ನನಗೆ ಚರಂಡಿ, ರಸ್ತೆಯೂ ಮಾಡಿಸೋಕೆ ಆಗ್ತಿಲ್ಲ – ಮೊಳಕಾಳ್ಮೂರು ಶಾಸಕ ಗೋಪಾಲಕೃಷ್ಣ ಅಸಹಾಯಕತೆ

Public TV
1 Min Read

ಚಿತ್ರದುರ್ಗ: ನಾನು ಶಾಸಕನಾಗಿ ಒಂದು ಚರಂಡಿ, ರಸ್ತೆ ಹಾಗೂ ಶಾಲೆ ನಿರ್ಮಿಸಲಾಗುತ್ತಿಲ್ಲ ಎಂದು ಮೊಳಕಾಲ್ಮೂರು (Molakalmuru) ಶಾಸಕ ಎನ್‌ವೈ ಗೋಪಾಲಕೃಷ್ಣ (NY Gopalakrishna) ಅಸಮಧಾನ ಹೊರಹಾಕಿದ್ದಾರೆ.

ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಖಾಸಗಿ ಕಂಪನಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಶಾಸಕನಾಗಿ ಒಂದು ಚರಂಡಿ, ರಸ್ತೆ, ಶಾಲೆ ನಿರ್ಮಿಸಲಾಗುತ್ತಿಲ್ಲ ಎನ್ನುವ ಮೂಲಕ ಸರ್ಕಾರದಲ್ಲಿ ಏನೂ ಕೆಲಸ ಆಗುತ್ತಿಲ್ಲ ಎಂದು ಪರೋಕ್ಷವಾಗಿ ಅಸಹಾಯಕತೆ ಹೊರಹಾಕಿದರು. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ವಿತರಿಸಿದ ಶೈಲೇಂದ್ರ ಬೆಲ್ದಾಳೆ

ಇನ್ನು ಈ ಗಡಿಭಾಗದಲ್ಲಿ ಆರಂಭಿಸುತ್ತಿರುವ ಖಾಸಗಿ ಕಂಪನಿಯವರಿಗೇನು ಮೂರ್ಖತನವೊ ತಿಳಿಯದು. ನಾನು ಶಾಸಕನಾಗಿ ಒಂದು ಚರಂಡಿ, ರಸ್ತೆ ಸೇರಿದಂತೆ ಶಾಲೆ ಸಹ ನಿರ್ಮಾಣ ಮಾಡಲಾಗುತ್ತಿಲ್ಲ. ಇಂತಹ ಸಮಯದಲ್ಲಿ ಈ ಭಾಗದಲ್ಲಿ ಬಂದು ಖಾಸಗಿ ಕಂಪನಿಯವರೇನು ಮಾಡುತ್ತಾರೆಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ತಾಂತ್ರಿಕ ದೋಷ – ಜಮ್ಮುವಿಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನ ದೆಹಲಿಗೆ ವಾಪಸ್

ಇನ್ನು ಈ ಖಾಸಗಿ ಕಂಪನಿಗೆ ನಾನು ಸಹ ಕುಟುಂಬ ಸದಸ್ಯ ಎಂದುಕೊಳ್ಳಿ. ಹೀಗೆ ಹೇಳಿದ ಮಾತ್ರಕ್ಕೆ ಶೇರ್ ಹೋಲ್ಡರ್ ಎಂದುಕೊಳ್ಳಬೇಡಿ. ನಾನು ಉಚಿತ ಸೇವೆ ಮಾಡುವವನು ಎಂದು ಶಾಸಕ ಮಾತನಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ನಾವು, ನಮ್ಮ ಕುಟುಂಬ ಇ.ಡಿ ಎದುರಿಸಲು ರೆಡಿ ಇದ್ದೇವೆ: ಡಿಕೆಶಿ

Share This Article