‘ಹೆಲ್ಮೆಟ್ ಇಲ್ಲ, ನಾನು ಗಂಡ್ಸಾಗಿ ಸಾಯುತ್ತೇನೆ’ ಎಂದ ಯುವಕನಿಗೆ ಪೊಲೀಸರಿಂದ ಶಾಕ್!

Public TV
1 Min Read

ಹೈದರಾಬಾದ್: ಬೈಕ್ ಸವಾರನೊಬ್ಬ ತನ್ನ ಬೈಕಿನ ಹಿಂಬದಿಯಲ್ಲಿ ಮಡ್‍ಗಾರ್ಡ್ ಮೇಲೆ ‘ಹೆಲ್ಮೆಟ್ ಇಲ್ಲ, ನಾನು ಗಂಡಸಾಗಿ ಸಾಯುತ್ತೇನೆ’ ಎಂದು ಬರೆದುಕೊಂಡು ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುತ್ತಿರುವ ಫೋಟೋ ಈಗ ವೈರಲ್ ಆಗಿದೆ.

ಹೈದರಾಬಾದ್‍ನ ವ್ಯಕ್ತಿಯೊಬ್ಬ ತನ್ನ ಬೈಕಿನ ಮಡ್‍ಗಾರ್ಡ್ ಮೇಲೆ ಹೆಲ್ಮೆಟ್ ಇಲ್ಲ, ನಾನು ಗಂಡ್ಸಾಗಿ ಸಾಯುತ್ತೇನೆ ಎಂದು ಬರೆದುಕೊಂಡು ಬೈಕ್ ಚಲಾಯಿಸುತ್ತಿದ್ದನು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಆತನಿಗೆ ಟ್ವೀಟ್ ಮೂಲಕ ಸಂದೇಶವನ್ನು ಕಳುಹಿಸಿದ್ದಾರೆ.

ಹೈದರಾಬಾದ್ ಟ್ರಾಫಿಕ್ ಪೊಲೀಸರು ವ್ಯಕ್ತಿ ಬೈಕ್ ಚಲಾಯಿಸುತ್ತಿರುವ ಫೋಟೋ ಜೊತೆ ಇ-ಚಲನ್ ಪ್ರತಿಯನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ “ನಮ್ಮನ್ನು ದಯವಿಟ್ಟು ಕ್ಷಮಿಸಿ ಮಿ. ಕೃಷ್ಣಮೂರ್ತಿ ರೆಡ್ಡಿ ಸರ್. ನಾವು ನಿಮ್ಮನ್ನು ಸಾಯಲು ಬಿಡುವುದಿಲ್ಲ. ನೀವು ನಿಜವಾದ ಗಂಡಸಿನ ರೀತಿ ಬದುಕುವುದನ್ನು ನಾವು ನೋಡಬೇಕು. ದಯವಿಟ್ಟು ಹೆಲ್ಮೆಟ್ ಹಾಕಿ, ವಾಹನ ಚಲಾಯಿಸಿ” ಎಂದು ಟ್ವೀಟ್ ಮಾಡಿದ್ದಾರೆ.

https://twitter.com/Kirak_Admi/status/979229530786353152?tfw_site=ndtv&ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fhyderabad-traffic-police-hilariously-troll-biker-photographed-without-helmet-1844407

ಸದ್ಯ ಪೊಲೀಸರು ಮಾಡಿದ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಇದ್ದಕ್ಕೆ ಪರ-ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಪೊಲೀಸರ ಟ್ವೀಟ್ ನೋಡಿ ಅವರನ್ನು ಶ್ಲಾಘಿಸಿದ್ದರೆ, ಇನ್ನೂ ಕೆಲವರು ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುತ್ತಿರುವ ಪೊಲೀಸರ ಫೋಟೋ ಹಾಕಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

https://twitter.com/hameeduddin93/status/985103940864819200?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fhyderabad-traffic-police-hilariously-troll-biker-photographed-without-helmet-1844407&tfw_site=ndtv

ಈ ಟ್ವೀಟಿಗೆ ಹೈದರಾಬಾದ್ ಟ್ರಾಫಿಕ್ ಪೊಲೀಸರು ಪ್ರಿಯಾ ಪ್ರಕಾಶ್ ವಾರಿಯರ್ ನ ಎರಡೂ ಫೇಮಸ್ ವಿಡಿಯೋವನ್ನು ಟ್ವೀಟ್ ಮಾಡಿ, ನಾವು ನಮ್ಮ ಸಿಬ್ಬಂದಿ ಮೇಲೆ ಕಣ್ಣು ಹೊಡೆಯುವುದಿಲ್ಲ. ನಾವು ಅವರನ್ನು ಕೂಡ ಇ-ಚಲನ್ ನಿಂದ ಶೂಟ್ ಮಾಡುತ್ತೇವೆ. ಟ್ರಾಫಿಕ್ ರೂಲ್ಸ್ ಎಲ್ಲರಿಗೂ ಅನ್ವಯವಾಗುತ್ತೆ. ಎಲ್ಲರು ತಮ್ಮ ಸುರಕ್ಷತೆಗಾಗಿ ನಿಯಮಗಳನ್ನು ಪಾಲಿಸಬೇಕೆಂದು ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *