ಮುನಿರತ್ನ ಕೇಸ್‌ನ ಎಸ್‌ಐಟಿ ರಚನೆ ಬಗ್ಗೆ ನನಗೆ ಮಾಹಿತಿ ಇಲ್ಲ: ಡಿಕೆಶಿ

Public TV
1 Min Read

ಬೆಂಗಳೂರು: ಮುನಿರತ್ನ ಕೇಸ್‌ನಲ್ಲಿ (Munirathna Case) ಎಸ್‌ಐಟಿ (SIT) ರಚನೆಗೆ ಕಾಂಗ್ರೆಸ್ ನಾಯಕರು ಒತ್ತಾಯ ಮಾಡಿರುವ ಕುರಿತು ನನಗೆ ಮಾಹಿತಿಯಿಲ್ಲ ಎಂದು ಡಿಸಿಎಂ ಡಿಕೆಶಿವಕುಮಾರ್ (DCM DK Shivakumar)ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (Congress) ನಾಯಕರು ಶಾಸಕ ಮುನಿರತ್ನ ಕೇಸ್‌ನಲ್ಲಿ ಎಸ್‌ಐಟಿ ರಚನೆ ಮಾಡುವಂತೆ ಒತ್ತಾಯ ಮಾಡಿರುವ ಕುರಿತು ನನಗೆ ಮಾಹಿತಿಯಿಲ್ಲ ಎಂದರು.ಇದನ್ನೂ ಓದಿ: ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಚಾಕು ಇರಿತ

ಅಶೋಕ್ ವಿರುದ್ಧವೂ ನಡೆದ ಷಡ್ಯಂತ್ರದ ಬಗ್ಗೆ ನನಗೆ ದಿಗ್ಬ್ರಮೆ ಆಗಿದೆ. ಪ್ರಪಂಚದಲ್ಲಿ ಈ ರೀತಿಯ ಸಂಚು ನಾವು ಕೇಳಿರಲಿಲ್ಲ. ಅಶೋಕ್ ಪ್ರಾರಂಭದ ಮಾತು ನೋಡಿದ್ದೇನೆ. ಎರಡನೇ ಮಾತು ನಾನು ನೋಡಿಲ್ಲ. ಅಶೋಕಣ್ಣ, ಸಿಟಿ ರವಿ ಅಣ್ಣ, ವಿಜಯೇಂದ್ರ ಅಣ್ಣ, ಕುಮಾರಸ್ವಾಮಿ, ಡಾ.ಮಂಜುನಾಥ್ ಮೊದಲು ಮಾತಾಡಲಿ. ಅವರ ಅಭಿಪ್ರಾಯ ಸತ್ಯಾಸತ್ಯತೆ ಏನಿದೆ ಎಂದು ಅವರು ಪರಿಶೀಲನೆ ಮಾಡಿಕೊಂಡು ತಿಳಿಸಲಿ. ಅವರು ಇದಕ್ಕೆ ಉತ್ತರ ಕೊಡಬೇಕು.

ಇದೇ ವೇಳೆ ವಿಜಯೇಂದ್ರ, ಅಶ್ವಥ್ ನಾರಾಯಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮದು ಸೇಡಿನ ರಾಜಕೀಯ ಎಂದು ಹೇಳಿಕೆ ನೀಡಿದ್ದರು. ನನ್ನನ್ನು ಅವರು ನೆನಪಿಸಿಕೊಳ್ಳುತ್ತಿರಲಿ. ದಿನಾ ನೆನಪು ಮಾಡಿಕೊಳ್ಳಲಿ. ಇಷ್ಟು ಆದರೂ ಮುನಿರತ್ನ ಅವರನ್ನು ಬಿಜೆಪಿ ಅವರು ಸಮರ್ಥನೆಗೆ ನಿಂತಿರುವುದು ಎಂದು ಜನರಿಗೆ ಅರ್ಥ ಆಗಬೇಕಿದೆ ಎಂದು ಬಿಜೆಪಿ (BJP) ನಾಯಕರ ವಿರುದ್ಧ ಡಿಕೆಶಿವಕುಮಾರ್ ಕಿಡಿಕಾರಿದರು.ಇದನ್ನೂ ಓದಿ: ದರೋಡೆ ಗ್ಯಾಂಗ್ ಜೊತೆ ಕೈಜೋಡಿಸಿ 9 ಲಕ್ಷ ಪಡೆದಿದ್ದ ಪೊಲೀಸ್‌ – ಹೆಡ್ ಕಾನ್ಸ್‌ಟೇಬಲ್ ಸೇರಿ 7 ಮಂದಿ ಅರೆಸ್ಟ್‌

Share This Article