ಕೆನಡಾದಲ್ಲಿ ನಡೆದ ಗುಂಡಿನ ದಾಳಿ ಬಳಿಕ ನಾನು ಸೇಫ್ ಎಂದ ಎಪಿ ಧಿಲ್ಲೋನ್

Public TV
1 Min Read

ಕೆನಡಾದ ವ್ಯಾಂಕೋವರ್‌ನಲ್ಲಿರುವ ಪಂಜಾಬಿ ಗಾಯಕ ಎಪಿ ಧಿಲ್ಲೋನ್ (AP Dhillon) ಮನೆಯ ಹೊರಗೆ ಸೆ.1ರಂದು ಗುಂಡಿನ ದಾಳಿ ನಡೆದ ಬಳಿಕ ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಐ ಆ್ಯಮ್ ಸೇಫ್ ಎಂದು ಗಾಯಕ ಎಪಿ ಧಿಲ್ಲೋನ್ ಪೋಸ್ಟ್ ಮಾಡಿದ್ದಾರೆ.

ಕೆನಡಾದಲ್ಲಿ ನಡೆದ ಗುಂಡಿನ ದಾಳಿ ಬಳಿಕ ಇನ್ಸ್ಟಾಗ್ರಾಂ ಗಾಯಕ ಪೋಸ್ಟ್ ಮಾಡಿದ್ದು, ನಾನು ಸುರಕ್ಷಿತವಾಗಿದ್ದೇನೆ. ನನ್ನ ಕುಟುಂಬವು ಸುರಕ್ಷಿತವಾಗಿದೆ. ನಮ್ಮನ್ನು ಸಂಪರ್ಕಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಬೆಂಬಲವೇ ಎಲ್ಲವೂ ಎಂದು ಎಪಿ ಧಿಲ್ಲೋನ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ

 

View this post on Instagram

 

A post shared by AP DHILLON (@apdhillon)

ಇನ್ನೂ ಗ್ಯಾಂಗ್‌ಸ್ಟರ್ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಸಹಚರ ರೋಹಿತ್ ಗೋಡಾರಾ ಈ ದಾಳಿಯ ಹೊಣೆಯನ್ನು ಹೊತ್ತಿದ್ದಾನೆ. ಕೆನಡಾದ ವಿಕ್ಟೋರಿಯಾ ದ್ವೀಪ ಮತ್ತು ಟೊರೊಂಟೊದ ವುಡ್‌ಬ್ರಿಡ್ಜ್‌ನಲ್ಲಿ ಗುಂಡಿನ ದಾಳಿ ನಡೆಸಿರುವ ವಿಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ:ದರ್ಶನ್‌ ಗ್ಯಾಂಗ್‌ನ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ

ಅಂದಹಾಗೆ, ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ‘ಓಲ್ಡ್ ಮನಿ’ ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ಎಪಿ ಧಿಲ್ಲೋನ್ ಕಾಣಿಸಿಕೊಂಡ ವಾರಗಳ ನಂತರ ಈ ಘಟನೆ ನಡೆದಿದೆ. ಸಲ್ಮಾನ್ ಖಾನ್ ಜೊತೆ ಗಾಯಕ ಎಪಿ ಧಿಲ್ಲೋನ್ ಕಾಣಿಸಿಕೊಂಡಿದಕ್ಕೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.

Share This Article