ಮಹಿಳೆಯ ಮನೆಯಲ್ಲಿ ಗಂಡನ ಅಸ್ಥಿಪಂಜರ, ಮಾಟ ಮಂತ್ರದ ಸಿಡಿ, ಕೆಜಿಗಟ್ಟಲೆ ಕಾಂಡೋಮ್ ನೋಡಿ ಶಾಕ್ ಆದ ಪೊಲೀಸರು

Public TV
2 Min Read

ಮುಂಬೈ: ವೇಶ್ಯಾಗೃಹದ ಮೇಲೆ ದಾಳಿ ಮಾಡಿ ಮಾಲಕಿಯನ್ನ ಬಂಧಿಸಿದ ನಂತರ ಮನೆಯಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದನ್ನು ನೋಡಿ ಮಹಾರಾಷ್ಟ್ರ ಪೊಲೀಸರು ಶಾಕ್ ಆಗಿದ್ದಾರೆ.

ಸವಿತಾ ಭಾರತಿ(43) ಬಂಧಿತ ಮಹಿಳೆ. ಈ ಅಸ್ಥಿಪಂಜರ ನನ್ನ ಗಂಡನದ್ದು, 13 ವರ್ಷಗಳ ಹಿಂದೆ ಆತನನ್ನು ಕೊಲೆ ಮಾಡಿದ್ದೇನೆಂದು ಬಂಧಿತ ಮಹಿಳೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.

ಸವಿತಾ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಸೋಮವಾರದಂದು ಮೊದಲ ಬಾರಿಗೆ ಆಕೆಯ ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ನಾಲ್ಕು ಮಹಿಳೆಯರನ್ನ ರಕ್ಷಣೆ ಮಾಡಿ ಸವಿತಾ ಹಾಗೂ ಒಬ್ಬ ಗ್ರಾಹಕನನ್ನು ಬಂಧಿಸಿದ್ದರು. ಸವಿತಾ ಸೆಕ್ಸ್ ದಂಧೆಯಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೆ ತನ್ನ ಗಂಡ ಸೇರಿದಂತೆ ಹಲವು ಜನರನ್ನು ಕೊಂದಿದ್ದಾಳೆಂದು ಮಂಗಳವಾರ ರಾತ್ರಿ ನಮಗೆ ಮಾಹಿತಿ ಸಿಕ್ಕಿತ್ತು ಎಂದು ಬೊಯ್‍ಸರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ಕಬಾಡಿ ಹೇಳಿದ್ದಾರೆ.

ಸವಿತಾ ತನ್ನ ಗಂಡನನ್ನು ಕೊಲೆ ಮಾಡಿ ಟ್ಯಾಂಕ್‍ನಲ್ಲಿ ಹೂತಿರುವುದಾಗಿ ಹೇಳಿದ ನಂತರ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು, ಬುಧವಾರದಂದು ಅಸ್ಥಿಪಂಜರವನ್ನ ಹೊರತೆಗೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಬಾತ್‍ರೂಮಿನ ಕೆಳಗಡೆ ಹೂತಿಟ್ಟಿದ್ದ ಶವವನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಸವಿತಾ ತನ್ನ ಗಂಡ ಸಹದೇವ್‍ನನ್ನು 2004ರಲ್ಲಿ ಕೊಲೆ ಮಾಡಿ, ಮೃತದೇಹವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಹಾಕಿದ್ದಳು. ಸಹದೇವ್ ನನ್ನ ನಡತೆ ಬಗ್ಗೆ ಅನುಮಾನ ಪಟ್ಟು, ಕಡಿದು ಬಂದು ಬೈಯ್ಯುತ್ತಿದ್ದ. 2004ರಲ್ಲಿ ಇದೇ ರೀತಿ ಜಗಳ ನಡೆದಾಗ, ಆತ ಮಲಗಿದ್ದ ವೇಳೆ ಚೂಪಾದ ವಸ್ತುವಿನಿಂದ ತಲೆಗೆ ಹೊಡೆದೆ. ಇದರಿಂದ ಸ್ಥಳದಲ್ಲೇ ಮೃತಪಟ್ಟ ಎಂದು ಸವಿತಾ ಹೇಳಿದ್ದಾಳೆ.

ಗಾಂಧಿಪಾದಾದಲ್ಲಿ ಅಂಗಡಿಯನ್ನೊಳಗೊಂಡಿದ್ದ ಮನೆಯಲ್ಲೇ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸವಿತಾ ಹಾಗೂ ಆಕೆಯ ಪ್ರಿಯಕರ ಕಮಲೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಸವಿತಾ ಗ್ರಾಹಕರನ್ನ ಸೆಳೆಯಲು ಮನೆಯಲ್ಲಿ ಮಾಟ ಮಂತ್ರ ಮಾಡುತ್ತಿದ್ದಳು ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಮನೆಯಲ್ಲಿ ಇನ್ನೂ ಎರಡು ಶವಗಳು ಇವೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಗುರುವಾರದಂದು ಮನೆಯನ್ನು ಅಗೆದಿದ್ದಾರೆ. ಆದ್ರೆ ಯಾವುದೇ ಶವ ಪತ್ತೆಯಾಗಿಲ್ಲ.

ಆರೋಪಿಯ ಮನೆಯಲ್ಲಿ 300 ಮಾಟಮಂತ್ರದ ವಿಡಿಯೋ ಸಿಡಿ ಹಾಗು 500 ದೇವರ ಫೋಟೋ ಹಾಗು ಮೂರ್ತಿಗಳನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಜೊತೆಗೆ ಗಂಡನ ಮೃತದೇಹವನ್ನ ಹೂತಿಟ್ಟಿದ್ದ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಹಲವು ಕೆಜಿಗಳಷ್ಟು ಉಪಯೋಗಿಸಲ್ಪಟ್ಟ ಕಾಂಡೋಮ್ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಅಸ್ಥಿಪಂಜರವನ್ನು ಫೋರೆನ್ಸಿಕ್ ಪರೀಕ್ಷೆಗಾಗಿ ಕಳಿಸಲಾಗಿದೆ. ಸಹದೇವ್ ಹಾಗೂ ಸವಿತಾ ಮಗನಾದ 25 ವರ್ಷದ ಸಂದೇಶ್‍ನನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *