ಚಾಮುಂಡೇಶ್ವರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ- ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ

Public TV
3 Min Read

ಬೆಂಗಳೂರು: ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪರಾಷ್ಟ್ರಪತಿ ಚುನಾವಣೆಗೆ ಮಾರ್ಗರೇಟ್ ಆಳ್ವಾ ಆಯ್ಕೆ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಆತ್ಮಸಾಕ್ಷಿ ಮತ ನೀಡಿ ಅಂತ ಕೇಳ್ತಿದ್ದೇವೆ. ಯಶವಂತ್ ಸಿನ್ಹಾರಿಗೂ ಆತ್ಮಸಾಕ್ಷಿ ಮತ ಹಾಕಿ ಎಂದು ಹೇಳಿದರು.

ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ನಮ್ಮ ಶಾಸಕರು, ಶರತ್ ಬಚ್ಚೇಗೌಡ ನಮ್ಮ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಪರ ಮತ ಹಾಕ್ತಿದ್ದಾರೆ. ಈಗಾಗಲೇ 20 ಶಾಸಕರು ಮತ ಹಾಕಿದ್ದಾರೆ. ಕೇಂದ್ರ ಸರ್ಕಾರ ಅಚ್ಚೇ ದಿನ ಆಯೇಗಾ ಅಂತ ಹೇಳಿದ್ದರು. ಮೋದಿ ಜನರ ಮುಂದೆ ಭರವಸೆ ಇಟ್ಟು ಜನರಿಗೆ ಆಸೆ ಹುಟ್ಟಿಸಿದ್ರು. ಜನರು ಒಳ್ಳೆ ದಿನ ಬರುತ್ತೆ ಅಂತ ಆಸೆ ಇಟ್ಟಿದ್ರು. ಹೀಗಾಗಿ ಎರಡು ಬಾರಿ ಅವಕಾಶ ಕೊಟ್ರು ಎಂದರು.

8 ವರ್ಷಗಳನ್ನ ಮೋದಿ ಪೂರೈಸಿದ್ದಾರೆ. ಸಂಭ್ರಮ ಕೂಡಾ ಮಾಡಿದ್ರು. ಪೇಪರ್, ಟಿವಿಗಳಲ್ಲಿ ಜಾಹೀರಾತು ಕೊಟ್ರು. ಕರ್ನಾಟಕಕ್ಕೆ 1.29 ಲಕ್ಷ ಕೋಟಿ ಕೊಟ್ಟಿದ್ದೇವೆ ಅಂತ ಹೇಳಿಕೊಂಡಿದ್ದಾರೆ. ಕರ್ನಾಟಕದಿಂದ 8 ವರ್ಷ ಕೇಂದ್ರಕ್ಕೆ 19 ಲಕ್ಷ ಕೋಟಿ ಟ್ಯಾಕ್ಸ್ ವಸೂಲಾಗಿದೆ. ಕಳೆದ ವರ್ಷ 3 ಲಕ್ಷ ಕೋಟಿ ತೆರಿಗೆ ವಸೂಲಿ ಆಗಿತ್ತು. ತೆರಿಗೆ ಕೊಡೋದ್ರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದೆ. 19 ಲಕ್ಷ ತೆರಿಗೆ ತಗೊಂಡು 1.29. ಲಕ್ಷ ಕೋಟಿ ಕೊಟ್ಟಿದ್ದೀವಿ ಅಂತಾರೆ. ನಮ್ಮ ಪಾಲು 8 ಲಕ್ಷ ಕೋಟಿ ಬರಬೇಕು ಎಂದು ಹೇಳಿದರು.

PETROL

ಅಚ್ಚೇ ದಿನ್ ಅಂತ ಜನರಿಗೆ ಮೋಸ ಮಾಡಿದ್ದಾರೆ. ಇವರು ಬಂದ ಮೇಲೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಡಿಸೇಲ್, ಪೆಟ್ರೋಲ್ ಸೇರಿ ಎಲ್ಲಾ ಬೆಲೆ ಏರಿಕೆ ಆಗಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ಪೆಟ್ರೋಲ್ ಡೀಸೆಲ್, ಗ್ಯಾಸ್ ಕಡಿಮೆ ಇತ್ತು. ಇವತ್ತು ಎಲ್ಲವೂ ಹೆಚ್ಚಾಗಿದೆ. ಅಡುಗೆ ಎಣ್ಣೆ ದರ ಹೆಚ್ಚಳ ಆಗಿದೆ. ಅಚ್ಚೇ ದಿನ್ ಅಂತ ಹೇಳಿಕೊಂಡು ಬಂದವರು ಜನರ ರಕ್ತ ಕುಡಿದಿದ್ದಾರೆ ಎಂದು ಕಿಡಿಕಾರಿದರು.  ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ NDA ಅಭ್ಯರ್ಥಿ ಧನಕರ್ ನಾಮಪತ್ರ ಸಲ್ಲಿಕೆ- ಮೋದಿ, ಶಾ ಭಾಗಿ

ಜನರಿಗೆ ದೊಡ್ಡ ಅನ್ಯಾಯ, ದ್ರೋಹ ಮಾಡಿದ್ದಾರೆ. ಇವತ್ತಿನಿಂದ ಜಿಎಸ್‍ಟಿ ಹೆಚ್ಚಳ ಮಾಡಿದ್ದಾರೆ. ಮೊಸರು, ಮಜ್ಜಿಗೆ, ಲಸ್ಸಿ ಗೆ 5% ಟ್ಯಾಕ್ಸ್ ಹಾಕಿದ್ದಾರೆ. ಅಕ್ಕಿ ಗೋಧಿ, ಜೇನು ತುಪ್ಪ, ಆಸ್ಪತ್ರೆಗಳ ಕೊಠಡಿಗಳ ಮೇಲೂ ಟ್ಯಾಕ್ಸ್ ಹಾಕಿದ್ದಾರೆ. ಸೋಲಾರ್ ವಾಟರ್ ಹೀಟರ್ 12% ಟ್ಯಾಕ್ಸ್ ಮಾಡಿದ್ದಾರೆ. ಎಲ್‍ಇಡಿ ಬಲ್ಬ್ ಬೆಲೆ ಏರಿಕೆ ಮಾಡಿದ್ದಾರೆ. ಚೆಕ್ ಬುಕ್ ಮೇಲೆ ಟ್ಯಾಕ್ಸ್ ಹಾಕಿದ್ದಾರೆ. ರೈತರ ಹಣ್ಣು, ತರಕಾರಿ ವಿಂಗಡಣೆಗೂ ಟ್ಯಾಕ್ಸ್ ಹಾಕಿದ್ದಾರೆ. ಪಂಪ್ ಗಳು, ಮೋಟಾರ್ ಟ್ಯಾಕ್ಸ್ ಕೂಡಾ ಹೆಚ್ಚಳ ಮಾಡಿದ್ದಾರೆ. ವಿದ್ಯಾರ್ಥಿಗಳು ಬಳಸುವ ಭೂಪಟ, ಮ್ಯಾಪ್ ಎಲ್ಲಕೂ ಟ್ಯಾಕ್ಸ್ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಾಮಾನ್ಯ ಜನ, ಬಡವರು, ಮಧ್ಯಮ ವರ್ಗವರು ಈ ಪದಾರ್ಥಗಳನ್ನ ಬಳಸುತ್ತಾರೆ. ಹೊಟೇಲ್ ಕೊಠಡಿಗೂ ಟ್ಯಾಕ್ಸ್ ಹಾಕಿದ್ದಾರೆ. ಇದು ಎಷ್ಟು ಸರಿ. ಶ್ರೀಮಂತರ ತೆರಿಗೆ ಕಡಿಮೆ ಮಾಡಿದ್ದೀರಾ. ಬಡವರ ಪದಾರ್ಥಗಳ ಮೇಲೆ ತೆರಿಗೆ ಹಾಕಿದ್ದೀರಾ. ಸಂಬಳ ಜಾಸ್ತಿ ಆಗಿಲ್ಲ, ನಿರುದ್ಯೋಗ ಇದೆ. ರೈತರಿಗೆ ಆದಾಯ ಹೆಚ್ಚಾಗಿಲ್ಲ. ಕೂಲಿ ಕೆಲಸ ಮಾಡೋರಿಗೆ ಆದಾಯ ಹೆಚ್ಚಳ ಆಗಿಲ್ಲ. ಈ ರೀತಿ ರಕ್ತ ಹೀರೋ ಕೆಲಸ ಮೋದಿ ಸರ್ಕಾರ ಮಾಡ್ತಿದೆ. ರಾಜ್ಯ ಸರ್ಕಾರ ಅದಕ್ಕೆ ಸಾಥ್ ಕೊಡ್ತಿದೆ ಎಂದರು.

ಜಿಎಸ್‍ಟಿ ಬರೋ ಮುನ್ನ ಎಂಎಸ್‍ಎಂಎಲ್ ಗಳು 10 ಕೋಟಿ ಉದ್ಯೋಗ ಕೊಡುತ್ತಿದ್ದವು. ಈಗ 2.5 ಕೋಟಿ ಉದ್ಯೋಗ ಕೊಡ್ತಿವೆ. ಇದು ಇವತ್ತಿನ ಪರಿಸ್ಥಿತಿ. ನಿರುದ್ಯೋಗ ಪ್ರಮಾಣ ಹೆಚ್ಚಳ ಆಗ್ತಿದೆ. ಬಿಜೆಪಿ ಅವರು ಜನರ ಜೀವನ ಅಸ್ತವ್ಯಸ್ತ ಮಾಡಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ ಹಾಳು ಮಾಡ್ತಿದ್ದಾರೆ. ಗೋವಾದಲ್ಲಿ 11 ಜನ ಗೆದ್ದಿದ್ದೇವೆ. ಹೇಗಾದ್ರು ಮಾಡಿ ಕೋಟಿ ಹಣ ಖರ್ಚು ಮಾಡಿ ನಮ್ಮವರನ್ನ ಸೆಳೆಯುತ್ತಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಹೊಟೇಲ್ ಗೆ ಕರೆದುಕೊಂಡು ಹೋಗಿ ಇಟ್ಟಿದ್ದಾರೆ. ಫೇರ್ ಎಲೆಕ್ಷನ್ ಅಂದ್ರೆ ಇದೇನಾ..? ದೇಶವನ್ನ ಬಿಜೆಪಿಯವರು ಹಾಳು ಮಾಡ್ತಿದ್ದಾರೆ ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *