ನಾನು ತಂದೆಯಾಗಿದ್ದೇನೆ: ಪಬ್ಲಿಕ್‌ನಲ್ಲಿ ಸಂಭ್ರಮಿಸಿದ ರಣ್‌ವೀರ್ ಸಿಂಗ್

Public TV
1 Min Read

ಬಾಲಿವುಡ್ ನಟ ರಣ್‌ವೀರ್ ಸಿಂಗ್ (Ranveer Singh) ಅವರು ತಂದೆಯಾದ ಖುಷಿಯಲ್ಲಿದ್ದಾರೆ. ಮುದ್ದು ಮಗಳ ಆಗಮನದ ನಂತರ ಇದೀಗ ಸಾರ್ವಜನಿಕವಾಗಿ ನಟ ಕಾಣಿಸಿಕೊಂಡಿದ್ದಾರೆ. ಸಮಾರಂಭವೊಂದರಲ್ಲಿ ನಾನು ತಂದೆಯಾಗಿದ್ದೇನೆ ಎಂದು ರಣ್‌ವೀರ್ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಹಂಸ ದಮಯಂತಿಯಂತೆ ಪೋಸ್ ಕೊಟ್ಟ ಹರ್ಷಿಕಾ

ಮನೆಗೆ ಮುದ್ದು ಮಗಳ ಆಗಮನದ ಖುಷಿಯಲ್ಲಿದ್ದಾರೆ ರಣ್‌ವೀರ್ ಸಿಂಗ್ ದಂಪತಿ. ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದ ರಣ್‌ವೀರ್ ಇದೀಗ ಅನಂತ್ ಅಂಬಾನಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ನಾನು ತಂದೆಯಾಗಿದ್ದೇನೆ ಎಂದು ಪಬ್ಲಿಕ್‌ನಲ್ಲಿ ಪಾಪರಾಜಿಗಳ ಮುಂದೆ ಸಂಭ್ರಮಿಸಿದ್ದಾರೆ. ಅವರು ಖುಷಿ ಹಂಚಿಕೊಂಡ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

 

View this post on Instagram

 

A post shared by Viral Bhayani (@viralbhayani)

ಇನ್ನೂ 2018ರಲ್ಲಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮತಿ ಪಡೆದು ಹೊಸ ಬಾಳಿಗೆ ಕಾಲಿಟ್ಟರು. ಸೆ.8ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಇನ್ನೂ ಡಾನ್ 3, ಆದಿತ್ಯಾ ಧರ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಣ್‌ವೀರ್‌ ಸಿಂಗ್‌ ಕೈಯಲ್ಲಿವೆ.

Share This Article