ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ

Public TV
1 Min Read

ಯಾದಗಿರಿ: ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿಯ ಕೊಲೆಗೈದು (Murder) ಪತಿ ಪೊಲೀಸರಿಗೆ ಶರಣಾದ ಘಟನೆ ಶಹಾಪುರ (Shahapur) ತಾಲೂಕಿನ ದೋರನಹಳ್ಳಿ (Doranahalli) ಗ್ರಾಮದಲ್ಲಿ ನಡೆದಿದೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿದ್ದರು. ಆರೋಪಿ ನಿಂಗಪ್ಪ ಮದುವೆ ನೆಪವಾಗಿ ಮನೆಗೆ ಬಂದಿದ್ದಾನೆ. ಅಲ್ಲದೆ ಮದುವೆ ವಿಚಾರವಾಗಿ ಗಲಾಟೆ ಮಾಡಿದ್ದಾನೆ. ರಾತ್ರಿ ಮಲಗಿದ್ದಾಗ ಪತ್ನಿ ಲಕ್ಷ್ಮಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ನೇರವಾಗಿ ಶಹಾಪುರ ಪೊಲೀಸ್ ಠಾಣೆಗೆ ತೆರಳಿ ತಾನೇ ಮಾಡಿದ ಕೃತ್ಯ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಆರ್‌ಎಸ್‌ಎಸ್ ಮುಖಂಡನ ಹತ್ಯೆ ಪ್ರಕರಣ – ಪಿಎಫ್‍ಐ ಸದಸ್ಯ ಅರೆಸ್ಟ್

ದಂಪತಿಗೆ 13 ವರ್ಷದ ಮತ್ತು 11 ವರ್ಷದ ಹೆಣ್ಣು ಮಕ್ಕಳಿದ್ದರು. ಲಕ್ಷ್ಮಿ ಇಬ್ಬರಿಗೂ ಮದುವೆ ಮಾಡಲು ಮುಂದಾಗಿದ್ದಳು. ದಿನಾಂಕವು ಸಹ ನಿಗದಿಯಾಗಿತ್ತು ಎಂದು ಹೇಳಲಾಗಿದೆ. ಇದಕ್ಕೆ ತೀವ್ರ ಕೋಪಗೊಂಡಿದ್ದ ಪತಿ ನಿಂಗಪ್ಪ ಆಕೆಯನ್ನು ಕೊಲೆಗೈದಿದ್ದಾನೆ.

ಈ ಬಗ್ಗೆ ಮೃತ ಲಕ್ಷ್ಮಿ ಸಹೋದರ ಶಹಾಪುರ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕೆ ಶಹಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಮೇಲೆ ಅತ್ಯಾಚಾರ, ಖಾಸಗಿ ಅಂಗಕ್ಕೆ ಕಾರದಪುಡಿ ಹಾಕಿ ವಿಕೃತಿ – ಆರೋಪಿ ಅರೆಸ್ಟ್

Share This Article