ಮಹಿಳೆ ಕೊಲೆ ಮಾಡಿ ಬೈಕ್ ಅಪಘಾತವೆಂದು ಬಿಂಬಿಸಿದ ಪತಿ, ಮಾವ, ಅತ್ತೆ ಅರೆಸ್ಟ್

Public TV
1 Min Read

ಚಿಕ್ಕೋಡಿ: ಮಕ್ಕಳಾಗಿಲ್ಲ ಎಂದು ಮಹಿಳೆಯನ್ನು ಭೀಕರವಾಗಿ ಕೊಲೆ (Murder) ಮಾಡಿ ಇದು ಕೊಲೆಯಲ್ಲ ಬೈಕ್ ಅಪಘಾತವೆಂದು (Accident) ಬಿಂಬಿಸಿಸಲು ಯತ್ನಿಸಿದ‌ ಮಹಿಳೆಯ ಪತಿ, ಮಾವ, ಹಾಗೂ ಅತ್ತೆಯನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.

ಅಥಣಿ ತಾಲೂಕಿನ ಮಲಬಾದ ಗ್ರಾಮದ ರೇಣುಕಾ ಸಂತೋಷ ಹೋನಕಾಂಡೆ (27) ಮೃತ ಮಹಿಳೆಯಾಗಿದ್ದು. ಶನಿವಾರ ತಡ ರಾತ್ರಿ ಕೊಲೆ‌ ಮಾಡಿ ಅಪಘಾತವೆಂದು ಬಿಂಬಿಸಲಾಗಿತ್ತು. ಇದನ್ನೂ ಓದಿ: ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್‌ಗೆ ಟ್ವಿಸ್ಟ್ – 2 ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯ

 

ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸಂತೋಷ ಹೊನಕಾಂಡೆ, ಮಾವ ಕಾಮಣ್ಣ ಹಾಗೂ ಅತ್ತೆ ಜಯಶ್ರೀಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ನಕಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು – ಇಬ್ಬರು ಶಂಕಿತ ಉಗ್ರರ ಬಂಧನ

ಅಥಣಿಯಿಂದ ಬೈಕ್ ಮೇಲೆ ಹೊರಟಾಗ ಬೈಕ್ ಚಕ್ರಕ್ಕೆ ಸೀರೆ ಸಿಲುಕಿ ಮಹಿಳೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಹೊರಟ ಹಂತಕರನ್ನ ಸಂಶಯಾಸ್ಪದವಾಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದು ಅಪಘಾತವಲ್ಲ ಕೊಲೆ ಎಂದು ಬೆಳಕಿಗೆ ಬಂದಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article