ಅಪ್ರಾಪ್ತ ಮಗಳ ಮೇಲಿನ ಅತ್ಯಾಚಾರ, ಕೊಲೆ ಆರೋಪದಡಿ ಪೋಷಕರ ಬಂಧನ

Public TV
1 Min Read

ಮುಂಬೈ: ಅಪ್ರಾಪ್ತ ಮಗಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಹೈದರಾಬಾದ್ ದಂಪತಿಯನ್ನು ಮಹಾರಾಷ್ಟ್ರದ ಸೋಲಾಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನಕ್ಕೆ ತೆರಳುತ್ತಿದ್ದ ದಂಪತಿ ಸಿಕಂದರಾಬಾದ್ ರಾಜ್‍ಕೋಟ್ ಎಕ್ಸ್‌ಪ್ರೆಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲು ಆರಂಭವಾದಗಲಿಂದಲೂ ಬಾಲಕಿ ನಿದ್ರಿಸಿದ್ದು, ಸುಮಾರು ಆರು ಗಂಟೆಗಳಾದರೂ ಯಾವುದೇ ಚಲನವಲನ ಇಲ್ಲದೇ ಇರುವುದರಿಂದ ಅನುಮಾನಗೊಂಡ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 700 ಕುರಿಗಳಿಂದ ವ್ಯಾಕ್ಸಿನ್ ಸಂದೇಶ- ಮೆಚ್ಚಿದ ನೆಟ್ಟಿಗರು

ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಈ ವೇಳೆ ಅಪ್ರಾಪ್ತ ಬಾಲಕಿಯ ಕತ್ತು ಹಿಸುಕಿ ಕೊಲ್ಲಲಾಗಿದ್ದು, ಆಕೆಯ ತಂದೆಯೇ ನಂತರ ಅತ್ಯಾಚಾರವೆಸಗಿರುವುದಾಗಿ ವಿಚಾರ ಬಹಿರಂಗಗೊಂಡಿದೆ. ಇನ್ನೂ ಈ ಕೊಲೆಯನ್ನು ಮುಚ್ಚಿ ಹಾಕಲು ಆರೋಪಿ ತನ್ನ ಪತ್ನಿ ಮತ್ತು ಮಗನಿಗೆ ಬೆದರಿಕೆಯೊಡ್ಡಿ ರಾಜಸ್ಥಾನದಲ್ಲಿರುವ ಅವರ ಸ್ವ ಗ್ರಾಮಕ್ಕೆ ಒತ್ತಾಯಿಸಿ ಕರೆದೊಯ್ಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ರೈಲ್ವೆ ಸಹಾಯಕ ನಿರೀಕ್ಷಕ ಅಮೋಲ್ ಗಾವ್ಲಿ ಅವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣವನ್ನು ಹೈದರಾಬಾದ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಈ ಕುರಿತಂತೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.  ಇದನ್ನೂ ಓದಿ: ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ

Share This Article
Leave a Comment

Leave a Reply

Your email address will not be published. Required fields are marked *