ನಾನು ಯಾವತ್ತಿದ್ರೂ ಸ್ಟಾರ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಚಿರಋಣಿ: ಅಂಬರೀಶ್

Public TV
2 Min Read

ಬೆಂಗಳೂರು: ಈ ಬಾರಿ ಚುನಾವಣೆಗೆ ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ಸ್ಪರ್ಧೆ ಮಾಡ್ತಾರಾ ಅಥವಾ ರಾಜಕೀಯ ನಿವೃತ್ತಿ ಪಡೆಯುತ್ತಾರಾ ಎಂಬ ಪ್ರಶ್ನೆಗಳಿಗೆ ಉತ್ತರ ಹೇಳುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರಿನ ನಿವಾಸದಲ್ಲಿ ಸುದಿಗೋಷ್ಠಿ ನಡೆಸಿ ಮಾತನಾಡಿದ ಅಂಬಿ, ನಾನು ಯಾವತ್ತಿದ್ರೂ ಸ್ಟಾರ್. ರಾಜಕೀಯ ಮತ್ತು ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ನಾನು ಯಾವತ್ತೂ ಚಿರಋಣಿ. ನನ್ನ ಪ್ರೋತ್ಸಾಹಿಸಿದ ಕನ್ನಡದ ಜನತೆಗೆ ಧನ್ಯವಾದಗಳು. ನನ್ನ ಮೇಲೆ ವಿಶ್ವಾಸ ಪ್ರೀತಿ ಇಟ್ಟ ಎಲ್ಲ ಜನತೆಗೂ ಕೃತಘ್ನತೆಗಳು ಅಂತ ಹೇಳಿದ್ದಾರೆ.


ನಾನು ಯಾರ ಪರ ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ಪ್ರಚಾರಕ್ಕೆ ಹೋಗೋದಾದ್ರೆ ನಾನೇ ಸ್ಪರ್ಧೆ ಮಾಡುತ್ತಿದ್ದೆ. ನನಗೂ ವಯಸ್ಸಾಗ್ತಿದೆ, ಆಸಕ್ತಿ- ಶಕ್ತಿ ಕುಗ್ಗುತ್ತೆ ಅಲ್ವಾ? ಸಚಿವ ಸ್ಥಾನದಿಂದ ತೆಗೆದ್ರು ಅಂದ್ರೆ ನನಗೆ ಶಕ್ತಿ ಇಲ್ಲಾ ಅಂತ ಆಯ್ತಲ್ಲ. ನನ್ನ ಸಿದ್ಧಾಂತಗಳಿಗೆ ಅಲ್ಲ. ನನಗೆ ಮತ ಕೇಳಕ್ಕೂ, ಇವರಿಗೆ ಮತ ಹಾಕಿ ಅಂತ ಹೇಳುವುದಕ್ಕೆ ಬಹಳ ವ್ಯತ್ಯಾಸ ಇದೆ. ಮಂಡ್ಯದಿಂದ ಗೆದ್ದರೂ ಬರೀ ಶಾಸಕ ಆಗ್ತಿದ್ದೆ ಮತ್ಯಾಕೆ ನಿಲ್ಲಬೇಕು ಎಂದು ಪ್ರಶ್ನಿಸಿದರು. ಮಂಡ್ಯದಿಂದ ಯಾರಿಗಾದ್ರೂ ಟಿಕೆಟ್ ಕೊಡಲಿ, ಅವರು ಗೆಲ್ಲಲಿ, ನಾನು ಹೋಗಲ್ಲ. ಒಟ್ಟಿನಲ್ಲಿ ಯಾರ ಪರವಾಗಿಯೂ ಪ್ರಚಾರಕ್ಕೆ ಹೋಗಲ್ಲ ಸ್ಪಷ್ಟನೆ ನೀಡಿದ್ರು. ಇದನ್ನೂ ಓದಿ: ಅಮರಾವತಿಗೆ ಅಂಬರೀಷ್ ಮಂಗಳಾರತಿ!

ಆರು ತಿಂಗಳಿಂದ ನನ್ನ ಸಂಪರ್ಕದಲ್ಲಿ ಬೇರೆ ಪಕ್ಷದವರು ಇದ್ದಾರೆ. 3 ತಿಂಗಳಿಂದ ನನ್ನನ್ನು ಬೇರೆ ಪಕ್ಷದವರು ಕರೆಯುತ್ತಿದ್ದಾರೆ. ಆದ್ರೆ ನಾನು ಎಲ್ಲೂ ಹೋಗಲ್ಲ. ನಾನು ಪ್ರಚಾರ ಸಮಿತಿ ಸ್ಟಾರ್ ಅಲ್ಲಾ. ಸಿದ್ದರಾಮಯ್ಯ ಸಿಎಂ ಆಗೋಕೆ ನನ್ನ ಪಾತ್ರವೂ ಇದೆ. ಕನಕದಾಸರನ್ನ ಕನಕರಾಜ ಮಾಡಿ ಅಂದಿದ್ದು ನಾನು. ವಲಸಿಗರಿಗೆ ಬೆಂಬಲ ಕೊಟ್ಟೆ ಅಂದ್ರು. ಆದರೆ ಅವರು ಮುಖ್ಯಮಂತ್ರಿ ಆದ ಮೇಲೆ ಬ್ಯುಸಿ ಆದ್ರು ಬಿಡಿ ಅಂತ ತಿಳಿಸಿದ್ದಾರೆ.

ಕೊನೆಯ ಕ್ಷಣದವರೆಗೂ ಬಿಫಾರಂ ನನಗೆ ಇಟ್ಟಿದ್ದರಿಂದ ಅವರಿಗೂ ಧನ್ಯವಾದಗಳು. ರಾಜಕೀಯ ಮತ್ತು ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಋಣಿಯಾಗಿದ್ದೇನೆ. ನನ್ನ ಕೈಯಲ್ಲಿ ಆಗುತ್ತಿಲ್ಲ ಹೀಗಾಗಿ ಬೇಡವಾಗಿದ್ದೇನೆ. ವಯಸ್ಸಾಯಿತು ಹೀಗಾಗಿ ಕೆಲಸ ಮಾಡಕ್ಕೆ ಆಗಲ್ಲ. ಜನರ ಆಸೆ ತಿರಿಸಕ್ಕೆ ಆಗಲ್ಲ. ಸಂಪುಟ ಪುನರ್ ರಚನೆಯಲ್ಲಿ ತೆಗೆದಾಗ್ಲೆ ನನ್ನ ಕ್ಯಾಪಸಿಟಿ ಗೊತ್ತಾಯಿತು. ನಾನು ಮೊದಲೇ ಈ ನಿರ್ಧಾರ ಮಾಡಿದ್ದೆ. ಮುಖ್ಯಮಂತ್ರಿ ಆದಾಗಲೇ ಬಂದಿದ್ದರು. ಮುಖ್ಯಮಂತ್ರಿ ಆಗದೇ ಇದ್ದಗಲೂ ಬಂದಿದ್ದರು ಅಂದ್ರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನಮ್ಮ ಮನೆಗೆ ಬಂದಿದ್ದರು. ಮಂಡ್ಯದಲ್ಲಿ ವಾತಾವರಣ ಸರಿ ಇಲ್ಲಾ ಎಂದಿದ್ದರು. ಅದು ಬೇಸರ ತರಿಸಿತ್ತು. 224 ಕ್ಷೇತ್ರದಲ್ಲಿ ಟಿಕೆಟ್ ಕೊಡ್ತಾರೆ ಎಲ್ಲಾ ಗೆಲ್ತಾರಾ? ನಾನು ಸೋಲ್ತೀನಿ ಅಂದ್ರೆ ಏನರ್ಥ? ಸೋನಿಯಾ ಗಾಂಧಿ ಇಂದ ಹಿಡಿದು ಎಲ್ಲರೂ ನನಗೆ ಗೊತ್ತು. ನಾನು ಏನ್ ಬೇಕಾದ್ರು ಮಾಡಬಹುದಿತ್ತು. ಇಂದಿಗೂ ನನ್ನ ಸಂಪರ್ಕದಲ್ಲಿ ಜೆಡಿಎಸ್ ನಾಯಕರು ಇದ್ದಾರೆ. ಜೆಡಿಎಸ್ ಇಂದ ಬಂದು ಮಂಡ್ಯದಲ್ಲಿ ಕಾಂಗ್ರೆಸ್ ಕಟ್ಟಿದವನು. ನನಗೆ ಗೊತ್ತಿಲ್ಲವಾ ರಾಜಕಾರಣ. ಆದ್ರೆ ಬೇಡ ಅಂತ ನಿರ್ಧಾರ ಮಾಡಿದ್ದೇನೆ ಅಂತ ಅಂಬಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತ ಅಂಬರೀಶ್ ರಾಜಕೀಯ ಬಿಟ್ಟು ಚಿತ್ರರಂಗ ಹಾಗೂ ಅಭಿಮಾನಿಗಳ ಕೈಗೆ ಸಿಗುವಂತಾಗಿದೆ ಎಂದು ಅಂಬರೀಶ್ ನಿವಾಸದ ಬಳಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅಂಬರೀಶ್ ಗೆ ಸಿಹಿ ತಿನ್ನಿಸಿ ಸಿಹಿ ಹಂಚಿ ಘೋಷಣೆ ಕೂಗುತ್ತಿದ್ದಾರೆ.

https://www.youtube.com/watch?v=j5sNdOb1D40

Share This Article
Leave a Comment

Leave a Reply

Your email address will not be published. Required fields are marked *