I Am Fit And Fine- ವೈದ್ಯರ ಬಳಿ ಆದಿತ್ಯ ರಾವ್ ಡೈಲಾಗ್

Public TV
2 Min Read

ಬೆಂಗಳೂರು: ನನಗೆ ಏನೂ ಆಗಿಲ್ಲ. ನಾನು ಚೆನ್ನಾಗಿದ್ದೇನೆ ಎಂದು ಆದಿತ್ಯ ರಾವ್ ವೈದ್ಯರ ಜೊತೆ ಹೇಳಿದ್ದಾನೆ

ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಇಂದು ಬೆಳಗ್ಗೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯರು ಪರೀಕ್ಷೆ ನಡೆಸುತ್ತಿದ್ದಾಗ, “ಐ ಆ್ಯಮ್ ಆಲ್ ರೈಟ್ ಡಾಕ್ಟರ್, ಐ ಡೋಂಟ್ ನೀಡ್ ಎನಿ ಮೆಡಿಸಿನ್” ಅಂತ ಡೈಲಾಗ್ ಹೊಡೆದಿದ್ದಾನೆ. ಆರೋಪಿ ಆದಿತ್ಯ ರಾವ್ ವೈದ್ಯರ ಜೊತೆ ನಡೆಸಿದ ಸಂಭಾಷಣೆಯ ಎಕ್ಸ್ ಕ್ಲೂಸೀವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸರು ಆರೋಪಿಯನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯರು, ಏನಾದರೂ ಸಮಸ್ಯೆ ಇದ್ಯಾ? ಜ್ವರ ಶೀತ ಕೆಮ್ಮು ಏನಾದ್ರೂ ಇದೆಯೇ ಎಂದು ಪ್ರಶ್ನಿಸಿದರು. ಆಗ ಆದಿತ್ಯ ರಾವ್, ಐ ಆ್ಯಮ್ ಆಲ್ ರೈಟ್ ನಂಗೇನೂ ಸಮಸ್ಯೆಯೇ ಇಲ್ಲ. ನಂಗ್ಯಾವ ಮೆಡಿಸನ್ ಬೇಡ ಅಂತ ಹೇಳಿದ್ದಾನೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

ವೈದ್ಯರ ಎಲ್ಲಾ ತಪಾಸಣೆಗೂ ಸಕಾರಾತ್ಮಕವಾಗಿ ಸೈಕೋ ಬಾಂಬರ್ ಆದಿತ್ಯ ರಾವ್ ಸ್ಪಂದಿಸಿದ್ದಾನೆ. ಮಾನಸಿಕ ಸ್ಥಿತಿ ಬಗ್ಗೆ ನಾವೇನು ಜಡ್ಜ್ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಆತ ಮಾತಾನಾಡುವ ಶೈಲಿ ನೋಡಿದರೆ ಆತ ಮಾನಸಿಕ ಅಸ್ವಸ್ಥ ಅಂತ ಹೇಳೋದಕ್ಕೆ ಬರಲ್ಲ. ಆದರೆ ಮಂಗಳೂರು ಪೊಲೀಸರು ಆಮೇಲೆ ಆತನ ಮಾನಸಿಕ ಸ್ಥಿತಿಯ ಬಗ್ಗೆ ವೈದ್ಯರ ಅಭಿಪ್ರಾಯ ಪಡೆದೇ ಪಡೆಯುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!

ಆತನ ಬಿಪಿ ಪಲ್ಸ್ ಶುಗರ್ ಎಲ್ಲವೂ ನಾರ್ಮಲ್ ಆಗಿದೆ. ಹೃದಯಸಂಬಂಧಿ ಸಮಸ್ಯೆಯೂ ಆತನಿಗಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ತಿಂಡಿ ಮಾಡಿದ್ರಾ ಎಂದು ವೈದ್ಯರ ಪ್ರಶ್ನೆಗೆ, ಹೌದು ಮಾಡಿದ್ದೀನಿ, ನಂಗ್ಯಾವ ಮಾತ್ರೆ ಬರೆದು ಕೊಡಬೇಡಿ. ಯಾವ ಟ್ಯಾಬ್ಲೆಟ್ ತೆಗೆದುಕೊಳ್ಳುವ ಸಮಸ್ಯೆ ನಂಗಿಲ್ಲವೆಂದು ವೈದ್ಯರಿಗೆ ಮಾಹಿತಿ ಕೊಟ್ಟಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ

Share This Article
Leave a Comment

Leave a Reply

Your email address will not be published. Required fields are marked *