ದಾವಣಗೆರೆ | ಪತ್ನಿಯ ಅಕ್ರಮ ಸಂಬಂಧಕ್ಕೆ ರೋಸಿ 20 ಬಾರಿ ಇರಿದು ಕೊಂದ ಪತಿ

Public TV
1 Min Read

– ಬೆಡ್‍ರೂಮ್‍ಲ್ಲಿ ಸಿಸಿ ಕ್ಯಾಮೆರಾ ಇಟ್ಟು ಸಾಕ್ಷಿ ಕಲೆ ಹಾಕಿದ್ದ ಹಂತಕ
– ಡಿವೋರ್ಸ್ ಬಳಿಕ ಮಕ್ಕಳು ಅವಳ ಪಾಲಾಗ್ತಾರೆ ಅಂತ ಹತ್ಯೆ

ದಾವಣಗೆರೆ: ಪತ್ನಿಯ (Wife) ಅನೈತಿಕ ಸಂಬಂಧಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆಗೈದ ಘಟನೆ ದಾವಣಗೆರೆಯ (Davanagere) ಕಾಡಜ್ಜಿ ಗ್ರಾಮದಲ್ಲಿ ನಡೆದಿದೆ.

ಕೊಲೆಗೈದ ಆರೋಪಿಯನ್ನು ಕಲೀಂವುಲ್ಲಾ ಎಂದು ಗುರುತಿಸಲಾಗಿದೆ. ಈತನಿಗೆ ಕಳೆದ ಐದು ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರೂ ಪತ್ನಿ ಬೇರೋಬ್ಬ ಪುರುಷನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳಂತೆ. ಈ ವಿಚಾರ ಪತಿಗೆ ಗೊತ್ತಾಗಿ ಹಿರಿಯರಿಗೆ ಹೇಳಿ ರಾಜಿ ಪಂಚಾಯಿತಿ ನಡೆಸಿದ್ದ. ಆದರೆ ಹಿರಿಯರು ಯಾರು ನಂಬಿರಲಿಲ್ಲ. ಇದನ್ನೂ ಓದಿ: ಗಾಜಿಯಾಬಾದ್‌ ಎನ್‌ಕೌಂಟರ್‌ – ಕಳ್ಳನ ಕಾಲುಮುರಿದು ಬಂಧಿಸಿದ ಮಹಿಳಾ ಪೊಲೀಸರ ತಂಡ

ಇದೇ ಕಾರಣಕ್ಕೆ ರಹಸ್ಯವಾಗಿ ಬೆಡ್‍ರೂಮ್‍ನಲ್ಲಿ ಸಿಸಿ ಕ್ಯಾಮೆರಾ ಇರಿಸಿದ್ದ. ಬಳಿಕ ಬೇರೊಬ್ಬನೊಂದಿಗೆ ಪತ್ನಿ ಇದ್ದ ಖಾಸಗಿ ವೀಡಿಯೋವನ್ನು ಇಟ್ಟುಕೊಂಡು ಡಿವೋರ್ಸ್‍ಗೆ ಅರ್ಜಿ ಹಾಕಿದ್ದ. ಮಕ್ಕಳು ತನ್ನ ಬಳಿಯೇ ಇರಬೇಕು ಎಂದು ಮನವಿ ಮಾಡಿದ್ದ. ಹಿರಿಯರು ಒಂದು ಮಗು ಅವನ ಬಳಿ ಹಾಗೂ ಇನ್ನೊಂದು ಮಗು ಮಹಿಳೆಯ ಜೊತೆ ಇರಲಿ ಎಂದು ಹೇಳಿದ್ದರು. ಅದರಂತೆ ಬಾಲನ್ಯಾಯ ಮಂಡಳಿಗೆ ಮಕ್ಕಳನ್ನು ಕೌನ್ಸಿಲಿಂಗ್‍ಗೆ ಕರೆದಿದ್ದರು. ಇನ್ನೇನೂ ಕೌನ್ಸಿಲಿಂಗ್‍ಗೆ ಹೋಗಬೇಕು ಎನ್ನುವಷ್ಟರಲ್ಲಿ ಕಲೀಂವುಲ್ಲಾ ಪತ್ನಿಗೆ 20 ಬಾರಿ ಚಾಕು ಇರಿದಿದ್ದಾನೆ.

ಬಿಡಿಸಲು ಬಂದ ಪತ್ನಿಯ ತಾಯಿಗೂ ಕೂಡ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಇಬ್ಬರನ್ನು ಬಡಾವಣೆ ಪೊಲೀಸರು ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಫಲಿಸದೆ ಪತ್ನಿ ಸಾವಿಗೀಡಾಗಿದ್ದಾಳೆ. ಅತ್ತೆಗೆ ಚಿಕಿತ್ಸೆ ಮುಂದುವರಿದಿದೆ.

ಕಲೀಂವುಲ್ಲಾ ಅತ್ತೆ ಪ್ರತಿಕ್ರಿಯಿಸಿ, ತನ್ನ ಮಗಳ ಮೇಲೆ ಆರೋಪಿ ಸುಖಾಸುಮ್ಮನೆ ಅನುಮಾನ ಪಡುತ್ತಿದ್ದ. ಅವನ ಸ್ನೇಹಿತನನ್ನು ಬಿಟ್ಟು ಪತ್ನಿಯ ಮೇಲೆ ಅತ್ಯಾಚಾರ ಮಾಡಿಸಿ, ವೀಡಿಯೋ ಮಾಡಿಕೊಂಡು ಹೆದರಿಸುತ್ತಿದ್ದ ಎಂದು ಮಗಳನ್ನು ಸಮರ್ಥಿಸಿಕೊಂಡಿದ್ದಾಳೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್

Share This Article