ಬ್ಲೂ ಫಿಲ್ಮ್ ನೋಡಿ ಅದೇ ರೀತಿ ನಡೆದುಕೋ ಎಂದು ಶಿಕ್ಷಕ ಪತಿಯಿಂದ ಪತ್ನಿಗೆ ಕಿರುಕುಳ

Public TV
2 Min Read

ಬೆಂಗಳೂರು: ಕಾಮುಕ ಪತಿಯೊಬ್ಬ ತನ್ನ ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ, ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪವೊಂದು ಕೇಳಿಬಂದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ನೆಲೆಸಿರುವ ವಸಂತ್ ಮೇಲೆ ಈ ಆರೋಪ ಬಂದಿದೆ. ವಸಂತ್ ದೊಡ್ಡಬಳ್ಳಾಪುರ ತಾಲೂಕಿನ ಉಜಿನಿ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಪತ್ನಿ ಕನಕರಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪತ್ನಿ ಕನಕ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ ಪತಿ ವಸಂತ್ ಪರಾರಿಯಾಗಿದ್ದಾನೆ. ಪತಿ ವಸಂತ್ ಮನೆಯ ಬೆಡ್ ರೂಂನಲ್ಲಿ ನೀಲಿ ಚಿತ್ರಗಳನ್ನು ತೋರಿಸಿ ಕಿರುಕುಳ ನೀಡುತ್ತಿದ್ದನು ಎಂದು ಪತ್ನಿ ಆರೋಪಿಸಿದ್ದಾರೆ.

ಪತ್ನಿಯ ಆರೋಪವೇನು?
ನಾವಿಬ್ಬರು ಪ್ರೀತಿಸಿದ್ದೆವು. ಬಳಿಕ ಕುಟುಂಬದವರು ಒಪ್ಪಿ ಮದುವೆ ಮಾಡಿಸಿದ್ದರು. ಮದುವೆ ನಂತರ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದೆವು. ಆದರೆ ನಮಗೆ ಮಕ್ಕಳಾದ ಮೇಲೆ ನಾನು ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದೆ. ಹೀಗಾಗಿ ಮನೆಯ ಜವಾಬ್ದಾರಿ ಅವರ ಮೇಲೆ ಬಿತ್ತು. ಮದುವೆ ಸಮಯದಲ್ಲಿ ಹಣ, ಒಡವೆ, ಸೈಟ್ ಕೂಡ ಕೊಟ್ಟಿದ್ದೇವೆ. ಆದರೆ ಇತ್ತೀಚೆಗೆ ಮನೆಗೆ ಸಾಮಾಗ್ರಿಗಳನ್ನು ತಂದು ಕೊಡುತ್ತಿರಲಿಲ್ಲ. ಕೇಳಿದರೆ ನಿಮ್ಮ ಅಪ್ಪನ ಮನೆಯಿಂದ ತೆಗೆದುಕೊಂಡು ಬಾ ಎಂದು ಹೇಳಿ ತುಂಬಾ ಹೊಡೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ ಮನೆಯಲ್ಲಿಯೇ ನೀಲಿ ಚಿತ್ರ ನೋಡಿ ಅದೇ ರೀತಿ ನಡೆದುಕೋ ಎಂದು ಹಿಂಸೆ ಕೊಡುತ್ತಿದ್ದಾನೆ. ವರದಕ್ಷಿಣೆ ಮತ್ತು ವಿಕೃತ ಕಾಮದಿಂದ ಈ ರೀತಿ ಹಿಂಸೆ ಕೊಡುತ್ತಿದ್ದಾನೆ. ಅವನ ವಿರುದ್ಧ ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಆದರೂ ಆತನನ್ನು ಬಂಧಿಸಿಲ್ಲ. ಹೀಗಾಗಿ ನನಗೂ ನನ್ನ ಮಕ್ಕಳಿಗೂ ನ್ಯಾಯ ಕೊಡಿಸಿ ಎಂದು ಮನವಿ ಪತ್ನಿ ಮಾಡಿಕೊಂಡಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ್ದು, ಸದ್ಯ ಪತ್ನಿ ಕನಕ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಈ ಘಟನೆ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *