ನಾನಿಷ್ಟಪಟ್ಟ ಹುಡ್ಗನೊಂದಿಗೆ ಮದ್ವೆಯಾಗಿದ್ದು ತುಂಬಾನೇ ಖುಷಿಯಾಗಿದೆ: ನಿವೇದಿತಾ

Public TV
1 Min Read

ಮೈಸೂರು: ಬಿಗ್ ಬಾಸ್ ಸೀಸನ್ 5ರಲ್ಲಿ ಅರಳಿದ ‘ಪ್ರೀತಿ’ ಇಂದು ಜೊತೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಧು ನಿವೇದಿತಾ ಗೌಡ, ನಾನು ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾಗಿದ್ದು ತುಂಬಾನೆ ಖುಷಿ ತಂದಿದೆ ಎಂದು ಹೇಳಿದ್ದಾರೆ.

ನನ್ನ ಕನಸು ನನಸಾಗಿದೆ. ಚಿಕ್ಕ ಚಿಕ್ಕ ವಿಷಯಗಳನ್ನು ಕೂಡ ನಾನು ತುಂಬಾ ದೊಡ್ಡದಾಗಿ ಪರಿಗಣಿಸುತ್ತೇನೆ. ನನಗಂತೂ ತುಂಬಾನೇ ಖುಷಿಯಾಗಿದೆ. ವಿಶೇಷವಾಗಿ ಚಂದನ್ ಜೊತೆ ಮದುವೆಯಾಗಿರುವುದು ಖುಷಿ ತಂದಿದೆ. ಯಾಕೆಂದರೆ ನಾನು ಇಷ್ಟ ಪಟ್ಟ ಹುಡುಗ ಚಂದನ್, ಅವರೊಂದಿಗೆ ಇಂದು ಮದುವೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ನಮಗೆ ಮದುವೆ ನಿಶ್ಚಯವಾಗಿದ್ದಾಗಿಂದಲೂ ಹಾರೈಕೆಗಳು ತುಂಬಾನೇ ಬರುತ್ತಿದ್ದವು. ಅದರಲ್ಲೂ ನಿನ್ನೆ ನನಗೆ ಮತ್ತಷ್ಟು ಖುಷಿಯಾಗಿದೆ. ಎಷ್ಟೋ ಜನ ಬಂದು ವಿಶ್ ಮಾಡಿದ್ದಾರೆ. ಸಮಯವಾದರು ಕೂಡ ವೈಟ್ ಮಾಡಿ ನಮಗಿಬ್ಬರಿಗೆ ಶುಭಾಶಯ ತಿಳಿಸಿದ್ದಾರೆ. ಒಟ್ಟಿನಲ್ಲಿ ಅವರ ಪ್ರೀತಿ ನಮಗೆ ಸ್ಫೂರ್ತಿಯಾಗುತ್ತಿತ್ತು. ಹೀಗಾಗಿ ನಮಗೆ ಶುಭ ಹಾರೈಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಬಾರ್ಬಿ ಡಾಲ್ ಸಂತಸ ಹಂಚಿಕೊಂಡರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಜೋಡಿ

ಕಳೆದ ವರ್ಷದ ‘ಯುವ ದಸರಾ 2019’ ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದ ಚಂದನ್ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೊಳಗಾಗಿತ್ತು. ಬಳಿಕ ಸ್ವತಃ ಚಂದನ್ ಅವರೇ ಕ್ಷಮೆ ಕೇಳಿದ್ದರು. ನಂತರ ಅಕ್ಟೋಬರ್ 21ರಂದು ಮೈಸೂರಿನ ಸದರ್ನ್ ಸ್ಟಾರ್ ಹೋಟೆಲಲ್ಲಿ ನಿಶ್ಚಿತಾರ್ಥ ನಡೆದಿದ್ದು, ಇಂದು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *