ಇಡೀ ರಾಜ್ಯಕ್ಕೆ ನಾನೊಬ್ಬನೇ ಎಂಎಲ್‍ಎ: ಪ್ರಥಮ್

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಬಿಸಿ ಕಡಿಮೆ ಆಗುತ್ತಿದ್ದಂತೆ, ಇತ್ತ ಚಂದನವನದಲ್ಲಿ ಎಂಎಲ್‍ಎ ಹವಾ ಏರುತ್ತಿದೆ. ಅದೇನಪ್ಪ ಸ್ಯಾಂಡಲ್‍ವುಡ್‍ನಲ್ಲಿ ಯಾವ ಚುನಾವಣೆ ಬಂತು ಲೆಕ್ಕ ಹಾಕ್ತಿದ್ದರೆ ನಿಮ್ಮ ಊಹೆ ಸುಳ್ಳು. ಇಷ್ಟು ದಿನ ನಾನು ಒಳ್ಳೆ ಹುಡ್ಗ ಅಂತಾ ಹೇಳಿಕೊಂಡು ಬರುತ್ತಿದ್ದ ಪ್ರಥಮ್, ನಾನೇ ಇಡೀ ರಾಜ್ಯದ ಎಂಎಲ್‍ಎ ಅಂತಾ ಹೇಳುತ್ತಿದ್ದಾರೆ.

ಪ್ರಥಮ್ ಅಭಿನಯಿಸುತ್ತಿರುವ ಸಿನಿಮಾ ಹೆಸರು ಎಂಎಲ್‍ಎ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಎಂಎಲ್‍ಎ ಚಿತ್ರ ತನ್ನದೇ ಚಾಪನ್ನು ಸಿನಿ ಅಂಗಳದಲ್ಲಿ ಹುಟ್ಟುಹಾಕಿದೆ. ಭಾಗಶಃ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಾಸ್ಯ ಕಥಾನಕವನ್ನು ಹೊಂದಿರುವ ಎಂಎಲ್‍ಎ(ಮದರ್ ಪ್ರಾಮೀಸ್ ಲೆಕ್ಕಕ್ಕಿಲ್ಲದ ಆಸಾಮಿ) ಚೆನ್ನಾಗಿ ಮೂಡಿಬಂದಿದೆ ಅಂತಾ ಚಿತ್ರತಂಡ ತಿಳಿಸಿದೆ.

ಸಾಮಾನ್ಯ ಹುಡುಗನ ತುಂಟಾಟ, ಚೇಷ್ಠೆಗಳು ಎಲ್ಲವನ್ನು ಹೊತ್ತುಕೊಂಡು ಎಂಎಲ್‍ಎ ರೂಪದಲ್ಲಿ ಪ್ರಥಮ್ ಚಿತ್ರದಲ್ಲಿ ಕಾಣಸಿಗುತ್ತಾರೆ. ಎಂಎಲ್‍ಎ ಆಗಬೇಕಾದವನು ಏನು ಆಗುತ್ತಾನೆ ಎಂಬುವುದು ಚಿತ್ರದ ತಿರುಳು. ಸ್ಪರ್ಶ ಖ್ಯಾತಿಯ ರೇಖಾ ಸಹ ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಆಡಿಯೋ ಹಕ್ಕುಗಳನ್ನು PRK ಸ್ಟುಡಿಯೋ ಖರೀದಿಸಿದೆ. ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ಬಂಡವಾಳ ಹಾಕಿದ್ರೆ, ಆರ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಗೆ ಕೃಷ್ಣ ಸಾರಥಿ ಛಾಯಾಗ್ರಹಣವನ್ನ ಹೊಂದಿದ್ದು, ವಿಕ್ರಮ್ ಸುಬ್ರಹ್ಮಣ್ಯ ಸಂಗೀತ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *