ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಅಂದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ-ಮುಖ್ಯಮಂತ್ರಿ ಚಂದ್ರು

Public TV
1 Min Read

ಚಿತ್ರದುರ್ಗ: ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಹೇಳಿದ್ರು ನನ್ನ ಪದವಿಗೆ ಧಕ್ಕೆ ಆಗಲ್ಲವೆಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ವಿಜಯಾನಂದ ಕಾಶಪ್ಪನವರ್ ಬಗ್ಗೆ ಅಪಾರವಾದ ಗೌರವವಿದೆ ಅವರು ಅವರ ಹಕ್ಕನ್ನು ಸರ್ಕಾರದೊಂದಿಗೆ ಕೇಳಬಹುದು. ನಾನು, ಅವರು ಏಕವಚನದಲ್ಲಿ ಮಾತನಾಡಿದರು ಅಗೌರವದಿಂದ ಮಾತನಾಡಿದರೆಂದು ನಾನು ಆ ತಪ್ಪು ಮಾಡುವುದಿಲ್ಲ. ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಹೇಳಿದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ. ಅವರ ಹಕ್ಕು ಅವರು ಕೇಳುತ್ತಿದ್ದಾರೆ. ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ. ಕಾಶಪ್ಪನವರ್ ದೊಡ್ಡವರು ಏನು ಹೇಳಿದ್ರು ಆಶೀರ್ವಾದ ಅಂತ ತಿಳಿದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ: ಕಾಶಪ್ಪನವರ್

ನನಗೆ ಎಲ್ಲಾ ಸಮುದಾಯಗಳ ಬಗ್ಗೆ ಗೌರವವಿದೆ. ತಳ ಸಮುದಾಯಗಳಿಗಾದ ಅನ್ಯಾಯವನ್ನು ಅವರು ಗಮನಿಸಬೇಕಿದೆ. ಮುಂದುವರೆದ ಶ್ರೀಮಂತರೆನಿಸಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ನಮಗೆ ಅನ್ಯಾಯವಾಗುತ್ತದೆ. ಹೀಗಾಗಿ ನಮ್ಮ ಅನ್ನ ಬೇರೆಯವರು ತೆಗೆದುಕೊಂಡು ಹೋದರೆ ನಾವು ಎಲ್ಲಿಗೆ ಹೋಗಬೇಕು ಎಂದು ಕಿಡಿಕಾರಿದರು.

ಸಾಮಾಜಿಕ ಹಾಗೂ ಶೈಕ್ಷಣಿಕ ಮಾನದಂಡದ ಮೇಲೆ ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಆಗುವುದಿಲ್ಲ. ಈ ಬಗ್ಗೆ ಸರ್ಕಾರ ನ್ಯಾಯಯುತವಾಗಿ ಯೋಚಿಸಬೇಕು ಪಂಚಮಸಾಲಿ ಮಾತ್ರ ಅಲ್ಲ 2ಎ ಗೆ ಅರ್ಹತೆ ಇಲ್ಲದವರು ಯಾರೇ ಬಂದರು ವಿರೋಧ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬಲಿಷ್ಠ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸದಂತೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ

Share This Article
Leave a Comment

Leave a Reply

Your email address will not be published. Required fields are marked *