ಫೇಸ್‍ಬುಕ್ ಗೆಳೆಯನೊಂದಿಗೆ ಸೆಕ್ಸ್ – ಕಿಟಕಿಯಲ್ಲಿ ನೋಡಿದ ಪತಿಗೆ ಶಾಕ್

Public TV
2 Min Read

– ಪತಿ ಕೆಲಸಕ್ಕೆ ಹೋಗುತ್ತಿದ್ದಂತೆ ಅನೈತಿಕ ಸಂಬಂಧ
– ರೆಡ್ ಹ್ಯಾಂಡಾಗಿ ಹಿಡಿದು ಇಬ್ಬರಿಗೂ ಥಳಿಸಿದ

ತಿರುವನಂತಪುರಂ: ಮಹಿಳೆಯೊಬ್ಬಳು ಫೇಸ್‍ಬುಕ್ ಗೆಳೆಯನ ಜೊತೆ ಸೆಕ್ಸ್ ಮಾಡುತ್ತಿದ್ದಾಗ ಪತಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ಮೋಹನ್ ಮತ್ತು ಸಾರಿಕಾ (ಹೆಸರು ಬದಲಾಯಿಸಲಾಗಿದೆ). ಮೋಹನ್ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆತ ಹೆಚ್ಚು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ. ಪರಿಣಾಮ ದಿನ ಪೂರ್ತಿ ಪತ್ನಿ ಸಾರಿಕಾ ಮನೆಯಲ್ಲಿ ಒಬ್ಬಳೆ ಇರುತ್ತಿದ್ದಳು. ಅಲ್ಲದೇ ಫೇಸ್‍ಬುಕ್‍ನಲ್ಲಿ ಸ್ನೇಹಿತರೊಂದಿಗೆ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದಳು.

ಪತ್ನಿಯ ನಡವಳಿಕೆ ಗಮನಿಸಿದ ಮೋಹನ್ ಹೆಚ್ಚಾಗಿ ಫೋನ್ ಬಳಸದಂತೆ ಎಚ್ಚರಿಕೆ ನೀಡಿದ್ದ. ಆದರರೂ ಸಾರಿಕಾ ಫೇಸ್‍ಬುಕ್‍ನಲ್ಲಿ ಚಾಟಿಂಗ್ ಮಾಡುತ್ತಿದ್ದಳು. ಇತ್ತೀಚೆಗೆ ಅದೇ ಪ್ರದೇಶದ ಮುಕುಂದನ್ ಎಂಬಾತನ ಪರಿಚಯವಾಗಿದೆ. ಇಬ್ಬರು ಪರಸ್ಪರ ಚಾಟಿಂಗ್ ಮಾಡುತ್ತಾ, ವೈಯಕ್ತಿಕ ವಿಷಯಗಳನ್ನು ಹಂಚಿಕೊಳುತ್ತಿದ್ದರು. ದಿನ ಕಳೆದಂತೆ ಇಬ್ಬರ ಚಾಟಿಂಗ್ ಅನೈತಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.

ಮೋಹನ್ ರಾತ್ರಿ ಕೆಲಸಕ್ಕೆಂದು ಹೋದಾಗ ಮುಕುಂದನ್, ಸಾರಿಕಾ ಮನೆಗೆ ಬಂದು ಅನೈತಿಕ ಸಂಬಂಧ ಹೊಂದುತ್ತಿದ್ದ. ಒಂದು ದಿನ ಮೋಹನ್ ಪತ್ನಿಗೆ ಅನೇಕ ಬಾರಿ ಫೋನ್ ಮಾಡಿದರೂ ಸಾರಿಕಾ ಫೋನ್ ರಿಸೀವ್ ಮಾಡಲಿಲ್ಲ. ಮರುದಿನ ಮನೆಗೆ ಬಂದು ಈ ಬಗ್ಗೆ ವಿಚಾರಿಸಿದ್ದಾನೆ. ಆಗ ಸಾರಿಕಾ ಯಾವುದಕ್ಕೂ ಸರಿಯಾಗಿ ಉತ್ತರ ಕೊಡಲಿಲ್ಲ. ಇದರಿಂದ ಮೋಹನ್ ಅನುಮಾನಗೊಂಡು ರಾತ್ರಿ ಕೆಲಸಕ್ಕೆ ಹೋಗಿದ್ದಾನೆ.

ಆದರೆ ಸ್ವಲ್ಪ ಸಮಯದ ನಂತರ ವಾಪಸ್ ಮನೆಗೆ ಬಂದಿದ್ದಾನೆ. ಇತ್ತ ಮನೆಯಲ್ಲಿ ಮುಕುಂದನ್ ಮತ್ತು ಸಾರಿಕಾ ಬೆಡ್ ರೂಮಿನಲ್ಲಿ ಸೆಕ್ಸ್ ಮಾಡುತ್ತಿದ್ದರು. ಮೋಹನ್ ರೂಮಿನ ಕಿಟಕಿಯಿಂದ ನೋಡಿ ಶಾಕ್ ಆಗಿದ್ದಾನೆ. ತಕ್ಷಣ ಮೋಹನ್ ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ಮನೆಯೊಳಗೆ ಹೋಗಿದ್ದಾನೆ.

ಇದನ್ನು ನೋಡಿದ ಸಾರಿಕಾ ಮತ್ತು ಮುಕುಂದನ್ ಪರಾರಿಯಾಗಲು ಪ್ರಯತ್ನಿಸಿದ್ದು, ಆಗ ಮೋಹನ್ ಇಬ್ಬರನ್ನು ಹಿಡಿದು ಹಲ್ಲೆ ಮಾಡಿದ್ದಾನೆ. ನಂತರ ಸ್ಥಳೀಯರು ಈ ಕುರಿತು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಮೋಹನ್ ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *