ಹಾಸನ| ಪತ್ನಿಯನ್ನು ಕೊಂದು ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ನಾ ಪತಿ?

Public TV
1 Min Read

– ಪ್ರಸನ್ನ ಬಂಧನಕ್ಕೆ ಪತ್ನಿಯ ಸಂಬಂಧಿಕರಿಂದ ಆಗ್ರಹ

ಹಾಸನ: ‌ ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಪ್ರಕರಣಗಳು (Heart Attack Case) ಬೆಳಕಿಗೆ ಬರುತ್ತಿದ್ದಂತೆ ಪತಿಯೊಬ್ಬ ಪತ್ನಿ (Wife) ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಹೇಳಿರುವುದು ಈಗ ಭಾರೀ ಅನುಮಾನಕ್ಕೆ ಕಾರಣವಾಗಿದೆ.

ಬೇಲೂರು (Beluru) ತಾಲ್ಲೂಕಿನ ಕೆಳಲಹಳ್ಳಿ, ಗ್ರಾಮದ ಪ್ರಸನ್ನ ಮತ್ತು ಶಾರದಾ 7 ವರ್ಷದ ಹಿಂದೆ ಪ್ರೀತಿಸಿ (Love) ಮದುವೆಯಾಗಿದ್ದರು. ಅಂತರ್ಜಾತಿ ವಿವಾಹ ಹಿನ್ನೆಲೆಯಲ್ಲಿ ದಂಪತಿ ಗಬ್ಬಲಗೂಡು ಗ್ರಾಮದಲ್ಲಿ ವಾಸವಾಗಿದ್ದರು.

ದಂಪತಿ ಮಧ್ಯೆ ಪರಸ್ಪರ ಹೊಂದಾಣಿಕೆ ಇಲ್ಲದೆ ಹಲವು ಬಾರಿ ಜಗಳ ಮಾಡಿಕೊಂಡಿದ್ದರು. ಬುಧವಾರ ದಿಢೀರ್‌ ಹೃದಯಾಘಾತದಿಂದ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಶಾರದಾ ಕುಟುಂಬಸ್ಥರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಹೃದಯಾಘಾತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ ನಾಲ್ವರು ಮೊಮ್ಮಕ್ಕಳಿಗೆ ಬೈಪಾಸ್ಸರ್ಜರಿ!

 

ಈ ವಿಚಾರ ತಿಳಿಯುತ್ತಿದ್ದಂತೆ ಶಾರದಾ ಸಂಬಂಧಿಕರು ಸ್ಥಳಕ್ಕೆ ಬಂದಿದ್ದಾರೆ. ಆಕೆಯ ಪೋಷಕರಿಗೆ ಯಾವುದೇ ಹೃದಯ ಸಮಸ್ಯೆ ಇಲ್ಲ. ಪ್ರಸನ್ನ ಕೊಲೆ ಮಾಡಿ ಹೃದಯಾಘಾತ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಪೊಲೀಸರು ತನಿಖೆ ನಡೆಸಿ ಪ್ರಸನ್ನನನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೋವಿಶೀಲ್ಡ್ಲಸಿಕೆ ಸುರಕ್ಷಿತವಾಗಿದೆ, ಹಠಾತ್‌ ಸಾವಿಗೆ ಸಂಬಂಧವಿಲ್ಲ: ಸೀರಮ್‌ ಇನ್‌ಸ್ಟಿಟ್ಯೂಟ್‌

ಹಳೇಬಿಡು ಪೊಲೀಸರು ಈಗ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸಲು ಆರಂಭಿಸಿದ್ದಾರೆ. ಶಾರದಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

Share This Article