ಭೋಪಾಲ್: ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳ ವಿರುದ್ಧ ಪತಿ ಸಿನಿಮಾ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾನೆ.
ಪ್ರಕರಣ ಬಹಿರಂಗಗೊಂಡ ಬಳಿಕ ಪತಿಯನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಸಾಮೂಹಿಕ ಅತ್ಯಾಚಾರ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗಳ ಮೇಲೆ ಈ ಹಿಂದೆ ಒಮ್ಮೆ ದಾಳಿ ಮಾಡಿದ್ದನು. ಆದರೆ ಅಪರಾದಿಗಳು ಸಾಯದಿದ್ದಾಗ, ಆರು ತಿಂಗಳ ನಂತರ ದಾಳಿ ಮಾಡಿ ತನ್ನ ಸೇಡು ತೀರಿಸಿಕೊಂಡಿದ್ದಾನೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!
ಘಟನೆ ನಡೆದ ದಿನದಿಂದ ಗ್ರಾಮದ ವ್ಯಕ್ತಿಯೊಬ್ಬ ಕುಟುಂಬ ಸಮೇತ ನಾಪತ್ತೆಯಾಗಿದ್ದನು. ಆತನ ಫೋನ್ ಟ್ರೇಸಿಂಗ್ ಮೂಲಕ ಪೆÇಲೀಸರು ಆತನನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆಗೆ ಒಳಗಾದ ಅವರು ಸಂಪೂರ್ಣ ಬಹಿರಂಗಪಡಿಸಿದಾಗ ಆಗ ಸತ್ಯ ಹೊರಗೆ ಬಂದಿದೆ. ಇದನ್ನೂ ಓದಿ: ಬರದನಾಡಲ್ಲಿ ಗ್ರಾಮೀಣ ರಸ್ತೆ, ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು: ತಿಪ್ಪಾರೆಡ್ಡಿ
1 ವರ್ಷದ ಹಿಂದೆ ನನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಹೀಗಾಗಿ ನಾನು ಅವರ ಮೇಲೆ ಸೆಡು ತೀರಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ನನ್ನ ಪ್ಲ್ಯಾನ್ ಸರಿಯಾಗಿ ಇರಲಿಲ್ಲ ಹೀಗಾಗಿ ಅವರು ಬದುಕಿ ಉಳಿದರು. ನಂತರ 6 ತಿಂಗಳ ನಂತರ ಅವರನ್ನು ಕೊಲೆ ಮಾಡಲು ಮತ್ತೊಂದು ಸಂಚು ರೂಪಿಸಿದ್ದೆನು. ಸ್ಫೋಟಕವನ್ನು ಮೋಟಾರ್‍ಗೆ ಜೋಡಿಸಿದ್ದೆ. ನಾನು ಬಟನ್ ಒತ್ತಿದ ತಕ್ಷಣ ಅದು ಸ್ಫೋಟಗೊಂಡಿದೆ ಎಂದು ಹೇಳಿದ್ದಾನೆ. ಅದೇ ಪೆÇಲೀಸರು ವಿಚಾರಣೆ ನಡೆಸಿದಾಗ ಪಾತಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಇದೀಗ ಪ್ರಕರಣದ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಜಿಎಸ್‍ಟಿ ನೋಟಿಸ್‌ನಲ್ಲಿ ಮೊತ್ತ ನೋಡಿ ಶಾಕ್ ಆದ ದಂಪತಿ!