ನನ್ನ ಮಗುವಿನ ತಂದೆ ಇವರೇ: ನಾನು ಸಿಂಗಲ್ ಪೇರೆಂಟ್ ಅಲ್ಲ ಎಂದ ನಟಿ

Public TV
1 Min Read

ತಾನು ಗರ್ಭಿಣಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು ಇಲಿಯಾನಾ. ಮದುವೆ ಆಗದೇ ಅದು ಹೇಗೆ ಮಗು ಹುಟ್ಟಲು ಸಾಧ್ಯ? ಎಂದು ಹಲವರು ಪ್ರಶ್ನೆ ಮಾಡಿದ್ದರು. ನೀವು ಸಿಂಗಲ್ ಪೇರೆಂಟಾ? ಎಂದು ಕೇಳಿದ್ದರು. ಈಗ ಎಲ್ಲದಕ್ಕೂ ಇಲಿಯಾನಾ ಉತ್ತರಿಸಿದ್ದಾರೆ. ತಮ್ಮ ಗಂಡನ ಫೋಟೋವನ್ನು ಶೇರ್ ಮಾಡಿ, ತಾವು ಸಿಂಗಲ್ ಪೇರೆಂಟ್ ಅಲ್ಲ ಎಂದು ಹೇಳಿಕೊಂಡಿದ್ದಾರೆ.

ಇಲಿಯಾನಾ(Ileana)  ಅವರು ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂತಸದ ಸುದ್ದಿ ರಿವೀಲ್ ಆಗಿರುವ ಬೆನ್ನಲ್ಲೇ ನಟಿಯ ಬಗ್ಗೆ ಮತ್ತೊಂದು ಬ್ಲಾಸ್ಟಿಂಗ್ ಸುದ್ದಿಯೊಂದು ಸಿಕ್ಕಿತ್ತು. ಸಿನಿಮಾರಂಗ, ಅಭಿಮಾನಿಗಳು ಸೇರಿದಂತೆ ಅನೇಕರು ಇಲಿಯಾನಾ ಮದುವೆಯಾಗಿಲ್ಲ ಎಂದು ಭಾವಿಸಿದ್ದರು. ಆದರೆ ಈ ಸುದ್ದಿಗೆ ನಯಾ ಟ್ವಿಸ್ಟ್‌ ಸಿಕ್ಕಿತ್ತು.

ತಮ್ಮ ಮಗುವಿಗೆ ಕೋವಾ ಫೀನಕ್ಸ್ ಡೋಲನ್ (Koa Phoenix Dolan) ಎಂದು ಹೆಸರಿಟ್ಟಾಗಲೂ ಮಗುವಿನ ತಂದೆ ಯಾರು ರಿವೀಲ್ ಮಾಡಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದರು. ಇದೀಗ ಎಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟಿದ್ದಾರೆ ನಟಿ.

 

ಮೈಕಲ್ ಡೋಲನ್ (Michael Dolan) ಎಂಬುವವರ ಜೊತೆ ಇಲಿಯಾನಾ ಮೇ 13, 2023ರಂದು ವಿವಾಹವಾಗಿದ್ದಾರೆ ಎಂದು ರಿವೀಲ್ ಆಗಿತ್ತು. ಆದರೆ ಅಧಿಕೃತ ಮದುವೆ ಬಗ್ಗೆ ಯಾವುದನ್ನ ನಟಿ ತಿಳಿಸಿರಲಿಲ್ಲ. ಕಳೆದ ತಿಂಗಳು ತನ್ನ ಮಸ್ಟರಿ ಮ್ಯಾನ್ ಮೈಕಲ್ ಫೋಟೋವನ್ನ ನಟಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಆತನ ಪರಿಚಯವನ್ನ ನಟಿ ತಿಳಿಸಿರಲಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಮದುವೆ ಮಾತನಾಡುತ್ತಾರಾ? ಮೇ 13ರಂದು ಮದುವೆ ಆಗಿರೋದು ನಿಜಾನಾ ಈ ಎಲ್ಲದರ ಬಗ್ಗೆ ಇಲಿಯಾನಾ ಅಧಿಕೃತ ಸ್ಪಷ್ಟನೆ ನೀಡುವವರೆಗೂ ಕಾಯಬೇಕಿತ್ತು. ಈಗ ಎಲ್ಲವೂ ಬಟಾಬಯಲಾಗಿದೆ.

Share This Article