ನಾನು ಅಮ್ಮನಾಗುತ್ತಿದ್ದೇನೆ: ಗುಡ್ ನ್ಯೂಸ್ ಕೊಟ್ಟ ನಟಿ ಅದಿತಿ ಪ್ರಭುದೇವ್

Public TV
1 Min Read

ನ್ನಡದ (Sandalwood) ಹೆಸರಾಂತ ನಟಿ ಅದಿತಿ ಪ್ರಭುದೇವ್ (Aditi Prabhudev), ಹೊಸ ವರ್ಷದ ದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿರುವ ಅದಿತಿ, ತಾವು ಅಮ್ಮನಾಗುತ್ತಿರುವ (Pregnant)ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರು ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ಅಮ್ಮ. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ. ಅಮ್ಮ 2024ಕ್ಕೆ ನಾನು ಅಮ್ಮನಾಗುವೆ’ ಎಂದು ಅವರು ಪೋಸ್ಟ್ ಹಾಕಿದ್ದಾರೆ.

ಕಳೆದ ವರ್ಷ ನವೆಂಬರ್ 28ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ಅದಿತಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಉದ್ಯಮಿ ಯಶಸ್ ಜೊತೆ ಹೊಸ ಬದುಕಿಗೆ ಕಾಲಿಟ್ಟಿದ್ದರು. ಮದುವೆಯಾಗಿ ಒಂದು ವರ್ಷ ಒಂದು ತಿಂಗಳಿಗೆ ಅಮ್ಮನಾಗುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ ರಂಗ ಕಂಡ ಅಪರೂಪದ ನಟಿ ಅದಿತಿ ಪ್ರಭುದೇವ್. ಯಾವುದೇ ಕಾಂಟ್ರವರ್ಸಿಗೆ ಗುರಿಯಾಗದೇ ಅತ್ಯುತ್ತಮ ಪಾತ್ರಗಳನ್ನು ಮಾಡುತ್ತಾ ಬಂದರು. ಸಿಕ್ಕಿರುವ ಪಾತ್ರಗಳಲ್ಲೇ ತೃಪ್ತಿ ಪಟ್ಟುಕೊಂಡವರು. ಕಿರುತೆರೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದು, ಆನಂತರ ಸಿನಿಮಾಗಳನ್ನು ಮಾಡಿದವರು.

 

ಇದೇ ಜನವರಿ 26ರಂದು ಅದಿತಿ ಪ್ರಭದೇವ ನಟನೆಯ ಅಲೆಕ್ಸಾ ಸಿನಿಮಾ ರಿಲೀಸ್ ಆಗಲಿದೆ. ಮದುವೆ ನಂತರ ಸಿನಿಮಾಗಳನ್ನು ಒಪ್ಪಿಕೊಳ್ಳದ ಅದಿತಿ, ಪತಿಯ ಜೊತೆ ಕಾಡು ಸುತ್ತಾಟ, ಅಡುಗೆ ತಯಾರಿ, ಯೂಟ್ಯೂಬ್ ಹೀಗೆ ತಮ್ಮದೇ ಆದ ರೀತಿಯಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ.

Share This Article