70 ಸಾವಿರಕ್ಕೆ ಖರೀದಿಸಿದ ಪತ್ನಿಯನ್ನು ಕೊಂದು ಶವವನ್ನು ಕಾಡಲ್ಲಿ ಎಸೆದ ಪತಿ

By
2 Min Read

ನವದೆಹಲಿ: ವ್ಯಕ್ತಿಯೊಬ್ಬ ಮಹಿಳೆಯನ್ನು 70 ಸಾವಿರ ರೂ.ಗೆ ಖರೀದಿ ಮಾಡಿ, ಆಕೆಯನ್ನು ಮದುವೆಯಾದ ಬಳಿಕ ಆಕೆಯ ವರ್ತನೆಗೆ ರೋಸಿಹೋಗಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಕೃತ್ಯದ ಬಳಿಕ ವ್ಯಕ್ತಿ ಪತ್ನಿಯ ಶವವನ್ನು ಫತೇಪುರ್ ಬೇರಿಯ (Fatehpur Beri) ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಧರಂವೀರ್ ಹಾಗೂ ಕೊಲೆಗೆ ಸಹಾಯ ಮಾಡಿದ ಅರುಣ್ ಹಾಗೂ ಸತ್ಯವಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ಫತೇಪುರ್ ಬೇರಿಯ ಝೀಲ್ ಖುರ್ದ್ ಗಡಿಯ ಬಳಿಯ ಕಾಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ತಲುಪಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ವಶಪಡಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

ತನಿಖೆ ವೇಳೆ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಶನಿವಾರ ನಸುಕಿನ ಸಮಯ ಸುಮಾರು 1:40ರ ವೇಳೆಗೆ ಅನುಮಾನಾಸ್ಪದವಾಗಿ ಆಟೋ ರಿಕ್ಷಾ ಓಡಾಡಿರುವುದು ಕಂಡುಬಂದಿತ್ತು. ಆಟೋ ರಿಕ್ಷಾದ ಮಾರ್ಗವನ್ನು ಟ್ರ್ಯಾಕ್ ಮಾಡಿ, ಅದರ ನೋಂದಣಿ ಸಂಖ್ಯೆಯನ್ನು ಗುರುತಿಸಲಾಗಿತ್ತು. ಬಳಿಕ ಆಟೋ ಚಾಲಕ ಛತ್ತರ್‌ಪುರ್ ನಿವಾಸಿ ಅರುಣ್‌ನನ್ನು ಗಡಾಯಿಪುರ ಬ್ಯಾಂಡ್ ರಸ್ತೆ ಬಳಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಮೃತ ಮಹಿಳೆಯನ್ನು ಧರ್ಮವೀರ್ ಪತ್ನಿ ಸ್ವೀಟಿ ಎಂದು ಅರುಣ್ ತಿಳಿಸಿದ್ದಾನೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರೀ ಮಳೆ – ಮನೆಯೊಳಗೆ ಸಿಲುಕ್ಕಿದ್ದ 50 ಜನರ ರಕ್ಷಣೆ

ವಿಚಾರಣೆ ವೇಳೆ ಅರುಣ್, ಧರಂವೀರ್ ಹಾಗೂ ಸತ್ಯವಾನ್ ತನ್ನ ಸಂಬಂಧಿಕರಾಗಿದ್ದು, ನಂಗ್ಲೋಯಿ ನಿವಾಸಿಗಳು. ಅವರು ಸ್ವೀಟಿಯನ್ನು ಹರ್ಯಾಣದ ಗಡಿಯಲ್ಲಿ ಕತ್ತು ಹಿಸುಕಿ ಕೊಂದು ಶವವನ್ನು ಕಾಡಿನಲ್ಲಿ ಎಸೆದಿರುವುದಾಗಿ ತಿಳಿಸಿದ್ದಾನೆ. ಧರಂವೀರ್‌ಗೆ ತನ್ನ ಪತ್ನಿ ಬಗ್ಗೆ ಅಸಮಾಧಾನವಿತ್ತು. ಆಕೆ ಯಾವುದೇ ಮಾಹಿತಿಯನ್ನು ನೀಡದೇ ತಿಂಗಳುಗಟ್ಟಲೆ ಮನೆಯಿಂದ ಓಡಿಹೋಗುತ್ತಿದ್ದಳು. ಹೀಗಾಗಿ ಆಕೆಯನ್ನು ಆತ ಕೊಲೆ ಮಾಡಿದ್ದಾನೆ ಎಂದು ಅರುಣ್ ಮಾಹಿತಿ ನೀಡಿದ್ದಾನೆ.

ಮೃತ ಮಹಿಳೆಗೆ ಧರಂವೀರ್ 70,000 ರೂ. ಪಾವತಿ ಮಾಡಿ, ವಿವಾಹವಾಗಿದ್ದ. ಆಕೆ ಬಿಹಾರದ ಪಾಟ್ನಾ ಮೂಲದವಳು ಎಂಬುದನ್ನು ಮಾತ್ರ ಬಹಿರಂಗಪಡಿಸಿದ್ದು, ತನ್ನ ಪೋಷಕರ ಬಗ್ಗೆ ಅಥವಾ ಕುಟುಂಬದವರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಟ್ಟಿರಲಿಲ್ಲ ಎಂದು ಆರೋಪಿ ತಿಳಿಸಿದ್ದಾನೆ.

ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ ಆಕೆಯ ಪತಿ ಧರಂವೀರ್, ಹತ್ಯೆಗೆ ಸಹಾಯ ಮಾಡಿದ ಅರುಣ್ ಹಾಗೂ ಸತ್ಯವಾನ್‌ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದ್ದು ಪ್ರಕರಣ ಹೆಚ್ಚಿನ ತನಿಖೆಯಲ್ಲಿದೆ. ಮಹಿಳೆ ತನ್ನ ಗಂಡನ ಮನೆಯನ್ನು ತೊರೆದು ಪದೇ ಪದೇ ಎಲ್ಲಿಗೆ ಹೋಗುತ್ತಿದ್ದಳು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ಆಗಬೇಕಿದ್ದ ಹುಡುಗಿ ಕೈಕೊಟ್ಟು ಮತ್ತೊಬ್ಬನೊಂದಿಗೆ ಎಸ್ಕೇಪ್ – ಯುವಕ ಕಂಗಾಲು

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್