ಪತ್ನಿಯನ್ನು ಕೊಂದು ನಾಪತ್ತೆಯಾಗಿದ್ದ ಪತಿ, ಮುಳ್ಳಯ್ಯನಗಿರಿ ಕಾಡಿನಲ್ಲಿ ಬಂಧನ

Public TV
1 Min Read

ಚಿಕ್ಕಮಗಳೂರು: ಇಲ್ಲಿನ ಕೈಮರ ಚೆಕ್‌ಪೋಸ್ಟ್ (Kaimara check post) ಬಳಿ ಪತ್ನಿಯನ್ನ ಕೊಂದು ನಾಪತ್ತೆಯಾಗಿದ್ದ ಪತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅವಿನಾಶ್(32) ಬಂಧಿತ ಆರೋಪಿ. ಅವಿನಾಶ್, ಕೀರ್ತಿ(26)ಯನ್ನು 4 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಬುಧವಾರ ಬೆಳಗ್ಗೆ ಇವರಿಬ್ಬರ ಮಧ್ಯೆ ಜಗಳ ಏರ್ಪಟ್ಟು, ಪತ್ನಿ ಕೀರ್ತಿಯನ್ನ ಅವಿನಾಶ್ ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದಿದ್ದ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು 10 ಬಾರಿ ಇರಿದು ಕೊಂದ ಪತಿ

ಪತಿಯಿಂದ ಚಾಕು ಇರಿತಕ್ಕೊಳಗಾದ ಕೀರ್ತಿ ರಕ್ತದ ಮಡುವಿನಲ್ಲೇ ಮನೆಯಿಂದ ಓಡಿ ಬಂದು ನಡು ರಸ್ತೆಯಲ್ಲಿ ಕೂಗಿಕೊಂಡು ಬಿದ್ದಿದ್ದಳು. ಕೂಡಲೇ ಆಕೆಯನ್ನು ಪೋಷಕರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅವಿನಾಶ್, ಮನಸೋ ಇಚ್ಛೆ ಚಾಕುವಿನಿಂದ ಹಲ್ಲೆ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಇದನ್ನೂ ಓದಿ: ಮನೆ ಮದ್ದು | ಮೊಡವೆಯ ಸಮಸ್ಯೆ ಕಾಡ್ತಿದ್ಯಾ? ಇಲ್ಲಿದೆ ಸುಲಭ ಪರಿಹಾರ

ಕೀರ್ತಿಗೆ ಚಾಕುವಿನಿಂದ ಇರಿದ ಅವಿನಾಶ್, ಬಳಿಕ ಮುಳ್ಳಯ್ಯನಗಿರಿ (Mullayanagiri) ಕಾಡಿನಲ್ಲಿ ನಾಪತ್ತೆಯಾಗಿದ್ದ. ಆತನ ಬಂಧನಕ್ಕಾಗಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ಹಾಗೂ ಸಬ್ ಇನ್ಸ್ಪೆಕ್ಟರ್, ರಾಜೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು. ಇದನ್ನೂ ಓದಿ: ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ

ಘಟನೆ ನಡೆದ ಏಳರಿಂದ ಎಂಟು ಗಂಟೆಗಳ ಕಾಲ ಮುಳ್ಳಯ್ಯನಗಿರಿ ಕಾಡಿನಲ್ಲಿ ಅವಿತು ಕೂತಿದ್ದ ಆರೋಪಿ ಅವಿನಾಶ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು (Chikkamagaluru) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article