ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

Public TV
2 Min Read

ಬೆಂಗಳೂರು: ಭದ್ರತೆ ದೃಷ್ಟಿಯಿಂದ ಧರ್ಮಸ್ಥಳಕ್ಕೆ (Dharmasthala) ಹೋಗಲು ಭಯ ಇದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಧರ್ಮಸ್ಥಳ ಠಾಣೆಗೆ ನಾನು ಬರಲಾರೆ ಎಂದು ಯೂಟ್ಯೂಬರ್‌ ಸಮೀರ್‌ (Youtuber Sameer) ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಪೊಲೀಸರು ಕೊಟ್ಟಿದ್ದ ನೊಟೀಸ್‌ಗೆ ಉತ್ತರಿಸಿದ್ದ ಸಮೀರ್, ಭದ್ರತೆ ದೃಷ್ಟಿಯಿಂದ ವಿಚಾರಣೆಗೆ ಹಾಜರಾಗಲು ಇದೇ 13 ರಂದು ಪತ್ರದ ಮೂಲಕ ಪೊಲೀಸರ ಬಳಿ ಕಾಲಾವಕಾಶ ಕೇಳಿದ್ದರು.  ಇದನ್ನೂ ಓದಿ: ಎಎಸ್ಪಿ ಕಾರಿಗೆ ಡಿಕ್ಕಿ ತಿಮರೋಡಿಯ ಮೂವರು ಬೆಂಬಲಿಗರು ಅರೆಸ್ಟ್

 

ಸಮೀರ್ ಮನವಿಯಲ್ಲಿ ಏನಿತ್ತು?
ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆಯಾಗಿದೆ. ನನಗೆ ಈಗಾಗಲೇ ಬೆದರಿಕೆ ಇರುವ ಕಾರಣ ಧರ್ಮಸ್ಥಳಕ್ಕೆ ವಿಚಾರಣೆಗೆ ಬರಬೇಕಾದರೆ ಹೆಚ್ಚಿನ ಭದ್ರತೆ ನೀಡಿ. ಇಲ್ಲವೇ ಪರ್ಯಾಯ ಜಾಗದ ವ್ಯವಸ್ಥೆ ಮಾಡಿ.

ನನ್ನ ಯೂಟ್ಯೂಬ್ ಕಂಟೆಂಟ್ ಮೇಲೆ ದೂರು ಕೊಟ್ಟಿದ್ದಾರೆ. ಹಾಗಾಗಿ ನಾನು ನೇರವಾಗಿ ಠಾಣೆಗೆ ಬರಲು ಸಾಧ್ಯವಿಲ್ಲ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಭಾಗಿಯಾಗಲು ಅವಕಾಶ ಕೊಡಿ ಎಂದು ಕೇಳಿದ್ದರು. ಆದರೆ ಸಮೀರ್‌ ಪತ್ರಕ್ಕೆ ಕೇರ್ ಮಾಡದ ಧರ್ಮಸ್ಥಳ ಪೊಲೀಸರು ಇಂದು ಬಂಧನ ಮಾಡಲು ಬೆಂಗಳೂರಿಗೆ ತೆರಳಿದ್ದರು. ಇದನ್ನೂ ಓದಿ:  ಮಹೇಶ್‌ ಶೆಟ್ಟಿ ತಿಮರೋಡಿ ಜೈಲಿಗೆ 14 ದಿನ ನ್ಯಾಯಾಂಗ ಬಂಧನ

 

ಜಾಮೀನು ಮಂಜೂರು:
ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ `ದೂತ’ ಯೂಟ್ಯೂಬ್‌ ವಾಹಿನಿಯ ಸಮೀರ್‌ಗೆ ನಿರೀಕ್ಷಣಾ ಜಾಮೀನು (Bail) ಮಂಜೂರಾಗಿದೆ. ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದರು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವರು ಕೇಸ್‌ಗಳು ದಾಖಲಾಗಿತ್ತು.

ಸಿಡಿಆರ್ ಹಾಗೂ ಮೊಬೈಲ್ ನೆಟ್ವರ್ಕ್ ಆಧರಿಸಿ ಸಮೀರ್ ಬಂಧನಕ್ಕಾಗಿ ಬನ್ನೇರುಘಟ್ಟ ಸಮೀಪದ ಹುಲ್ಲಳ್ಳಿಯ ನಿವಾಸಕ್ಕೆ ಧರ್ಮಸ್ಥಳ ಪೊಲೀಸರು ಬಂದಿದ್ದರು. ಆದರೆ ನಿವಾಸದಲ್ಲಿ ಸಮೀರ್‌ ಇಲ್ಲದ ಕಾರಣ 48 ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು ವಾಪಸ್ಸಾಗಿದ್ದಾರೆ.

ಬಂಧನ ಭೀತಿಯಲ್ಲಿದ್ದ ಸಮೀರ್ ವಕೀಲರ ಮೂಲಕ ಮಂಗಳೂರು (Mangaluru) ಜಿಲ್ಲಾ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್  ಜಾಮೀನು ಮಂಜೂರು ಮಾಡಿದೆ.

ಧರ್ಮಸ್ಥಳದ ಬಗ್ಗೆ ಮೊದಲ ವಿಡಿಯೋ ಮಾಡಿದ್ದಾಗ ಕೌಲಬಜಾರ್ ಠಾಣೆಯಲ್ಲಿ ಮೊದಲ ಕೇಸ್ ಆಗಿತ್ತು. ಬಳ್ಳಾರಿಯಲ್ಲಿ ಪೊಲೀಸರು ಹುಡುಕಾಡಿದ್ದಾಗ ಬಳ್ಳಾರಿಯಲ್ಲಿ ವಾಸ ಬಗ್ಗೆ ಮಾಹಿತಿ ದೊರೆತಿರಲಿಲ್ಲ.

Share This Article