ಬಿಗ್‌ಬಾಸ್‌ ಮನೆಯಲ್ಲಿ ನಿಜ ವಯಸ್ಸು ರಿವೀಲ್‌ ಮಾಡಿದ ಸೋನು ಗೌಡ..!

By
3 Min Read

ಸೋನುಳನ್ನು ಚಿಕ್ಕ ಹುಡುಗಿ ಎಂದುಕೊಳ್ಳುವ ಹಾಗೇ ಇಲ್ಲ. ಯಾಕೆಂದರೆ ಆಗಾಗ ಬಹು ದೊಡ್ಡ ಮಾತುಗಳು ಸೋನು ಬಾಯಿಂದ ಬರುತ್ತಲೇ ಇರುತ್ತವೆ. ಅದು ಕೆಲವೊಮ್ಮೆ ಬೀಪ್ ಸೌಂಡ್ ಹಾಕುವಂತ ಮಾತುಗಳು ಬಂದರೆ ಇನ್ನು ಕೆಲವು ಸರಿ ಇದ್ದ ಮನಸ್ಸುಗಳು ಹಾಳಾಗುವ ರೇಂಜಿಗೂ ಬರುತ್ತವೆ. ಇಂದು ಮನೆಯಲ್ಲಿ ಸೋನು ಐ ಆಮ್ ನಾಟ್ ಚಿಕ್ಕ ಹುಡುಗಿ ಎಂದು ಗುಡುಗಿದ್ದಾರೆ.

ಮನೆಯವರೆಲ್ಲರ ದೂರು ಆಗಾಗ ಒಂದೇ ಆಗಿತ್ತು. ಸೋನು ಅಡುಗೆಗೆ ಸಹಾಯ ಮಾಡಲ್ಲ, ಪಾತ್ರೆ ತೊಳೆಯಲ್ಲ ಎಂದು ಆರೋಪಿಸಿದ್ದರು. ಇದು ಬಿಗ್‍ಬಾಸ್‍ಗೂ ಕೇಳಿಸಿತ್ತು. ಆದರೆ ಇಂದು ಆ ಬಗ್ಗೆಯೇ ಬಿಗ್‍ಬಾಸ್ ವೂಟ್‍ನಲ್ಲಿ ಜನರ ಅಭಿಪ್ರಾಯವನ್ನು ಕೇಳಿತ್ತು. ಈ ವಾರ ಯಾರು ಅಡುಗೆ ಮಾಡಬೇಕು ಎಂಬ ಪ್ರಶ್ನೆ. ಅದಕ್ಕೆ ವೂಟ್‍ನಲ್ಲಿ ಸೋನು ಮಾಡಬೇಕು ಎಂಬ ಉತ್ತರ ಬಂದಿದೆ. ಸೋನು ಏನೋ ತಿಂಡಿ, ಅಡುಗೆ ಮಾಡಲು ಧೈರ್ಯದಿಂದ ಒಪ್ಪಿದ್ದಾರೆ. ಆದರೆ ಸೋನು ಆಡುತ್ತಿದ್ದ ಅವತಾರ ಖಂಡಿತ ಯಾರಿಗೂ ನಂಬಿಕೆಯೇ ಬರುತ್ತಿಲ್ಲ. ಎಲ್ಲರೂ ನಮ್ಮ ಕಥೆ ಮುಗಿಯಿತು ಎಂದು ಕೊಂಡಿದ್ದಾರೆ. ಇದನ್ನೂ ಓದಿ: ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?

ಅದರ ಜೊತೆಗೆ ಸೋನುಗೆ ತರಕಾರಿ ಕಟ್ ಮಾಡುವುದಕ್ಕೆ ಸಹಾಯ ಮಾತ್ರ ಮಾಡಬೇಕು ಎಂಬುದಾಗಿತ್ತು. ಅಡುಗೆ, ತಿಂಡಿ ಮಾಡುವ ಎಲ್ಲಾ ಅಧಿಕಾರ, ಏನು ಮಾಡಬೇಕು ಎಂಬುದನ್ನು ಸೋನುನೇ ನಿರ್ಧರಿಸಬೇಕು ಎಂಬುದಾಗಿತ್ತು. ಹೀಗಾಗಿ ಮನೆಯವರೆಲ್ಲಾ ಸುಮ್ಮನೆ ಇದ್ದರು. ಜೊತೆಗೆ ರಾಕೇಶ್ ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಸೋನುಗೆ ಬರುತ್ತೆ, ಮಾಡುತ್ತಾರೆ, ಯಾರು ಅವಳನ್ನು ಜಡ್ಜ್ ಮಾಡಬೇಡಿ ಎಂದೇ ಹೇಳಿದ್ದರು. ಬಳಿಕ ಸೋನು ತನಗೆ ಬರುವ ಟೊಮೋಟೋ ಗೊಜ್ಜು ಮತ್ತು ಅನ್ನ ಮಾಡಿದರು. ಒಬ್ಬೊಬ್ಬರೆ ತಿಂಡಿ ಹಾಕಿಕೊಂಡು ತಿನ್ನುವಾಗ ಎಲ್ಲರೂ ಸೋನುರನ್ನು ಹೊಗಳಿದ್ದಾರೆ. ಇದನ್ನೂ ಓದಿ: ಮೊದಲ ಜಗಳ, ವಾದ, ಗಾಯ ಆಗಿದ್ದೇ ಉದಯ್‍ಯಿಂದ – ಬೇರೆಯವರ ಇಮೋಷನ್ ನೋಡಿ ಉದಯ್ ಡಿಸ್ಟರ್ಬ್ ಆಗಿದ್ರಾ?

ಈ ಮಧ್ಯೆ ಸೋಮಣ್ಣ, ಚೈತ್ರಾ ಮಾತನಾಡುವಾಗ, ಸೋನು ಒಂದು ಮಗು ಥರ. ನನಗೂ ಇಷ್ಟವೇ ಆದರೆ ಆಕೆ ಮಾತನಾಡುವಾಗ ಸ್ವಲ್ಪ ಭಯ ಅಂತ ಚೈತ್ರಾ ಹೇಳಿದ್ದಾರೆ. ಸೋಮಣ್ಣ ಕೂಡ ಸೋನು ಇಷ್ಟ. ಆಕೆಗೆ ಡ್ರಾಮಾ ಎಲ್ಲಾ ಗೊತ್ತಿಲ್ಲ. ಮಾತನಾಡುವ ಸ್ಟೈಲೇ ಆ ರೀತಿ ಎಂದಿದ್ದಾರೆ. ಈ ಎಲ್ಲಾ ಮಾತು ಕಥೆಗಳು ಮುಗಿದ ಬಳಿಕ ಮಧ್ಯಾಹ್ನದ ಅಡುಗೆ ಮಾಡಬೇಕಿತ್ತು. ಅಡುಗೆಯನ್ನು ಸೋನುನೇ ನಿರ್ಧರಿಸಿದ್ದರು. ಅನ್ನ ಮತ್ತು ಬೇಳೆ ಸಾಂಬಾರು ಮಾಡಿದರು. ಮಧ್ಯಾಹ್ನ ತಿಂದವರು ಕೂಡ ಸೇಮ್ ಶಬ್ಬಾಶ್ ಗಿರಿ ನೀಡಿದ್ದಾರೆ. ಆಗ ರೂಪೇಶ್ ಎಲ್ಲಾ ಮಾಡಲು ಬಂದರು ಮಾಡಬೇಕಾಗುತ್ತದೆ ಅಂತ ಡ್ರಾಮಾ ಆಡುತ್ತಿದ್ರಾ? ನೀವು ಒಮ್ಮೆ ಪಾತ್ರೆ ತೊಳೆಯುವುದನ್ನು ನಾನು ನೋಡಬೇಕು ಎಂದಿದ್ದಾರೆ. ಇದಕ್ಕೆ ಸೋನು ಹೇ ಸುಮ್ಮನೆ ಇರಪ್ಪ. ಜನ ಅದಕ್ಕೂ ವೋಟ್ ಮಾಡಿ ಬಿಟ್ಟಾರು. ನೋಡಿ ಇಷ್ಟು ಚೆನ್ನಾಗಿ ಮಾಡಿದ್ದೀನಿ ಅಂತ ಎಲ್ಲರೂ ಮತ್ತೆ ಮತ್ತೆ ಕೇಳಬೇಡಿ ಎಂದಿದ್ದಾರೆ.

ಮನೆಯವರಿಗೆಲ್ಲಾ ಸೋನು ಕೆಪಾಸಿಟಿ ಅರ್ಥವಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟವನ್ನು ಸೇಮ್ ಮನೆಯ ಊಟದ ರುಚಿಯಲ್ಲಿಯೇ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಇದರ ನಡುವೆ ಚೈತ್ರಾ, ಜಯಶ್ರೀ, ಸೋಮಣ್ಣ ಎಲ್ಲರು ಕುಳಿತು ಮಾತನಾಡುವಾಗ, ಅಕ್ಷತಾ ವಿಚಾರವೂ ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು, ಹಾ ನಾನೇನು ಚಿಕ್ಕ ಹುಡುಗಿ ಅಲ್ಲಮ್ಮ. ದೊಡ್ಡವಳು. ಇನ್ನು ಹದಿನೆಂಟು ವರ್ಷ ಏನು ಅಲ್ಲ ಈಗ 23 ವರ್ಷ ನನಗೂ ಎಲ್ಲವೂ ಅರ್ಥವಾಗುತ್ತದೆ ಎಂದು ಮಾಮೂಲಿ ಒರಟು ಸ್ಟೈಲ್‍ನಲ್ಲಿಯೇ ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *