ಪಾಟ್ನಾ: ಮತಗಳವು ಬಗ್ಗೆ ಆಟಂ ಬಾಂಬ್ ಹಾಕ್ತೇನೆ ಅಂತ ಮಹದೇವಪುರ, ಮಹಾರಾಷ್ಟ್ರದ ಬಗ್ಗೆ ದಾಖಲೆ ರಿಲೀಸ್ ಮಾಡಿದ್ದ ರಾಹುಲ್ ಗಾಂಧಿ ಈಗ ಬಿಹಾರದಲ್ಲಿ ಹೈಡ್ರೋಜನ್ ಬಾಂಬ್ ಸಿಡಿಸ್ತೇನೆ ಅಂದಿದ್ದಾರೆ. ಈ ಬಾರಿ ಹೈಡ್ರೋಜನ್ ಬಾಂಬ್ ಸಿಡಿಸಿದರೆ ಪಿಎಂ ಮೋದಿ ಮುಖ ಕೂಡ ತೋರಿಸಲಾಗಲ್ಲ ಎಂದಿದ್ದಾರೆ.
ಬಿಹಾರದ ಮತದಾರರ ಅಧಿಕಾರ ರ‍್ಯಾಲಿ ಸಮಾರೋಪದಲ್ಲಿ ಮಾತಾಡಿರುವ ರಾಹುಲ್ ಗಾಂಧಿ, ಶೀಘ್ರದಲ್ಲೇ ದೊಡ್ಡ ವಿಷಯವನ್ನು ಬಹಿರಂಗಪಡಿಸುತ್ತೇನೆ ಅಂದಿದ್ದಾರೆ. ಆಗಸ್ಟ್ 17 ರಂದು ಎಸ್‌ಐಆರ್ ಮತ್ತು ಬಿಹಾರದ ಮತಗಳ್ಳತನದ ವಿರುದ್ಧ ಪ್ರಾರಂಭಿಸಲಾಗಿತ್ತು. ಬಿಹಾರದ ಸುಮಾರು 25 ಜಿಲ್ಲೆಗಳ ಮೂಲಕ 1,300 ಕಿ.ಮೀ ದೂರವನ್ನು ಕ್ರಮಿಸಿ ಪಾಟ್ನಾದಲ್ಲಿ ಸಮಾರೋಪಗೊಂಡಿದೆ. ಇದನ್ನೂ ಓದಿ: ಹೆಬ್ಬಾಳದ ಪಶು ವಿವಿ ಆವರಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ – ಸ್ಥಳ ಪರಿಶೀಲಿಸಿದ ಬೈರತಿ ಸುರೇಶ್
ಎಐಸಿಸಿ ಅಧ್ಯಕ್ಷ ಖರ್ಗೆ ಮಾತಾಡಿ, ಮೋದಿಗೆ ಮತ ಕಳವು ಅಭ್ಯಾಸವಾಗಿಬಿಟ್ಟಿದೆ. ಬಿಹಾರದಲ್ಲೂ ಮತಗಳವು ಮೂಲಕ ಗೆಲ್ಲೋದಿಕ್ಕೆ ಮೋದಿ ಪ್ಲಾನ್ ಮಾಡಿದ್ದರು ಅಂತ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರೀ ಭ್ರಷ್ಟಾಚಾರ ಆರೋಪ – ಆನೇಕಲ್ ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ
ರಾಹುಲ್ ವಿರುದ್ಧ ಬಿಜೆಪಿಯ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದು, ಇದು ಮತದಾರರಿಗೆ ಮಾಡಿದ ಅತಿದೊಡ್ಡ ಅವಮಾನ. ಇವಿಎಂ ಬದಲಿಗೆ ಮತಪತ್ರಕ್ಕೆ ಆಗ್ರಹಿಸುತ್ತಿರುವ ಇವರ ಉದ್ದೇಶ ಚುನಾವಣಾ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ಮಾಡೋದೇ ಆಗಿದೆ ಅಂದಿದ್ದಾರೆ. ಇದನ್ನೂ ಓದಿ: ತೀವ್ರ ಮಳೆಯಿಂದಾಗಿ ಮಲೆನಾಡಾದ ರಾಯಚೂರು – ವೈರಲ್ ಫೀವರ್ ಪ್ರಮಾಣ ಹೆಚ್ಚಳ
ಈ ಮಧ್ಯೆ, ಬಿಹಾರದಲ್ಲಿ ಮತಪರಿಷ್ಕರಣೆ ದಿನಾಂಕ ವಿಸ್ತರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಲ್ಲದೆ, ವಿಶ್ವಾಸದ ವಿಷಯವಾಗಿರೋದ್ರಿಂದ ರಾಜಕೀಯ ಪಕ್ಷಗಳು ಭಾಗಿಯಾಗ್ಬೇಕು ಅಂತ ಸಲಹೆ ಕೊಟ್ಟಿದೆ. ಇದನ್ನೂ ಓದಿ: ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು – ರಾಜ್ಯಪಾಲ, ಸಿಎಂರಿಂದ ಆತ್ಮೀಯ ಸ್ವಾಗತ