ಸದಾ ಸೆಕ್ಸ್ ಗೆ ಪೀಡಿಸುತ್ತಿದ್ದ ಪತ್ನಿಯನ್ನ ಕೊಂದ ಪತಿ

Public TV
2 Min Read

ರಾಯ್‍ಪುರ: ಸದಾ ಸೆಕ್ಸ್ ಗೆ ಪೀಡಿಸುತ್ತಿದ್ದ ಪತ್ನಿಯನ್ನು ಪತಿ ಕೊಲೆ ಮಾಡಿರುವ ವಿಚಿತ್ರ ಘಟನೆಯೊಂದು ಛತ್ತೀಸ್‍ಗಢ ರಾಜ್ಯದ ಬಿಸ್ಲಾಪುರದಲ್ಲಿ ನಡೆದಿದೆ. ಕೊಲೆಯ ಬಳಿಕ ಪತಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಆರೋಪಿ ಹೇಳುವಂತೆ ತನ್ನ ಪತ್ನಿ ನಿಮೊಫೋಮೇನಿಯಾ (ಸೆಕ್ಸ್ ನಲ್ಲಿ ಅತಿ ಆಸಕ್ತಿ) ಎಂಬ ರೋಗದಿಂದ ಬಳಲುತ್ತಿದ್ದಳು. ಹೀಗಾಗಿ ಪತ್ನಿ ಸಮಯವಲ್ಲದ ಸಮಯದಲ್ಲಿ ಪತಿ ಜೊತೆ ಸೆಕ್ಸ್ ಗಾಗಿ ಪೀಡಿಸುತ್ತಿದ್ದಳು. ಪತ್ನಿಯ ಈ ವರ್ತನೆಯಿಂದ ಬೇಸತ್ತ ಪತಿ ರಾತ್ರಿ ಕೊಲೆ ಮಾಡಿ ಮನೆಯ ಅಡುಗೆ ಕೋಣೆಯಲ್ಲಿಯೇ ಶವವನ್ನು ಹೂತಿದ್ದಾನೆ. ಬೆಳಗ್ಗೆ ತನ್ನ ತಪ್ಪಿನ ಅರಿವಾಗಿ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ ಪೊಲೀಸರು ತಿಳಿಸಿದ್ದಾರೆ.

30 ವರ್ಷದ ಆರೋಪಿಗೂ ಮತ್ತು ಮಹಿಳೆಗೆ 2011ರಲ್ಲಿಯೇ ಮದುವೆ ಆಗಿತ್ತು. ಇಬ್ಬರಿಗೂ ಐದು ವರ್ಷದ ಮಗನಿದ್ದಾನೆ. ತಾಯಿಯ ಕೊಲೆ ವೇಳೆ ಸ್ಥಳದಲ್ಲಿ ಆಕೆಯ ಮಗನೂ ಇದ್ದನು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ:  ಸೆಕ್ಸ್ ನಿರಾಕರಿಸಿದ್ದಕ್ಕೆ ಶೂ ಲೇಸ್‍ನಿಂದ ಪ್ರಿಯತಮೆಯನ್ನೇ ಕೊಂದೇಬಿಟ್ಟ!

ಕೊಲೆಯಾದ ಮಹಿಳೆ ಶಾರೀರಿಕ ಸಂಬಂಧ ಹೊಂದಲು ನನಗೆ ಕಿರುಕುಳ ನೀಡುತ್ತಿದ್ದಳು. ಒಂದು ವೇಳೆ ನಾನು ಲೈಂಗಿಕ ಕ್ರಿಯೆಗೆ ಒಪ್ಪದೇ ಇದ್ದಾಗ ಅವಾಚ್ಯ ಶಬ್ಧಗಳಿಂದ ನಿಂದಿಸುವ ಮೂಲಕ ಅಸಭ್ಯವಾಗಿ ವರ್ತಿಸುತ್ತಿದ್ದಳು ಎಂದು ಪತಿ ಹೇಳಿದ್ದಾನೆ. ಇದನ್ನೂ ಓದಿ: ಸೆಕ್ಸ್ ಗೇಮ್ ನಲ್ಲಿ ಲವ್ವರ್ ನ ಕೊಂದು ಪೀಸ್ ಪೀಸ್ ಮಾಡಿದ್ಳು- ದೇಹದ ಭಾಗವನ್ನ ಫ್ರೀಜರ್ ನಲ್ಲಿಟ್ಟು, ತಂತಿಯಲ್ಲೂ ನೇತು ಹಾಕಿದ್ಳು

ಬೆದರಿಕೆ ಹಾಕ್ತಿದ್ದಳು: ಕೆಲವೊಂದು ಸಮಯದಲ್ಲಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ರೆ ವರದಕ್ಷಿಣೆ ಕಿರುಕುಳ ಅಡಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಪತಿಗೆ ಬೆದರಿಕೆ ಹಾಕುತ್ತಿದ್ದಳು. ಪತ್ನಿಯ ಇಚ್ಚೆಯನ್ನು ಪೂರ್ಣಗೊಳಿಸಲು ಆರೋಪಿ ತನ್ನ ಸ್ನೇಹಿತರನ್ನು ಆಕೆ ಬಳಿ ಹಲವು ಬಾರಿ ಕಳುಹಿಸಿದ್ದನು. ಇದೇ ವಿಷಯಕ್ಕೆ ಆರೋಪಿ ಫ್ರೆಂಡ್ಸ್ ಸರ್ಕಲ್ ನಲ್ಲಿ ಅವಮಾನಕ್ಕೆ ಗುರಿಯಾಗಿದ್ದನು. ಇದನ್ನೂ ಓದಿ: ಸೆಕ್ಸ್ ತಿರಸ್ಕರಿಸಿದ್ದಕ್ಕೆ ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ಳು ಯುವತಿ!

ಕೊಲೆ ನಡೆದ ದಿನದಂದು ಪತ್ನಿ ತನ್ನ ಗಂಡನ ಗೆಳೆಯನೊಬ್ಬನನ್ನು ಲೈಂಗಿಕ ಕ್ರಿಯೆಗಾಗಿ ಮನೆಗೆ ಕರೆಸಿಕೊಂಡಿದ್ದಾಳೆ. ಈ ಸಂಬಂಧ ಇಬ್ಬರ ನಡುವೆ ಜೋರಾಗಿಯೇ ನಡೆದಿದೆ. ಕೋಪದಲ್ಲಿ ಪತಿ ಪತ್ನಿಯನ್ನು ಕೊಲೆ ಮಾಡಿ ಮನೆಯಲ್ಲಿ ಹೂತು ಹಾಕಿದ್ದಾನೆ. ಇದನ್ನೂ ಓದಿ: ನೀಚ ಟೆಕ್ಕಿಗೆ ಪತ್ನಿಯೇ ಬೆಡ್ ಕಾಫಿ: ವಿಕೃತಕಾಮಿಗೆ ದಿನವೆಲ್ಲ ಸೆಕ್ಸ್ ಬೇಕೇ ಬೇಕಂತೆ!

ನಿಮೊಫೋಮೇನಿಯಾದಿಂದ ಬಳಲುವ ವ್ಯಕ್ತಿ ಅಥವಾ ಮಹಿಳೆ ಲೈಂಗಿಕ ಕ್ರಿಯೆಗಾಗಿ ಹಾತೊರೆಯುತ್ತಿರುತ್ತಾರೆ. ಈ ರೋಗದಿಂದ ಬಳಲುವ ವ್ಯಕ್ತಿ ಲೈಂಗಿಕ ವಿಷಯದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡು ವಿಚಿತ್ರ ಬೇಡಿಕೆಯನ್ನು ಇಟ್ಟುಕೊಂಡಿರುತ್ತಾರೆ.

 

Share This Article
Leave a Comment

Leave a Reply

Your email address will not be published. Required fields are marked *