ನಾನು ಬಾಬಾ ರಾಮ್‍ದೇವ್ ಶಿಬಿರದಲ್ಲಿ ತರಬೇತಿ ಪಡೆದ ಯೋಗ ಪಟು: ಲಕ್ಷ್ಮಿ ಹೆಬ್ಬಾಳ್ಕರ್

Public TV
1 Min Read

ಉಡುಪಿ: ನಾನು ಬಾಬಾ ರಾಮ್‍ದೇವ್ ಶಿಬಿರದಲ್ಲಿ ತರಬೇತಿ ಪಡೆದ ಯೋಗ ಪಟು. ನಾನು ನನ್ನ ಪತಿ ಹಾಗೂ ಕುಟುಂಬದವರೆಲ್ಲ ಯೋಗ (Yoga) ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.

ಉಡುಪಿಯಲ್ಲಿ (Udupi) ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ವಿದ್ಯಾರ್ಥಿಗಳೊಂದಿಗೆ ಯೋಗ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಬಾಬಾ ರಾಮ್ ದೇವ್ ಶಿಬಿರದಲ್ಲಿ ತರಬೇತಿ ಪಡೆದ ಯೋಗ ಪಟು. ನನ್ನ ತಂದೆ ತಾಯಿ ಸಹ ಯೋಗ ಮಾಡುತ್ತಿದ್ದರು. ತಾಯಿಯ ಪ್ರೇರಣೆಯಿಂದ ಯೋಗ ಮಾಡುತ್ತಿದ್ದೆ. ಈಗ ಅಪಘಾತದ ಬಳಿಕ ಬೆನ್ನುಹುರಿ ಸಮಸ್ಯೆಯಾಗಿ ಯೋಗ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಶ್ರೀಕಾಂತ್‌ ಶೆಟ್ಟಿಗೆ 3 ತಿಂಗಳು ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ

ನಾವು ಅಕ್ಕತಂಗಿಯರು, ತಾಯಿ ಒಟ್ಟಿಗೆ ಕುಳಿತು ಯೋಗ ಮಾಡುತ್ತಿದ್ದೆವು. ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಬಾಬಾ ರಾಮ್‍ದೇವ್ ಅವರ ಐದು ಶಿಬಿರಗಳಲ್ಲಿ ನಾನು ಭಾಗಿಯಾಗಿದ್ದೆ ಎಂದಿದ್ದಾರೆ.

ಬಿ.ಆರ್. ಪಾಟೀಲ್ ಆಡಿಯೋ ವಿಚಾರವಾಗಿ, ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಮೂರು ಬಾರಿ ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ಯೂಟರ್ನ್‌ – ಅಮೆರಿಕ ಭೇಟಿಗೆ ಅವಕಾಶ ಸಿಕ್ಕಿದ ಬೆನ್ನಲ್ಲೇ MEA ವಿರುದ್ಧ ಪ್ರಿಯಾಂಕ್‌ ಖರ್ಗೆ ಕೆಂಡಾಮಂಡಲ

Share This Article