ಸ್ತ್ರೀವಾದದ ಮೇಲೆ ನನಗೆ ನಂಬಿಕೆ ಇಲ್ಲ: ನಟಿ ನೋರಾ ಫತೇಹಿ

Public TV
1 Min Read

ಬಾಲಿವುಡ್ ನಟಿಯರು ಹಣಕ್ಕಾಗಿ ಶ್ರೀಮಂತರನ್ನು ಮದುವೆ ಆಗುತ್ತಿದ್ದಾರೆ. ಯಾರೂ ಪತಿಯ ಜೊತೆ ಸುಖವಾಗಿ ಇಲ್ಲ ಎಂದು ಹೇಳುವ ಮೂಲಕ ಬಿಟೌನ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ತಮಗೆ ಸ್ತ್ರೀವಾದದ ಮೇಲೆ ನಂಬಿಕೆ ಇಲ್ಲ. ಗಂಡು, ಹೆಣ್ಣು ಎಲ್ಲರೂ ಇಲ್ಲಿ ಸರಿಸಮಾನರು ಎಂದಿದ್ದಾರೆ.

ಸ್ತ್ರೀವಾದದ ಬಗ್ಗೆ ನೋರಾ ಆಡಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಸುನಾಮಿಯನ್ನೇ ಸೃಷ್ಟಿ ಮಾಡಿವೆ. ಸ್ತ್ರೀವಾದ ಹೆಚ್ಚಾದರೆ ಅದು ಅಪಾಯ ಎಂದು ಹೇಳಿದ ಮಾತಿಗೆ ಹಲವು ಜನರು ತಕರಾರು ತೆಗೆದಿದ್ದಾರೆ. ಹೆಣ್ಣು ತನ್ನ ಕೆಲಸವನ್ನು ತಾನು ಮಾಡುತ್ತಾಳೆ, ಗಂಡು ತನ್ನ ಕೆಲಸವನ್ನು ಮಾಡುತ್ತಾನೆ. ಇದರಲ್ಲಿ ತಾರತಮ್ಯ ಏನಿದೆ ಎನ್ನುವ ಪ್ರಶ್ನೆ ನೋರಾರದ್ದು.

ಹೆಣ್ಣು ಗೃಹಿಣಿಯಾಗಿ ಮನೆಯನ್ನು ನೋಡಿಕೊಳ್ಳುವುದು, ಗಂಡ ಆಚೆ ಕೆಲಸ ಮಾಡಿ ಬರುವುದು ಅಥವಾ ಹೆಣ್ಣು ಆಚೆ ಕೆಲಸ ಮಾಡಿಕೊಂಡು ಬರುವುದು, ಗಂಡು ಮನೆ ಗೆಲಸದಲ್ಲಿ ನೆರವಾಗುವುದು ಹೀಗೆ ಎಲ್ಲವನ್ನೂ ತೀರಾ ಅನ್ನುವಂತೆ ಬಣ್ಣಿಸಲಾಗುತ್ತಿದೆ. ಹಾಗಾಗಿ ಒಬ್ಬರು ಹೆಚ್ಚು ಇನ್ನೊಬ್ಬರು ಕಡಿಮೆ ಎನ್ನುವಂತಹ ವಾತಾವರಣ ಸೃಷ್ಟಿ ಆಗುತ್ತಿದೆ.

 

ಕೆಲವರು ನೋರಾ ಮಾತನ್ನು ನೂರಕ್ಕೆ ನೂರರಷ್ಟು ಒಪ್ಪಿದರೆ, ಇನ್ನೂ ಕೆಲವರು ಅದಕ್ಕೆ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ, ನೋರಾ ತಮಗೆ ತಿಳಿದಿದ್ದನ್ನು ಹೇಳಿ ಪರ ವಿರೋಧದ ಚರ್ಚೆಗೆ ತಿದಿ ಒತ್ತಿದ್ದಾರೆ.

Share This Article