನನಗೆ ಕೊಟ್ಟ ಅಧಿಕಾರವನ್ನು ನಾನು ನೋಡಿಕೊಳ್ಳುತ್ತೇನೆ. ಅದಕ್ಕೆ ನನ್ನ ಸಂಪೂರ್ಣ ಸಮಯವನ್ನು ಮೀಸಲಿಡುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *