ಪ್ರೀತಿಸಿ ಮದುವೆಯಾದವನನ್ನು ಹತ್ಯೆಗೈದು ಅಪಘಾತದ ಕತೆ ಕಟ್ಟಿದ್ದ ಖತರ್‌ನಾಕ್ ಲೇಡಿ ಅರೆಸ್ಟ್

Public TV
1 Min Read

ತುಮಕೂರು: ಪ್ರೀತಿಸಿ ಮದುವೆಯಾದ ಪತಿಯನ್ನು (Husband) ಹತ್ಯೆಗೈದು (Murder) ಅಪಘಾತದ ಕತೆ ಕಟ್ಟಿದ್ದ ಪತ್ನಿಯನ್ನು (Wife) ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಕಲಬುರಗಿ ಮೂಲದ ಪ್ರಕಾಶ್ (30) ಎಂದು ಗುರುತಿಸಲಾಗಿದೆ. ಕೊಲೆಯಾದವನ ಪತ್ನಿ ಹರ್ಷಿತಾ ಹಾಗೂ ಸಂಬಂಧಿಗಳು ಪ್ರಕಾಶ್‌ನನ್ನು ಮಲ್ಲೆಕಾವು ಗ್ರಾಮದಲ್ಲಿ ಡ್ರ್ಯಾಗರ್‌ನಿಂದ ಇರಿದು ಹತ್ಯೆಗೈದು, ಬಳಿಕ ಅಪಘಾತ ಎಂಬಂತೆ ಬಿಂಬಿಸಿದ್ದರು. ಎದೆ ಭಾಗಕ್ಕೆ ಚುಚ್ಚಿದ ಗುರುತು ಪತ್ತೆಯಾದ ಬಳಿಕ ಪೊಲೀಸರು ಇದು ಕೊಲೆ ಎಂದು ಶಂಕಿಸಿ ತನಿಖೆ ನಡೆಸಿದಾಗ ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಕೊಲೆಯಾದವನ ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.

ಗುತ್ತಿಗೆ ಆಧಾರದ ಮೇಲೆ ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಹಾಗೂ ಹರ್ಷಿತಾ 3 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಮಗು ಕೂಡ ಇದೆ.

ಈ ಸಂಬಂಧ ಕೊರಟಗೆರೆ ಪೊಲೀಸರು ಹರ್ಷಿತಾಳನ್ನ ಬಂಧಿಸಿದ್ದಾರೆ. ಆಕೆಯ ಸಹೋದರ ಹಾಗೂ ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬಂಧಿತ ಆರೋಪಿ ಹರ್ಷಿತಾ ಸಂಬಂಧಿಯೋರ್ವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯ ಹತ್ಯೆಗೆ ಸ್ಕೆಚ್ ಹಾಕಿ, ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

Share This Article