ಪತ್ನಿಯ ಶೀಲ ಶಂಕಿಸಿ ಇಸ್ತ್ರಿ ಪೆಟ್ಟಿಗೆಯಿಂದ ಮೈ-ಕೈ ಸುಟ್ಟ ಪಾಪಿ ಪತಿ

Public TV
1 Min Read

ಚಿತ್ರದುರ್ಗ: ವ್ಯಕ್ತಿಯೊಬ್ಬ ತನ್ನ ಪತ್ನಿಯ (Wife) ಶೀಲ ಶಂಕಿಸಿ ಇಸ್ತ್ರಿ ಪೆಟ್ಟಿಗೆಯಿಂದ ಆಕೆಯ ಮೈ ಸುಟ್ಟಿರುವುದು ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ.

ನಾಗೇಶ್ ಎಂಬಾತ ಆ.15 ರಂದು ಪತ್ನಿ ಮೇಲೆ ದೌರ್ಜನ್ಯ ಎಸಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ, ಪತ್ನಿಯ ಮುಖ, ಕೈ-ಕಾಲು, ತೊಡೆ ಸೇರಿ ಹಲವೆಡೆ ಸುಟ್ಟು ವಿಕೃತಿ ಮೆರೆದಿದ್ದಾನೆ. ಮಹಿಳೆಗೆ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆಕೆ ಚೇತರಿಸಿಕೊಂಡಿದ್ದಾರೆ. ಗಾಯಾಳು ಮಹಿಳೆ ಬಳ್ಳಾರಿಯ ತವರುಮನೆಯಲ್ಲಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಕೋರ್ಟ್‍ಗೆ ಹಾಜರಾಗದೇ ಕಳ್ಳಾಟ – ಗೋವಾದಲ್ಲಿ ಲಾಯರ್ ಜಗದೀಶ್ ಅರೆಸ್ಟ್

ನಾಗೇಶ್‍ನ ತಂದೆ ಚಂದ್ರಣ್ಣನ ವಿರುದ್ಧವೂ ದೌರ್ಜನ್ಯ ಆರೋಪ ಕೇಳಿ ಬಂದಿದೆ.

ಆ.19ರಂದು ಮೊಳಕಾಲ್ಮೂರು ಪೊಲೀಸ್‌ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಾಪತ್ತೆಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ. ಇದನ್ನೂ ಓದಿ: ವೈದ್ಯೆ ಜೊತೆ ಅನುಚಿತ ವರ್ತನೆ – ವಿವಾದಿತ ಆಪ್ ಶಾಸಕಿ ರಾಖಿ ಬಿರ್ಲಾ ತಂದೆ ವಿರುದ್ಧ ಎಫ್‍ಐಆರ್

Share This Article