ಪವನ್ ಕಲ್ಯಾಣ್‍ಗಾಗಿ ಸಕ್ರಿಯ ರಾಜಕೀಯಕ್ಕೆ ಮೆಗಾಸ್ಟಾರ್ ಚಿರಂಜೀವಿ ಗುಡ್‍ಬೈ

Public TV
2 Min Read

ಹೈದರಾಬಾದ್: ಜನಸೇನೆ ಪಕ್ಷವನ್ನು ಸ್ಥಾಪಿಸಿದ ತಮ್ಮ ಸಹೋದರ ಪವನ್ ಕಲ್ಯಾಣ್ (Pawan Kalyan) ಪ್ರಬಲ ನಾಯಕರಾಗಿ ಹೊರಹೊಮ್ಮಲು ಸಕ್ರಿಯ ರಾಜಕಾರಣದಿಂದ ತಾವು ಹಿಂದೆ ಸರಿಯುವುದಾಗಿ ಮೆಗಾಸ್ಟಾರ್ ಕೆ.ಚಿರಂಜೀವಿ (Chiranjeevi) ಹೇಳಿದ್ದಾರೆ.

ಹೈದರಾಬಾದ್‍ನಲ್ಲಿ ಚಲನಚಿತ್ರ ಸಭೆವೊಂದರಲ್ಲಿ ಮಾತನಾಡಿದ ಚಿರಂಜೀವಿ, ಭವಿಷ್ಯದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮ ಸಹೋದರನಿಗೆ ಸಹಾಯ ಮಾಡಬಹುದು. ಪವನ್ ಕಲ್ಯಾಣ್ ಬದ್ಧತೆ ಹೊಂದಿರುವ ಪ್ರಾಮಾಣಿಕ ನಾಯಕ, ಅಂತಹ ನಾಯಕರು ನಮಗೆ ಬೇಕು. ಭವಿಷ್ಯದಲ್ಲಿ ಜನರು ಅವರನ್ನು ತಮ್ಮ ನಾಯಕನನ್ನಾಗಿ ಮಾಡಬಹುದು ಎಂದು ಚಿರಂಜೀವಿ ಹೇಳಿದರು. ಜನಸೇನೆ ಪಕ್ಷಕ್ಕೆ ತಮ್ಮ ಬೆಂಬಲದ ಬಗ್ಗೆ ನೇರ ಉತ್ತರವನ್ನು ಬದಿಗಿಟ್ಟ ಅವರು, ಭವಿಷ್ಯದಲ್ಲಿ ತಮ್ಮ ಸಹೋದರ ಮತ್ತು ಅವರ ಪಕ್ಷವನ್ನು ಬೆಂಬಲಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಕಾಂತಾರ ಕಾಳಗ: ಜಾಲತಾಣಗಳಲ್ಲಿ ಸೈದ್ಧಾಂತಿಕ, ರಾಜಕೀಯ, ಪ್ರಾದೇಶಿಕ ಸೊಗಡಿನ ಚರ್ಚೆ

ಏಪ್ರಿಲ್ 2018ರಲ್ಲಿ ರಾಜ್ಯಸಭಾ ಸದಸ್ಯರಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಚಿರಂಜೀವಿ ತಮ್ಮ ರಾಜಕೀಯ ನಡೆಗಳ ಬಗ್ಗೆ ಮೌನವಾಗಿದ್ದಾರೆ. ಅವರು ಸಂಸತ್ತಿನ ಮೇಲ್ಮನೆಯಿಂದ ನಿವೃತ್ತರಾದ ನಂತರ ಅವರನ್ನು ಸಂಸದ ಮತ್ತು ಕೇಂದ್ರ ಸಚಿವರನ್ನಾಗಿ ಮಾಡಿದ ಕಾಂಗ್ರೆಸ್‍ನಿಂದ ದೂರ ಉಳಿದಿದ್ದಾರೆ. ವೈಎಸ್‍ಆರ್ ಕಾಂಗ್ರೆಸ್‍ನಿಂದ (YSR Congress) ಮತ್ತೊಂದು ಅವಧಿಗೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗುತ್ತದೆ ಎಂಬ ಊಹಾಪೋಹಗಳಿದ್ದವು. ಇದನ್ನೂ ಓದಿ: ರಮ್ಯಾ ನಟಿಸಿ, ನಿರ್ಮಾಣ ಮಾಡುತ್ತಿರುವ ಟೀಮ್ ನಲ್ಲಿ ಇವರೆಲ್ಲ ಇದ್ದಾರೆ

ನನ್ನ ಗಮನ ಈಗ ಚಿತ್ರಗಳ ಮೇಲೆ:
ಜುಲೈ 4 ರಂದು ಭೀಮಾವರಂನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಚಿರಂಜೀವಿ ಅವರನ್ನು ಆಹ್ವಾನಿಸಿದ ನಂತರ ಅವರು ಬಿಜೆಪಿಯೊಂದಿಗೆ ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ ಎಂಬ ಮಾತುಕತೆಯೂ ಇತ್ತು. ಈ ಊಹಾಪೋಹಗಳಿಗೆ ತೆರೆ ಎಳೆದ ಚಿರಂಜೀವಿ, ತನ್ನ ಸಹೋದರನ ಬೆಳವಣಿಗೆಗೆ ಅವಕಾಶ ಮಾಡಿಕೊಡಲು ಸಕ್ರಿಯ ರಾಜಕಾರಣದಿಂದ ಹೊರಗುಳಿಯಲು ಮುಂದಾಗಿದ್ದೇನೆ ಎಂದು ಹೇಳಿದರು. ಆದಾಗ್ಯೂ, ಭವಿಷ್ಯದಲ್ಲಿ ತನ್ನ ಸಹೋದರನಿಗೆ ಸಹಾಯ ಮಾಡಲು ಸಕ್ರಿಯ ರಾಜಕೀಯಕ್ಕೆ ಮರಳುವ ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ. ತಾನು ಜನಸೇನೆಯ ಭಾಗವಲ್ಲ, ತೆಲಂಗಾಣ ಅಥವಾ ಆಂಧ್ರಪ್ರದೇಶದಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು. ಈಗ ನನ್ನ ಗಮನ ಸಿನಿಮಾಗಳ ಮೇಲೆ ಇದೆ ಎಂದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *