ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

Public TV
1 Min Read

ಲೈಫು ಇಷ್ಟೇನೆ, ಟೋಬಿ ಸಿನಿಮಾ ಖ್ಯಾತಿಯ ಸಂಯುಕ್ತಾ ಹೊರನಾಡ್ ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿದ್ದು, ಚಿತ್ರೀಕರಣ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ನಾನು ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ಎಂದು ಸಂಯುಕ್ತಾ ಮಾತನಾಡಿದ್ದಾರೆ. ಇದನ್ನೂ ಓದಿ:‘ಕ್ಯಾ ಲಫ್ಡಾ’ ಅಂತಾ ಹೆಜ್ಜೆ ಹಾಕಿದ ರಾಮ್ ಪೋತಿನೇನಿ, ಕಾವ್ಯಾ ಥಾಪರ್

ನಾನು ಸುದೀಪ್ ಸರ್ ಅವರ ದೊಡ್ಡ ಅಭಿಮಾನಿ. ನಾನು ಈ ಹಿಂದೆ ‘ಜಿಗರ್‌ಥಂಡ’ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದೇನೆ. ಸರ್ ಕೆಲಸ ಮಾಡುವಾಗ ಸಿನಿಮಾ ಮೇಕಿಂಗ್‌ನಲ್ಲೂ ಭಾಗಿಯಾಗುತ್ತಿದ್ದರು. ಅವರ ಎನರ್ಜಿ, ಸಿನಿಮಾ ಮೇಲೆ ಅವರಿಗಿರುವ ಪ್ರೀತಿ ಮಾತ್ರ ಅದ್ಭುತ. ಅವರ ಜೊತೆ ನಾನು ತೆರೆಹಂಚಿಕೊಂಡಿರೋದಕ್ಕೆ ಖುಷಿಯಿದೆ ಎಂದು ಸಂಯುಕ್ತಾ ಹೊರನಾಡ್ (Samyukta Hornad) ಸಂತಸ ವ್ಯಕ್ತಪಡಿಸಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ಈಗೀನ ಕಾಲಕ್ಕೆ ತಕ್ಕಂತೆ ಇದೆ. ಚಿತ್ರದಲ್ಲಿ ದೊಡ್ಡ ಮಟ್ಟದ ಸ್ಟಂಟ್ಸ್ ಕೂಡ ಇದೆ. ಬಾಡಿ ಡಬಲ್ ಬಳಸದೆ ಸುದೀಪ್‌ ಸರ್ ತಾವೇ ಸ್ಟಂಟ್ಸ್ ಮಾಡಿದ್ದಾರೆ. ಈ ಚಿತ್ರ ಫ್ಯಾನ್ಸ್‌ಗೆ ಪೈಸಾ ವಸೂಲ್ ಸಿನಿಮಾ ಆಗಿದೆ. ‘ಮ್ಯಾಕ್ಸ್’ ಸಿನಿಮಾ ನಿಜಕ್ಕೂ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಟಿ ಮಾತನಾಡಿದ್ದಾರೆ.

‘ಮ್ಯಾಕ್ಸ್’ (Max Film) ಸಿನಿಮಾದಲ್ಲಿ ಸುದೀಪ್ (Sudeep) ಜೊತೆ ಸಂಯುಕ್ತಾ ಹೊರನಾಡ್, ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯ ಚಿತ್ರದ ಮೊದಲ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಸುದೀಪ್ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಈಗ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Share This Article