ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ: ಸಿ.ಟಿ ರವಿ

Public TV
2 Min Read

ಬೆಂಗಳೂರು: ನಾನು ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ವರಿಷ್ಠರು ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (C.T.Ravi) ಸ್ಪಷ್ಟಪಡಿಸಿದರು.

ನಗರದಲ್ಲಿ ಮಾತನಾಡಿದ ಅವರು, ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡ್ತಾರೆ ಎನ್ನುವ ವಿಚಾರ ಗೊತ್ತಿಲ್ಲ. ನಾನು ಈಗ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ. ರಾಜ್ಯಾಧ್ಯಕ್ಷ ಸ್ಥಾನ ಅನ್ನೋದು ಒಂದು ದೊಡ್ಡ ಜವಾಬ್ದಾರಿ. ಅದನ್ನು ಕೇಳಿ ಪಡೆಯಲು ಆಗಲ್ಲ. ಭವಿಷ್ಯ ನಿರೀಕ್ಷೆ ಮತ್ತು ಆಕಾಂಕ್ಷೆ ಇಲ್ಲ. ಭವಿಷ್ಯದ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕು, ಯಾವಾಗ ಕೊಡಬೇಕು ಅಂತ ದೊಡ್ಡವರು ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ.ರವಿಗೆ ಕೊಕ್ – ಒಲಿಯುತ್ತಾ ರಾಜ್ಯಾಧ್ಯಕ್ಷ ಪಟ್ಟ?

ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟ ವಿಚಾರವಾಗಿ ಮಾತನಾಡಿ, ಯಾವ ಹುದ್ದೆಯೂ ಶಾಶ್ವತ ಅಲ್ಲ. ಹಲವು ಹುದ್ದೆಗಳಲ್ಲಿ ಸ್ಥಾನ ಕೊಟ್ಟಿದ್ದಾರೆ. ನಾನು ಯಾವಾಗಲೂ ಕಾರ್ಯಕರ್ತ. ಆಗಲೂ, ಈಗಲೂ ನಾನು ಕಾರ್ಯಕರ್ತ. ಈಗಲೂ ಅದೇ ಸೇವಾಭಾವದಿಂದ ಕೆಲಸ ಮಾಡ್ತೀನಿ ಎಂದು ಹೇಳಿದರು.

ಉಡುಪಿ ವೀಡಿಯೋ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಏನೂ ಇಲ್ಲ ಅಂತಿದ್ದರೆ ಆ ವಿದ್ಯಾರ್ಥಿನಿಯರನ್ನು ಯಾಕೆ ಸಸ್ಪೆಂಡ್ ಮಾಡಿದ್ರು? ಪ್ರಕರಣದಲ್ಲಿ ಹಲವು ಸಂಶಯಗಳಿವೆ. ಸರಿಯಾದ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು. ಇದನ್ನೂ ಓದಿ: ವಿಸಿ ನಾಲೆಗೆ ಕಾರು ಉರುಳಿ ನಾಲ್ವರ ಸಾವು ಪ್ರಕರಣ – ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಘೋಷಣೆ

40% ಕಮಿಷನ್ ಆರೋಪ ಬಗ್ಗೆ ತನಿಖೆ ನಿರ್ಧಾರ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಖಂಡಿತ ತನಿಖೆ ಮಾಡಲಿ, ಸತ್ಯ ಬಯಲಿಗೆಳೆಯಲಿ. 40% ಯಾರು ಯಾರಿಗೆ ಕೊಟ್ಟಿದ್ದಾರೆ ಅಂತ ಯಾರಿಗೂ ಮಾಹಿತಿ ಇಲ್ಲ. ಯಾರ ಮೇಲೆ ಆರೋಪ ಇತ್ತು ಅಂತ ಸರ್ಕಾರ ಬಹಿರಂಗ ಪಡಿಸಲಿ. ಹಾಗೆಯೇ ನೈಸ್ ಅಕ್ರಮ, ರೀಡೂ ಅಕ್ರಮಗಳ ಬಗ್ಗೆಯೂ ವರದಿಗಳಿವೆ. ಸರ್ಕಾರ ಕ್ರಮ ವಹಿಸಲಿ. ಆಗ ಈ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗುತ್ತೆ. ಇಲ್ಲದಿದ್ದರೆ ಒಳಸಂಚು ಮಾಡಿರುವ ಅನುಮಾನ ಬರುತ್ತೆ ಎಂದರು.

ಸಿ.ಟಿ ರವಿ ರಾಜ್ಯಾಧ್ಯಕ್ಷರಾಗ್ತಾರೆ ಎಂಬ ದೇವೇಗೌಡರ ಹೇಳಿಕೆ ವಿಚಾರವಾಗಿ ಮಾತನಾಡಿ, ದೇವೇಗೌಡರು ನಮ್ಮ ರಾಜ್ಯದ ಹಿರಿಯರು. ದೇವೇಗೌಡರು ಅಂತಿಮ ನಿರ್ಣಯ ಆಗಿದೆ ಅಂತ ಹೇಳಿಲ್ಲ. ಚರ್ಚೆ ಆಗಿದೆ ಅಂತ ಹೇಳಿದ್ದಾರೆ. ಹೈಕಮಾಂಡ್ ನಿರ್ಣಯ ಏನು ಅಂತ ಗೊತ್ತಿಲ್ಲ. ನಾನು 35 ವರ್ಷಗಳಿಂದಲೂ ಬಿಜೆಪಿಯಲ್ಲಿದ್ದೀನಿ. ಆಗಿನಿಂದಲೂ ಯಡಿಯೂರಪ್ಪ ಆಶೀರ್ವಾದವನ್ನು ಪಡೆಯುತ್ತಾ ಬಂದಿದ್ದೇನೆ ಎಂದು ಹೇಳಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್